Tirumala: ಮದ್ಯ, ಮಾಂಸ ನಿಷೇಧವಿರುವ ತಿರುಮಲದಲ್ಲಿ ಇದೆಂಥಾ ಅಕ್ರಮ!

ಈ ಘಟನೆಯನ್ನು ಇಲ್ಲಿಗೇ ಬಿಡುವುದಿಲ್ಲ. ಈ ಕುರಿತು ಪೊಲೀಸ್ ದೂರು ದಾಖಲಿಸುತ್ತೇನೆ ಎಂದು ಬಿಜೆಪಿ ವಕ್ತಾರ ಭಾನುಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ. 

 • Local18
 • |
 •   | Andhra Pradesh, India
First published:

 • 17

  Tirumala: ಮದ್ಯ, ಮಾಂಸ ನಿಷೇಧವಿರುವ ತಿರುಮಲದಲ್ಲಿ ಇದೆಂಥಾ ಅಕ್ರಮ!

  ಕಲಿಯುಗದ ವೈಕುಂಠ ಎಂದೇ ಭಕ್ತರಿಂದ ಕರೆಯಲ್ಪಡುವ ಪವಿತ್ರ ಕ್ಷೇತ್ರ ತಿರುಮಲದ ಭಕ್ತರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ತಿರುಮಲದ ಪಾವಿತ್ರ್ಯ ಹಾಳು ಮಾಡುವ ಅಕ್ರಮ ಚಟುವಟಿಕೆ ನಡೆಯುತ್ತಿರುವ ಕುರಿತು ದೂರು ಕೇಳಿಬಂದಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Tirumala: ಮದ್ಯ, ಮಾಂಸ ನಿಷೇಧವಿರುವ ತಿರುಮಲದಲ್ಲಿ ಇದೆಂಥಾ ಅಕ್ರಮ!

  ತಿರುಮಲ ತಿರುಪತಿಗೆ ಗಾಂಜಾ ಸರಬರಾಜಾಗುತ್ತಿದೆ ಎಂದು ಬಿಜೆಪಿ ವಕ್ತಾರ ಭಾನುಪ್ರಕಾಶ್ ರೆಡ್ಡಿ ಆರೋಪಿಸಿದ್ದಾರೆ. ಮಾರ್ಚ್ 26ರಂದು ಬೆಳಗ್ಗೆ ತಿಮ್ಮಪ್ಪನ ದರ್ಶನ ಪಡೆದು ಪಾರ್ಥನೆ ಸಲ್ಲಿಸಿದ ಅವರು ಈ ಶಾಕಿಂಗ್ ಆರೋಪ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Tirumala: ಮದ್ಯ, ಮಾಂಸ ನಿಷೇಧವಿರುವ ತಿರುಮಲದಲ್ಲಿ ಇದೆಂಥಾ ಅಕ್ರಮ!

  ಅಷ್ಟೇ ಅಲ್ಲ, ತಿರುಮಲದ ಭದ್ರತಾ ವ್ಯವಸ್ಥೆಯನ್ನು ಗಾಳಿಗೆ ತೂರಲಾಗಿದೆ. ಟಿಟಿಡಿಯ ಭದ್ರತಾ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ವಕ್ತಾರ ಭಾನುಪ್ರಕಾಶ್ ರೆಡ್ಡಿ ದೂರಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Tirumala: ಮದ್ಯ, ಮಾಂಸ ನಿಷೇಧವಿರುವ ತಿರುಮಲದಲ್ಲಿ ಇದೆಂಥಾ ಅಕ್ರಮ!

  ಟಿಟಿಡಿ ವಿಜಿಲೆನ್ಸ್ ಸಿಬ್ಬಂದಿ ಸೂಕ್ತ ತಪಾಸಣೆ ಮಾಡುತ್ತಿಲ್ಲ. ನಿಷೇಧಿತ ಸರಕುಗಳು ತಿರುಮಲಕ್ಕೆ ಸಾಗಾಟಗೊಳ್ಳುತ್ತಿದೆ. ಟಿಟಿಡಿಯ ಕೆಲವು ಅಧಿಕಾರಿಗಳು ಈ ವಿಷಯ ಗೊತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Tirumala: ಮದ್ಯ, ಮಾಂಸ ನಿಷೇಧವಿರುವ ತಿರುಮಲದಲ್ಲಿ ಇದೆಂಥಾ ಅಕ್ರಮ!

  ತಿರುಮಲದಲ್ಲಿ ಮದ್ಯ, ಮಾಂಸ, ಸಿಗರೇಟ್ ಮತ್ತು ಗುಟ್ಕಾ ಬಳಕೆಯನ್ನು ಟಿಟಿಡಿ ನಿಷೇಧಿಸಿದೆ. ಆಗಮಿಸುವ ಭಕ್ತರನ್ನು ಅಲಿಪಿರಿಯ ಬಳಿಯೇ ತಪಾಸಣೆ ಮಾಡಿ ಮುಂದೆ ಬಿಡಲಾಗುತ್ತದೆ. ಆದರೂ ತಿರುಮಲದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗುತ್ತಿವೆ ಎಂಬುದು ಅವರ ಆರೋಪವಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Tirumala: ಮದ್ಯ, ಮಾಂಸ ನಿಷೇಧವಿರುವ ತಿರುಮಲದಲ್ಲಿ ಇದೆಂಥಾ ಅಕ್ರಮ!

  ಈ ಘಟನೆಯನ್ನು ಇಲ್ಲಿಗೇ ಬಿಡುವುದಿಲ್ಲ. ಈ ಕುರಿತು ಪೊಲೀಸ್ ದೂರು ದಾಖಲಿಸುತ್ತೇನೆ. ತಿರುಮಲಕ್ಕೆ ಗಾಂಜಾ ಸಾಗಣೆ ಸಂಪೂರ್ಣವಾಗಿ ನಿಲ್ಲಬೇಕು. ಈ ಕುರಿತು ಸಂಪೂರ್ಣ ತನಿಖೆ ನಡೆಯಬೇಕು ಎಂದು ಬಿಜೆಪಿ ವಕ್ತಾರ ಭಾನುಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Tirumala: ಮದ್ಯ, ಮಾಂಸ ನಿಷೇಧವಿರುವ ತಿರುಮಲದಲ್ಲಿ ಇದೆಂಥಾ ಅಕ್ರಮ!

  2023 ಫೆಬ್ರವರಿ 24 ರಂದು, ತಿರುಮಲ ಜಿಎನ್​ಸಿ ಟೋಲ್​ ಗೇಟ್​ನಲ್ಲಿ ತರಕಾರಿ ವಾಹನದಲ್ಲಿ 200 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಈ ಘಟನೆ ಮಾಸುವ ಮುನ್ನ ಶುಕ್ರವಾರ ವೈಕುಂಠಂ ಕ್ಯೂ ಕಾಂಪ್ಲೆಕ್ಸ್​ನ ಲಗೇಜ್ ಕೌಂಟರ್​ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವ ವ್ಯಕ್ತಿಯಿಂದ 150 ಗ್ರಾಂ ಗಾಂಜಾ ಪ್ಯಾಕೆಟ್​ಗಳನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES