Bizarre Laws: ಈ ದೇಶಗಳಲ್ಲಿ ಚುಂಬಿಸಿದರೆ, ಸೆಲ್ಫಿ ಕ್ಲಿಕ್ಕಿಸಿದ್ರೆ ಭಾರೀ ದಂಡ! ಹೈ ಹೀಲ್ಸ್​ ಧರಿಸಿದ್ರೂ ಬೀಳುತ್ತೆ ಫೈನ್!

Bizarre Laws in Tourist Destinations: ಪ್ರವಾಸಿಗರು ಪ್ರಪಂಚದ ವಿವಿಧ ದೇಶಗಳಿಗೆ ಸುತ್ತಲೂ ಬಯಸುತ್ತಾರೆ. ಆದರೆ ಅಂತಹವರು ಕೆಲವು ದೇಶಗಳಲ್ಲಿ ವಿಚಿತ್ರ ಕಾನೂನುಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಜೈಲು ಸೇರಬೇಕಾಗುತ್ತದೆ.

First published:

  • 17

    Bizarre Laws: ಈ ದೇಶಗಳಲ್ಲಿ ಚುಂಬಿಸಿದರೆ, ಸೆಲ್ಫಿ ಕ್ಲಿಕ್ಕಿಸಿದ್ರೆ ಭಾರೀ ದಂಡ! ಹೈ ಹೀಲ್ಸ್​ ಧರಿಸಿದ್ರೂ ಬೀಳುತ್ತೆ ಫೈನ್!

    ಪ್ರವಾಸವನ್ನು ಇಷ್ಟಪಡುವವರು ಪ್ರಪಂಚದ ವಿವಿಧ ದೇಶಗಳನ್ನು ಸುತ್ತುತ್ತಾರೆ. ಆದರೆ ಕೆಲವು ದೇಶಗಳಲ್ಲಿ ವಿಚಿತ್ರ ಕಾನೂನುಗಳು ಪ್ರವಾಸಿಗರಿಗೆ ತಲೆನೋವು ತರುವುದು ಖಚಿತ. ಆದಾಗ್ಯೂ, ಆ ದೇಶಗಳಲ್ಲಿ, ನೀವು ಆ ಕಾನೂನುಗಳನ್ನು ಉಲ್ಲಂಘಿಸಿದರೆ ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ. ಇಲ್ಲದಿದ್ದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆ ವಿಚಿತ್ರ ಕಾನೂನುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

    MORE
    GALLERIES

  • 27

    Bizarre Laws: ಈ ದೇಶಗಳಲ್ಲಿ ಚುಂಬಿಸಿದರೆ, ಸೆಲ್ಫಿ ಕ್ಲಿಕ್ಕಿಸಿದ್ರೆ ಭಾರೀ ದಂಡ! ಹೈ ಹೀಲ್ಸ್​ ಧರಿಸಿದ್ರೂ ಬೀಳುತ್ತೆ ಫೈನ್!

    ಸ್ಪೇನ್‌ನ ಮಲಗಾ ರೆಸಾರ್ಟ್ ​ ಈ ವಿಚಿತ್ರ ಕಾನೂನುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಲ್ಲಿ ರಾತ್ರಿ ಕಳೆಯುವುದು ಬಹಳ ಜನಪ್ರಿಯವಾಗಿದೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರ ಸರಿಯಾಗಿ ಉಡುಗೆ ತೊಡದೆ ಕೂಲ್​ ಆಗಿ ಸುತ್ತಾಡುವ ವರ್ತನೆಯನ್ನು ಸ್ಥಳೀಯ ಜನರು ಇಷ್ಟಪಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಸ್ಥಳೀಯ ಆಡಳಿತವು ಪುಟ್ಟ ಬಟ್ಟೆ ಅಥವಾ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿರುವ ಜನರಿಗೆ 663 ಯೂರೋ ಅಂದರೆ 68 ಸಾವಿರ ದಂಡವನ್ನು ವಿಧಿಸಲಿದೆ. ಇಷ್ಟೇ ಅಲ್ಲ ಸ್ಪೇನ್ ನ ಟೆನೆರಿಫ್​ನಲ್ಲಿ ರಸ್ತೆಗಳಲ್ಲಿ ಓಡಾಡುವ ಪ್ರಾಣಿಗಳಿಗೆ ಆಹಾರ ನೀಡಿದರೆ 66 ಸಾವಿರದವರೆಗೆ ದಂಡ ವಿಧಿಸಬಹುದಾಗಿದೆ.

    MORE
    GALLERIES

  • 37

    Bizarre Laws: ಈ ದೇಶಗಳಲ್ಲಿ ಚುಂಬಿಸಿದರೆ, ಸೆಲ್ಫಿ ಕ್ಲಿಕ್ಕಿಸಿದ್ರೆ ಭಾರೀ ದಂಡ! ಹೈ ಹೀಲ್ಸ್​ ಧರಿಸಿದ್ರೂ ಬೀಳುತ್ತೆ ಫೈನ್!

    ಸುಂದರವಾದ ದೇಶವಾದ ಗ್ರೀಸ್‌ನ ರಾಜಧಾನಿ ಅಥೆನ್ಸ್‌ನಲ್ಲಿ ಕೆಲವು ಸ್ಥಳಗಳಲ್ಲಿ ಪ್ರವಾಸಿಗರು ಹೈ ಹೀಲ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ. ಆಕ್ರೊಪೊಲಿಸ್, ಎಪಿಡಾರಸ್ ಥಿಯೇಟರ್ ಮತ್ತು ಪೆಲೋಪೊನೀಸ್ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ಹೈ ಹೀಲ್ಸ್ ಧರಿಸಲು ಅನುಮತಿಸಲಾಗುವುದಿಲ್ಲ. ಈ ಪಾದರಕ್ಷೆಗಳು ಪ್ರಾಚೀನ ಪರಂಪರೆಗೆ ಹಾನಿಯುಂಟುಮಾಡುವ ಕಾರಣ 2009 ರಲ್ಲಿ ಈ ನಿಷೇಧವನ್ನು ಏರಲಾಗಿದೆ. ಪ್ರವಾಸಿಗರು ಮೃದುವಾದ ಅಡಿಭಾಗ ಹೊಂದಿರುವ ಶೂಸ್​ಗಳನ್ನು ಮಾತ್ರ ಧರಿಸಬೇಕು ಎಂದು ಕಾನೂನು ಮಾಡಲಾಗಿದೆ.

    MORE
    GALLERIES

  • 47

    Bizarre Laws: ಈ ದೇಶಗಳಲ್ಲಿ ಚುಂಬಿಸಿದರೆ, ಸೆಲ್ಫಿ ಕ್ಲಿಕ್ಕಿಸಿದ್ರೆ ಭಾರೀ ದಂಡ! ಹೈ ಹೀಲ್ಸ್​ ಧರಿಸಿದ್ರೂ ಬೀಳುತ್ತೆ ಫೈನ್!

    ನೀವು ಥೈಲ್ಯಾಂಡ್‌ನಲ್ಲಿ ಪ್ರಯಾಣಿಸಬೇಕೆಂದರೆ ಈ ವಿಶೇಷ ನಿಯಮವನ್ನು ನೆನಪಿಟನಲ್ಲಿಟ್ಟುಕೊಳ್ಳಬೇಕು. ಮೈಮರೆತರೆ ಅದು ನಿಮ್ಮನ್ನು 15 ವರ್ಷಗಳ ಕಾಲ ಜೈಲಿನಲ್ಲಿ ಕಳೆಯುವಂತೆ ಮಾಡುತ್ತದೆ. ಇಲ್ಲಿಗೆ ಓಡಾಡುವಾಗ ಅಕಸ್ಮಾತ್ ಥಾಯ್ಲೆಂಡ್​ನ ಕರೆನ್ಸಿ ಮೇಲೆ ಕಾಲಿಟ್ಟರೆ ನೇರವಾಗಿ ಜೈಲಿಗೆ ಹೋಗಬೇಕಾಗುತ್ತದೆ. ಇದು ಇಲ್ಲಿ ದೊಡ್ಡ ಅಪರಾಧ ಎಂದು ಪರಿಗಣಿಸಲಾಗಿದೆ.

    MORE
    GALLERIES

  • 57

    Bizarre Laws: ಈ ದೇಶಗಳಲ್ಲಿ ಚುಂಬಿಸಿದರೆ, ಸೆಲ್ಫಿ ಕ್ಲಿಕ್ಕಿಸಿದ್ರೆ ಭಾರೀ ದಂಡ! ಹೈ ಹೀಲ್ಸ್​ ಧರಿಸಿದ್ರೂ ಬೀಳುತ್ತೆ ಫೈನ್!

    ಇಟಲಿಗೆ ಭೇಟಿ ನೀಡುವವರು ಇಲ್ಲಿ ಗಂಟೆಗಟ್ಟಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಬಾರದು. ಜನಸಂದಣಿಯನ್ನು ತಪ್ಪಿಸಲು ಅಲ್ಲಿ ಹೆಚ್ಚು ಹೊತ್ತು ನಿಂತು ಫೋಟೋ ತೆಗೆಯುವವರಿಗೆ ಇಲ್ಲಿನ ನಿಯಮದ ಪ್ರಕಾರ 243 ಯೂರೋ ಅಂದರೆ 25,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ನಿಯಮವು ಬೆಳಗ್ಗೆ 10:30 ರಿಂದ ಸಂಜೆ 6 ರವರೆಗೆ ಮಾತ್ರ ಅನ್ವಯಿಸುತ್ತದೆ.

    MORE
    GALLERIES

  • 67

    Bizarre Laws: ಈ ದೇಶಗಳಲ್ಲಿ ಚುಂಬಿಸಿದರೆ, ಸೆಲ್ಫಿ ಕ್ಲಿಕ್ಕಿಸಿದ್ರೆ ಭಾರೀ ದಂಡ! ಹೈ ಹೀಲ್ಸ್​ ಧರಿಸಿದ್ರೂ ಬೀಳುತ್ತೆ ಫೈನ್!

    ಆಸ್ಟ್ರೇಲಿಯಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೇ ಜಗಳ ಅಥವಾ ವಾದದಲ್ಲಿ ತೊಡಗಿದರೆ ಭಾರೀ ದಂಡ ತೆರಬೇಕಾಗುತ್ತದೆ. ಯಾರಾದರೂ ಅಸಭ್ಯ ಭಾಷೆ ಬಳಸಿದರೆ 35 ಸಾವಿರದವರೆಗೆ ದಂಡ ತೆರಬೇಕಾಗುತ್ತದೆ. ದಕ್ಷಿಣ ಆಸ್ಟ್ರೇಲಿಯಾದಲ್ಲಿ, ಈ ದಂಡವು 68 ಸಾವಿರದವರೆಗೆ ಇರುತ್ತದೆ. ಅಲ್ಲದೆ 3 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ.

    MORE
    GALLERIES

  • 77

    Bizarre Laws: ಈ ದೇಶಗಳಲ್ಲಿ ಚುಂಬಿಸಿದರೆ, ಸೆಲ್ಫಿ ಕ್ಲಿಕ್ಕಿಸಿದ್ರೆ ಭಾರೀ ದಂಡ! ಹೈ ಹೀಲ್ಸ್​ ಧರಿಸಿದ್ರೂ ಬೀಳುತ್ತೆ ಫೈನ್!

    ದುಬೈಗೆ ಬರುವ ಪ್ರವಾಸಿಗರು ಸಾರ್ವಜನಿಕ ಸ್ಥಳಗಳಲ್ಲಿ ತಬ್ಬಿಕೊಳ್ಳುವುದು, ಚುಂಬಿಸುವುದನ್ನು ಇಲ್ಲಿಗೆ ಬರುವ ಪ್ರವಾಸಿಗರೂ ಮಾಡುವಂತಿಲ್ಲ. ವಿಶೇಷವಾಗಿ ಇಲ್ಲಿಗೆ ಬರುವ ದಂಪತಿಗಳು ಈ ವಿಷಯದಲ್ಲಿ ಕಾಳಜಿ ವಹಿಸಬೇಕು. ಇದೇ ರೀತಿ ಫ್ರಾನ್ಸ್‌ನ ರೈಲ್ವೆ ನಿಲ್ದಾಣಗಳಲ್ಲಿ ಚುಂಬನಕ್ಕೆ ನಿಷೇಧವಿದೆ. (ಎಲ್ಲಾ ಫೋಟೋಗಳು ಕೃಪೆ: Canva)

    MORE
    GALLERIES