Milk ATM: ಮುಂಜಾನೆ ಎದ್ದು ಹಾಲು ತರಲು ಹೋಗಬೇಕೆಂಬ ಕಿರಿಕಿರಿ ಇರಲ್ಲ, ಮೊಬೈಲ್ ಮಿಲ್ಕ್​ ಎಟಿಎಂ ಮೂಲಕ ಮನೆ ಬಾಗಿಲಿಗೆ ಬರಲಿದೆ ಶುದ್ಧ ಹಾಲು!

ದೇಶದೆಲ್ಲೆಡೆ ಹಾಲಿನ ಎಟಿಎಂ ಸೇವೆ ಆರಂಭವಾಗುವ ದಿನಗಳು ಹತ್ತಿರ ಬಂದಿವೆ. ಗುಣಮಟ್ಟದ ಹಾಲು ನಿಮ್ಮ ಮನೆ ಬಳಿಗೆ ಬರಲಿದೆ. ಬಿಹಾರದ ಭಾಗಲ್ಪುರ್ ನಿವಾಸಿ ವಿನಯ್ ಕುಮಾರ್ ಅವರು ಈ ಮಿಲ್ಕ್​ ಎಟಿಎಂ ಆಲೋಚನೆಯನ್ನು ಮಾಡಿದ್ದು, ಕೃಷಿ ಮೇಳದಲ್ಲಿ ಸಾಕಷ್ಟು ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ,

First published:

  • 17

    Milk ATM: ಮುಂಜಾನೆ ಎದ್ದು ಹಾಲು ತರಲು ಹೋಗಬೇಕೆಂಬ ಕಿರಿಕಿರಿ ಇರಲ್ಲ, ಮೊಬೈಲ್ ಮಿಲ್ಕ್​ ಎಟಿಎಂ ಮೂಲಕ ಮನೆ ಬಾಗಿಲಿಗೆ ಬರಲಿದೆ ಶುದ್ಧ ಹಾಲು!

    ಪ್ರತಿಯೊಬ್ಬರೂ ಮುಂಜಾನೆ ತಮ್ಮ ಮನೆ ಬಾಗಿಲಿಗೆ ತಾಜಾ ಹಾಲನ್ನು ತರಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಜನರು ಪ್ರತಿದಿನ ಬೆಳಿಗ್ಗೆ ಹಾಲಿನ ಪ್ಯಾಕೆಟ್‌ಗಳನ್ನು ತರುವುದಕ್ಕೆ ಹತ್ತಿರದ ಹಾಲು ಮಾರಾಟಗಾರರ ಹತ್ತಿರ ಹೋಗಬೇಕು. ಇದು ಕೆಲವೊಮ್ಮೆ ಕಿರಿಕಿರಿ ಉಂಟು ಮಾಡುತ್ತದೆ. ಕೆಲವೊಮ್ಮೆ ಮನೆಯಲ್ಲಿ ಹಾಲು ತರುವ ವಿಚಾರಕ್ಕಾಗಿ ಜಗಳಗಳು ನಡೆಯುತ್ತವೆ. ಏಕೆಂದರೆ ಹೆಚ್ಚು ಜನರು ಐದು ನಿಮಿಷಗಳ ಕಾಲ ಹೆಚ್ಚು ನಿದ್ದೆ ಮಾಡಲು ಬಯಸುತ್ತಾರೆ.

    MORE
    GALLERIES

  • 27

    Milk ATM: ಮುಂಜಾನೆ ಎದ್ದು ಹಾಲು ತರಲು ಹೋಗಬೇಕೆಂಬ ಕಿರಿಕಿರಿ ಇರಲ್ಲ, ಮೊಬೈಲ್ ಮಿಲ್ಕ್​ ಎಟಿಎಂ ಮೂಲಕ ಮನೆ ಬಾಗಿಲಿಗೆ ಬರಲಿದೆ ಶುದ್ಧ ಹಾಲು!

    ದೇಶದೆಲ್ಲೆಡೆ ಹಾಲಿನ ಎಟಿಎಂ ಸೇವೆ ಆರಂಭವಾಗುವ ದಿನಗಳು ಹತ್ತಿರ ಬಂದಿವೆ. ಗುಣಮಟ್ಟದ ಹಾಲು ನಿಮ್ಮ ಮನೆ ಬಳಿಗೆ ಬಳಿಗೆ ಬರಲಿದೆ. ಬಿಹಾರದ ಭಾಗಲ್ಪುರ್ ನಿವಾಸಿ ವಿನಯ್ ಕುಮಾರ್ ಅವರು ಈ ಮಿಲ್ಕ್​ ಎಟಿಎಂ ಆಲೋಚನೆಯನ್ನು ಮಾಡಿದ್ದು, ಕೃಷಿ ಮೇಳದಲ್ಲಿ ಸಾಕಷ್ಟು ಮಟ್ಟಿಗೆ ಸುದ್ದಿಯಾಗುತ್ತಿದೆ.

    MORE
    GALLERIES

  • 37

    Milk ATM: ಮುಂಜಾನೆ ಎದ್ದು ಹಾಲು ತರಲು ಹೋಗಬೇಕೆಂಬ ಕಿರಿಕಿರಿ ಇರಲ್ಲ, ಮೊಬೈಲ್ ಮಿಲ್ಕ್​ ಎಟಿಎಂ ಮೂಲಕ ಮನೆ ಬಾಗಿಲಿಗೆ ಬರಲಿದೆ ಶುದ್ಧ ಹಾಲು!

    ಸ್ಥಳೀಯರ ಬೇಡಿಕೆಯನ್ನು ಪೂರೈಸಲು ಈ ಹಿಂದೆ ವಿನಯ್ ತನ್ನ ಅಂಗಡಿಯೊಳಗೆ ಸಣ್ಣ ಹಾಲಿನ ಎಟಿಎಂ ಸ್ಥಾಪಿಸಿದ್ದರು. ಆದರೆ ಬೇಡಿಕೆ ಹೆಚ್ಚುತ್ತಿರುವುದನ್ನು ಕಂಡ ಕೂಡಲೇ ತನ್ನ ಮಿಲ್ಕ್​ ಎಟಿಎಂಗೆ ಚಕ್ರಗಳನ್ನು ಅಳವಡಿಸಿ ಅದನ್ನು ಮೊಬೈಲ್ ಮಿಲ್ಕ್​ ಎಟಿಎಂ ಮಾಡಿಕೊಂಡಿದ್ದಾರೆ. ಮೊದಲ 100 ಗ್ರಾಹಕರಿಗೆ ಸ್ವಲ್ಪ ಸಬ್ಸಿಡಿ ದರದಲ್ಲಿ ಲೀಟರ್‌ಗೆ 50 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ ಹಾಲು ನೀಡುತ್ತಿದ್ದಾರೆ.

    MORE
    GALLERIES

  • 47

    Milk ATM: ಮುಂಜಾನೆ ಎದ್ದು ಹಾಲು ತರಲು ಹೋಗಬೇಕೆಂಬ ಕಿರಿಕಿರಿ ಇರಲ್ಲ, ಮೊಬೈಲ್ ಮಿಲ್ಕ್​ ಎಟಿಎಂ ಮೂಲಕ ಮನೆ ಬಾಗಿಲಿಗೆ ಬರಲಿದೆ ಶುದ್ಧ ಹಾಲು!

    ವಿನಯ್ ಅವರು ಈ ಹಿಂದೆ ವಿಮಾ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಕೆಲಸವನ್ನು ತೊರೆದ ನಂತರ, ಅವರು ತಮ್ಮ ಸ್ಟಾರ್ಟ್ಅಪ್ ಸಂಸ್ಥೆ ಸ್ಥಾಪಿಸಲು 1 ವರ್ಷ ಸಂಶೋಧನೆ ನಡೆಸಿದ್ದಾರೆ. ಅವರು ಎಟಿಎಂಎ ಭಾಗಲ್ಪುರ್ (ಕೃಷಿ ಸಂಸ್ಥೆ) ನಲ್ಲಿ ತರಬೇತಿಯನ್ನು ಸಹ ತೆಗೆದುಕೊಂಡಿದ್ದಾರೆ.

    MORE
    GALLERIES

  • 57

    Milk ATM: ಮುಂಜಾನೆ ಎದ್ದು ಹಾಲು ತರಲು ಹೋಗಬೇಕೆಂಬ ಕಿರಿಕಿರಿ ಇರಲ್ಲ, ಮೊಬೈಲ್ ಮಿಲ್ಕ್​ ಎಟಿಎಂ ಮೂಲಕ ಮನೆ ಬಾಗಿಲಿಗೆ ಬರಲಿದೆ ಶುದ್ಧ ಹಾಲು!

