Lover ಭೇಟಿಗೆ ನಿತ್ಯ ಗ್ರಾಮವನ್ನು ಕತ್ತಲಲ್ಲಿ ಮುಳುಗಿಸುತ್ತಿದ್ದ ಪ್ರೇಮಿ; ವಿಷಯ ತಿಳಿದ ಗ್ರಾಮಸ್ಥರು ಮಾಡಿದ್ದೇನು ಗೊತ್ತಾ?
ತಮ್ಮ ಇಬ್ಬರ ಭೇಟಿಯ ಯಾರ ಕಣ್ಣಿಗೆ ಕಾಣದಂತೆ ಮಾಡಲು ಆತ ಇಡೀ ಗ್ರಾಮವನ್ನೇ ಕತ್ತಲಲ್ಲಿ ಮುಳುಗಿಸುತ್ತಿದ್ದ. ಪ್ರತಿನಿತ್ಯ ಸಂಜೆ ನಿರ್ಧಿಷ್ಟ ಸಮಯದಲ್ಲಿ ಎರಡು ಮೂರುಗಂಟೆಗಳ ಕಾಲ ಈತ ವಿದ್ಯುತ್ ಕಡಿತ ಮಾಡುತ್ತಿದ್ದ.
ತನ್ನ ಪ್ರಿಯತಮೆಯ ಭೇಟಿಗಾಗಿ ಇಡೀ ಗ್ರಾಮವನ್ನೇ ವ್ಯಕ್ತಿಯೊಬ್ಬ ಕತ್ತಲಲ್ಲಿ ಮುಳುಗಿಸುತ್ತಿದ್ದ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಪುರ್ನಿಯಾ ಜಿಲ್ಲೆಯ ಗಣೇಶಪುರದ ಜನರು ಪ್ರತಿನಿತ್ಯ ಸಂಜೆ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದರು. ಆದರೆ, ಈ ವಿದ್ಯುತ್ ಸಮಸ್ಯೆಗೆ ಕಾರಣ ಒಬ್ಬ ಪ್ರೇಮಿಯಾಗಿದ್ದಾನೆ.
2/ 8
ಗ್ರಾಮದ ಎಲೆಕ್ಟ್ರಿಶಿಯನ್ ಒಬ್ಬ ಅದೇ ಗ್ರಾಮದ ಹುಡುಗಿಯನ್ನು ಪ್ರೀತಿಸುತ್ತಿದ್ದ. ತನ್ನ ಪ್ರೇಯಸಿಯನ್ನು ಖಾಸಗಿಯಾಗಿ ಭೇಟಿಯಾದರೆ ಹಳ್ಳಿಯಲ್ಲಿ ಯಾರ ಕೈಗೆ ಬೇಕಾದರೂ ಸಿಕ್ಕಿ ಬೀಳಬಹುದು ಎಂದು ಆತ ಆಲೋಚಿಸಿದ ಆತನಿಗೆ ಹೊಳೆದಿದ್ದ ಐಡಿಯಾ ಮಾತ್ರ ಸೂಪರ್.
3/ 8
ತಮ್ಮ ಇಬ್ಬರ ಭೇಟಿಯ ಯಾರ ಕಣ್ಣಿಗೆ ಕಾಣದಂತೆ ಮಾಡಲು ಆತ ಇಡೀ ಗ್ರಾಮವನ್ನೇ ಕತ್ತಲಲ್ಲಿ ಮುಳುಗಿಸುತ್ತಿದ್ದ. ಪ್ರತಿನಿತ್ಯ ಸಂಜೆ ನಿರ್ಧಿಷ್ಟ ಸಮಯದಲ್ಲಿ ಎರಡು ಮೂರುಗಂಟೆಗಳ ಕಾಲ ಈತ ವಿದ್ಯುತ್ ಕಡಿತ ಮಾಡುತ್ತಿದ್ದ.
4/ 8
ಈ ವೇಳೆ ತನ್ನ ನಲೆಯೊಂದಿಗೆ ಸಂಭಾಷಣೆ ನಡೆಸಿ, ಆಕೆಯೊಂದಿಗೆ ನಿರ್ಭಿತಿಯಿಂದ ಕಾಲ ಕಳೆಯುತ್ತಿದ್ದ. ಇತ್ತ ಗ್ರಾಮದಲ್ಲಿ ದಿನನಿತ್ಯ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದ ಜನರಿಗೆ ಕರೆಂಟ್ ಹೋಗುತ್ತಿರುವುದು ವಿಚಿತ್ರವಾಗಿ ಕಂಡಿತು.
5/ 8
ಕಾರಣ ತಮ್ಮ ಹಳ್ಳಿಯಲ್ಲಿ ಮಾತ್ರ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಪಕ್ಕದ ಹಳ್ಳಿಗಳಲ್ಲಿ ದಿನ ನಿತ್ಯ ವಿದ್ಯುತ್ ಇರುವುದು ಅನುಮಾನ ಮೂಡಿಸಿತು. ಈ ಹಿನ್ನಲೆ ಇದರ ಹಿಂದಿನ ಕಾರಣ ತಿಳಿಯಲು ತನಿಖೆಗೆ ಮುಂದಾದರು.
6/ 8
ಈ ವೇಳೆ ಕರೆಂಟ್ ಕಡಿತಗೊಂಡಾಗ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಇಬ್ಬರು ಇರುವುದು ಪತ್ತೆಯಾಗಿದ್ದು, ಅದು ಆ ಪ್ರಿಯತಮ- ಪ್ರಿಯತಮೆ ಎಂಬುದು ಅರಿವಾಯಿತು.
7/ 8
ಕಡೆಗೆ ಎಲೆಕ್ಟ್ರಿಷಿಯನ್ ಹಿಡಿದು ಥಳಿಸಿದ ಗ್ರಾಮಸ್ಥರು ಕಾರಣ ಕೇಳಿದಾಗ ಅಸಲಿ ವಿಷಯ ಬಹಿರಂಗಗೊಂಡಿದೆ. ತಾವು ತನ್ನ ಪ್ರೇಯಸಿಯನ್ನು ನೋಡಲು ಬಯಸಿದಾಗ ವಿದ್ಯುತ್ ಕಡಿತಗೊಳಿಸುವುದಾಗಿ ತಿಳಿಸಿದ್ದ.
8/ 8
ಕೊನೆಗೆ ಈ ಪ್ರೇಮಿಗಳ ಕಷ್ಟ ಅರಿತ ಗ್ರಾಮದ ಮುಖಂಡರು ಅವರಿಬ್ಬರನ್ನು ಮದುವೆ ಮಾಡಿಸಿದ್ದಾರೆ. ಒಟ್ಟಿನಲ್ಲಿ ಈ ಹುಚ್ಚು ಪ್ರೇಮಿಯಿಂದ ಇಡೀ ಗ್ರಾಮದ ಜನರು ವಿದ್ಯುತ್ ಇಲಾಖೆಯನ್ನು ದೂಷಿಸುವಂತೆ ಆಗಿದ್ದು, ಸುಳ್ಳಲ್ಲ.