Bitcoin ಹಾಗೂ ಕ್ರಿಪ್ಟೋ ಕರೆನ್ಸಿಯಿಂದ ಯುವಕರು ಹಾಳಾಗುವ ಸಾಧ್ಯತೆ ; ಪ್ರಧಾನಿ ಮೋದಿ ಕಳವಳ

ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಿಟ್​ಕಾಯಿನ್​ನಿಂದಾಗಿ (Bitcoin) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai ಅವರ ಸ್ಥಾನಕ್ಕೆ ಕುತ್ತು ಬರುವ ವಿಚಾರಗಳು ಕೇಳಿ ಬರುತ್ತಿವೆ. ದೇಶದಲ್ಲಿ ಸಂಚಲನ ಮೂಡಿಸಿರುವ ರಾಜ್ಯದ ಬಿಟ್​ಕಾಯಿನ್​ ಪ್ರಕರಣವನ್ನು ಪ್ರಧಾನಿ ಅಂಗಳಕ್ಕೂ ರಾಜ್ಯ ನಾಯಕರು ಕೊಂಡೊಯ್ದಿದ್ದಾರೆ. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿ, ಅವರು ಬಿಟ್​ ಕಾಯಿನ್​ ಹಗರಣದ ಕುರಿತು ಡಿಜಿಲೀಕರಣವಾಗುತ್ತಿರುವ (digitalization)ಭಾರತದಲ್ಲಿ ಕ್ರಿಪ್ಟೋಕರೆನ್ಸಿಯಾಗಲಿ ಅಥವಾ ಬಿಟ್​ಕಾಯಿನ್​ ಆಗಲಿ ಯುವಜನತೆಯನ್ನು ತಪ್ಪು ದಾರಿಗೆ ಎಳೆಯಬಾರದು.ಪ್ರಜಾಸತ್ತಾತ್ಮಕ ರಾಷ್ಟ್ರಗಳು ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವುದು ಅವಶ್ಯ ಎಂದು ಸಿಡ್ನಿ ಸಂವಾದದಲ್ಲಿ ಮಾತನಾಡಿದ್ದಾರೆ.

First published: