Viral News: ಬಿಜೆಪಿ ಮುಖಂಡನ ಪುತ್ರಿಯ ಜೊತೆ ಮುಸ್ಲಿಂ ಯುವಕನ ಮದುವೆ! ವೈರಲ್ ಆಯ್ತು ಆಮಂತ್ರಣ ಪತ್ರಿಕೆ!

ಉತ್ತರಾಖಂಡ್‌: ಮುಸ್ಲಿಂ ಯುವಕನೊಂದಿಗೆ ಬಿಜೆಪಿ ಮುಖಂಡರ ಮಗಳೊಬ್ಬಳ ವಿವಾಹ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಭಾರೀ ಸದ್ದು ಮಾಡ್ತಿದೆ.

  • News18 Kannada
  • |
  •   | Uttarakhand (Uttaranchal), India
First published:

  • 17

    Viral News: ಬಿಜೆಪಿ ಮುಖಂಡನ ಪುತ್ರಿಯ ಜೊತೆ ಮುಸ್ಲಿಂ ಯುವಕನ ಮದುವೆ! ವೈರಲ್ ಆಯ್ತು ಆಮಂತ್ರಣ ಪತ್ರಿಕೆ!

    ಹೌದು.. ಉತ್ತರಾಖಂಡ್‌ ರಾಜ್ಯದ ಪೌರಿ ಪ್ರದೇಶದ ಬಿಜೆಪಿ ಮುಖಂಡ, ಮಾಜಿ ಶಾಸಕ ಯಶ್‌ ಪಾಲ್‌ ಬೇನಾಮ್‌ ಅವರ ಪುತ್ರಿ ಮುಸ್ಲಿಂ ಯುವಕನ ಜೊತೆಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇವರಿಬ್ಬರ ವಿವಾಹ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    MORE
    GALLERIES

  • 27

    Viral News: ಬಿಜೆಪಿ ಮುಖಂಡನ ಪುತ್ರಿಯ ಜೊತೆ ಮುಸ್ಲಿಂ ಯುವಕನ ಮದುವೆ! ವೈರಲ್ ಆಯ್ತು ಆಮಂತ್ರಣ ಪತ್ರಿಕೆ!

    ಯಾವಾಗಲೂ ಲವ್ ಜಿಹಾದ್ ಕುರಿತು ವಿರೋಧ ವ್ಯಕ್ತಪಡಿಸುವ ಬಿಜೆಪಿ ನಾಯಕರುಗಳ ಪೈಕಿ ಇದೀಗ ಬಿಜೆಪಿ ಮುಖಂಡನೇ ಮುಸ್ಲಿಂ ಯುವಕನೊಂದಿಗೆ ತಮ್ಮ ಮಗಳನ್ನು ಮದುವೆ ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 37

    Viral News: ಬಿಜೆಪಿ ಮುಖಂಡನ ಪುತ್ರಿಯ ಜೊತೆ ಮುಸ್ಲಿಂ ಯುವಕನ ಮದುವೆ! ವೈರಲ್ ಆಯ್ತು ಆಮಂತ್ರಣ ಪತ್ರಿಕೆ!

    ಸಂಘ ಪರಿವಾರದ ಕಾರ್ಯಕರ್ತರು ಮತ್ತು ಹಿಂದುತ್ವವಾದಿಗಳು ಮಾಜಿ ಶಾಸಕನ ಇಬ್ಬಗೆ ನೀತಿಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದು, ಕಾರ್ಯಕರ್ತರಿಗೆ ಲವ್ ಜಿಹಾದ್ ಬಗ್ಗೆ ಬೋಧಿಸುವ ನೀವು, ತಮ್ಮ ಫ್ಯಾಮಿಲಿ ವಿಚಾರದಲ್ಲಿ ಮಾಡ್ತಿರೋದೇನು ಎಂದು ಪ್ರಶ್ನಿಸಿದ್ದಾರೆ.