    ಈ ಮೊಬೈಲ್  ಮಿಲ್ಕ್​ ಎಟಿಎಂ ಭಾಗಲ್ಪುರ ನಗರದ ಎಲ್ಲಾ ಭಾಗಗಳಿಗೆ ಸರಿಯಾದ ಸಮಯಕ್ಕೆ ಹಾಲನ್ನು ತಲುಪಿಸುತ್ತಿದೆ. ಅವರು 35 ರೈತರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಮೊಬೈಲ್ ಮಿಲ್ಕ್​ ಎಟಿಎಂ ಭಾಗಲ್ಪುರ ನಗರದ ಎಲ್ಲಾ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಹಾಲನ್ನು ತಲುಪಿಸುತ್ತಿದ್ದಾರೆ.

    MORE
    GALLERIES

  • 67

    Milk ATM: ಮುಂಜಾನೆ ಎದ್ದು ಹಾಲು ತರಲು ಹೋಗಬೇಕೆಂಬ ಕಿರಿಕಿರಿ ಇರಲ್ಲ, ಮೊಬೈಲ್ ಮಿಲ್ಕ್​ ಎಟಿಎಂ ಮೂಲಕ ಮನೆ ಬಾಗಿಲಿಗೆ ಬರಲಿದೆ ಶುದ್ಧ ಹಾಲು!

    ಟಿವಿ ನೋಡುತ್ತಿದ್ದಾಗ ಮೊಬೈಲ್ ಮಿಲ್ಕ್​ ಎಟಿಎಂ ಪರಿಕಲ್ಪನೆ ನನಗೆ ಹೊಳೆಯಿತು ಎಂದು ವಿನಯ್ ಹೇಳಿದ್ದಾರೆ. ಬಳಿಕ ಬಿಹಾರದ ಕೃಷಿ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ತರಬೇತಿ ಪಡೆದು ಮಿಲ್ಕ್​ ಎಟಿಎಂ ಆರಂಭಿಸಿದ್ದಾಗಿ ತಿಳಿಸಿದ್ದಾರೆ. ನಮ್ಮ ಹಾಲಿನ ಎಟಿಎಂ ಮೂಲಕ ಜನರ ವಿಶ್ವಾಸಗಳಿಸಿಕೊಂಡಿದ್ದೇನೆ, ಸರಿಯಾದ ಸಮಯಕ್ಕೆ ಅವರಿಗೆ ಶುದ್ಧ ಹಾಲನ್ನು ತಲುಪಿಸುತ್ತಿರುವುದಾಗಿ ತಿಳಿಸಿದ್ದಾರೆ.

    MORE
    GALLERIES

  • 77

    Milk ATM: ಮುಂಜಾನೆ ಎದ್ದು ಹಾಲು ತರಲು ಹೋಗಬೇಕೆಂಬ ಕಿರಿಕಿರಿ ಇರಲ್ಲ, ಮೊಬೈಲ್ ಮಿಲ್ಕ್​ ಎಟಿಎಂ ಮೂಲಕ ಮನೆ ಬಾಗಿಲಿಗೆ ಬರಲಿದೆ ಶುದ್ಧ ಹಾಲು!

    ಮನೆಗಳಲ್ಲದೆ ಕೆಲವು ಹೋಟೆಲ್​ಗಳಿಗೆ ಹಾಲು ಪೂರೈಕೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಹಾಲಿನ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಮಿಲ್ಕ್​ ಎಟಿಎಂನಿಂದ ಮೊದಲು ಲೀಟರ್ ಹಾಲು 48 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಹೋಮ್ ಡೆಲಿವರಿಗೆ 52 ರೂಪಾಯಿ ತೆಗೆದುಕೊಳ್ಳಲಾಗುತ್ತಿದೆ. ಹಾಲನ್ನು 4 ಡಿಗ್ರಿ ಸೆಂಟಿಗ್ರೇಡ್​ ತಣ್ಣಗಾಗಿಸಿ ನಂತರ ಎಟಿಎಂ ಮೂಲಕ ವಿತರಿಸಲಾಗುತ್ತದೆ ಎಂದು ವಿನಯ್ ಹೇಳಿದ್ದಾರೆ. ಹಾಲಿನ ಹೊರತಾಗಿ ಮೊಸರು, ಪನೀರ್, ಬೆಣ್ಣೆಯನ್ನೂ ನಗರದ ನಿವಾಸಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

    MORE
    GALLERIES