    MORE
    GALLERIES

  • 47

    Viral News: ಬಿಜೆಪಿ ಮುಖಂಡನ ಪುತ್ರಿಯ ಜೊತೆ ಮುಸ್ಲಿಂ ಯುವಕನ ಮದುವೆ! ವೈರಲ್ ಆಯ್ತು ಆಮಂತ್ರಣ ಪತ್ರಿಕೆ!

    ಅಲ್ಲದೇ, ಬೇರೆಯವರು ಮುಸ್ಲಿಂ ಯುವಕನನ್ನು ವಿವಾಹವಾದರೆ ಲವ್‌ ಜಿಹಾದ್‌ ಎಂದು ನೀವು ವಿರೋಧ ವ್ಯಕ್ತಪಡಿಸುತ್ತೀರಿ. ನಿಮ್ಮ ಮನೆಯ ಮಕ್ಕಳು ಮುಸ್ಲಿಮರನ್ನು ಮದುವೆಯಾದರೆ ಅದು ಲವ್ ಜಿಹಾದ್ ಆಗೋದಿಲ್ಲವೇ ಎಂದು ಕೇಳಿದ್ದಾರೆ.

    MORE
    GALLERIES

  • 57

    Viral News: ಬಿಜೆಪಿ ಮುಖಂಡನ ಪುತ್ರಿಯ ಜೊತೆ ಮುಸ್ಲಿಂ ಯುವಕನ ಮದುವೆ! ವೈರಲ್ ಆಯ್ತು ಆಮಂತ್ರಣ ಪತ್ರಿಕೆ!

    ಒಂದೆಡೆ ಲವ್ ಜಿಹಾದ್ ಬಗ್ಗೆ ಸಾರುವ ದಿ ಕೇರಳ ಸ್ಟೋರಿ ಸಿನಿಮಾ ದೇಶದಾದ್ಯಂತ ಭಾರೀ ಸುದ್ದಿಯಾಗ್ತಿದೆ. ಅಲ್ಲಲ್ಲಿ ಹಿಂದುತ್ವಪರ ಸಂಘಟನೆಗಳು ಉಚಿತವಾಗಿ ಈ ಸಿನಿಮಾವನ್ನು ಪ್ರದರ್ಶನ ಮಾಡ್ತಿದ್ದಾರೆ.

    MORE
    GALLERIES

  • 67

    Viral News: ಬಿಜೆಪಿ ಮುಖಂಡನ ಪುತ್ರಿಯ ಜೊತೆ ಮುಸ್ಲಿಂ ಯುವಕನ ಮದುವೆ! ವೈರಲ್ ಆಯ್ತು ಆಮಂತ್ರಣ ಪತ್ರಿಕೆ!

    ಇಂತಹ ಬಿಸಿಬಿಸಿ ಚರ್ಚೆಯ ಮಧ್ಯೆಯೇ ಬಿಜೆಪಿಯ ಮಾಜಿ ಶಾಸಕನೊಬ್ಬ ತನ್ನ ಮಗಳನ್ನು ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡ್ತಿರೋದು ನೆಟ್ಟಿಗರಿಗೆ ಆಹಾರ ಕೊಟ್ಟಂತಾಗಿದೆ.

    MORE
    GALLERIES

  • 77

    Viral News: ಬಿಜೆಪಿ ಮುಖಂಡನ ಪುತ್ರಿಯ ಜೊತೆ ಮುಸ್ಲಿಂ ಯುವಕನ ಮದುವೆ! ವೈರಲ್ ಆಯ್ತು ಆಮಂತ್ರಣ ಪತ್ರಿಕೆ!

    ಮೇ 28ರಂದು ಮಾಜಿ ಶಾಸಕನ ಪುತ್ರಿಯ ವಿವಾಹ ನಡೆಯಲಿದ್ದು, ಈ ವಿವಾಹ ಸಮಾರಂಭಕ್ಕೆ ಸ್ಥಳೀಯ ಬಿಜೆಪಿ ಹಾಗೂ ಕಾಂಗ್ರೆಸ್‌ ಮುಖಂಡರನ್ನು ಕೂಡ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.

    MORE
    GALLERIES