ಪಾಟ್ನಾ : ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ಇರುವಷ್ಟು ಕ್ರೇಜ್ ಯಾವ ಕ್ರೀಡೆಗೂ ಇಲ್ಲ, ಇಲ್ಲಿ ಕ್ರಿಕೆಟ್ ಆಟವೆಂದರೆ ಕೇವಲ ಮನರಂಜನೆ ಮಾತ್ರವಲ್ಲ ಭಾವನಾತ್ಮಕವಾಗಿರುತ್ತದೆ. ಈ ಉದ್ದೇಶದಿಂದಲೇ ಡ್ರೀಮ್ ಇಲೆವೆನ್ ಎಂಬ ಪ್ಯಾಂಟಸಿ ಆಪ್ ಸೃಷ್ಟಿಯಾಗಿದ್ದು, ಇದರಲ್ಲಿ ಎರಡೂ ತಂಡಗಳನ್ನು ಸೇರಿ ಡ್ರೀಮ್ ಇಲೆವೆನ್ ಮಾಡಿ ಲಕ್ಷ, ಕೋಟಿಗಳಿಸುವ ಅವಕಾಶವನ್ನು ಕಲ್ಪಿಸಿದೆ. (ಸಾಂದರ್ಭಿಕ ಚಿತ್ರ)
ಈ ಆಟವನ್ನು ದಿನನಿತ್ಯ ಲಕ್ಷಾಂತರ ಮಂದಿ ಆಡುತ್ತಾರೆ. ಐಪಿಎಲ್ ಸೀಸನ್ ವೇಳೆ ಕೋಟ್ಯಂತರ ಜನರು ಈ ಡ್ರೀಮ್ ಇಲೆವೆನ್‌ನಲ್ಲಿ ತೊಡಗಿಕೊಂಡಿರುತ್ತಾರೆ. ಈ ಆಟಕ್ಕೆ ಕ್ರಿಕೆಟ್, ಕ್ರಿಕೆಟ್ ಆಟದ ಬಗ್ಗೆ ಸಂಪೂರ್ಣ ತಿಳಿದಿರುವವರು ಆಡಬೇಕು. ಇಲ್ಲಿ ಗೆಲ್ಲಬೇಕೆಂದರೆ ಅದೃಷ್ಟ ಪ್ರಮುಖ ಪಾತ್ರವಹಿಸುತ್ತದೆ. ಬಿಹಾರದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕನೊಬ್ಬನಿಗೆ ಆ ಅದೃಷ್ಟ ಒಲಿದು ಬಂದಿದೆ. (ಸಾಂದರ್ಭಿಕ ಚಿತ್ರ)
ನಾನು ಒಂದು ಕೋಟಿ ಗೆದ್ದಿದ್ದೇನೆ ಎಂಬುದನ್ನು ಮೊದಲು ನಂಬಲು ಸಾಧ್ಯವಾಗಲಿಲ್ಲ. ನನ್ನ ಮೊಬೈಲ್‌ಗೆ ಬಂದ ಮೆಸೇಜ್ ನೋಡಿ ಸಂತೋಷಕ್ಕೆ ಮಿತಿಯೇ ಇಲ್ಲದಂತಾಗಿತ್ತು ಎಂದು ಹೇಳಿಕೊಂಡಿದ್ದಾರೆ. ನನಗೆ ಕ್ರಿಕೆಟಿಗನಾಗುವ ಆಸೆ ಇದೆ. ಈಗ ನನಗೆ ಬಂದಿರುವ ಹಣವನ್ನು ತಂದೆಗೆ ನೀಡಿದ್ದೇನೆ. ಇದರಿಂದ ಅವರ ವ್ಯಾಪಾರವನ್ನು ದೊಡ್ಡದಾಗಿ ಮಾಡಲು ಅನುಕೂಲವಾಗಲಿದೆ. ಜೊತೆಗೆ ನನ್ನ ತಂದೆಯ ಆಸೆಯಂತೆ ಇದೇ ದುಡ್ಡಿನಲ್ಲಿ ನಾನು ಉತ್ತಮ ಕ್ರಿಕೆಟ್ ತರಬೇತಿ ಪಡೆದುಕೋಳ್ಳುತ್ತೇನೆ" ಎಂದು ಶಾನು ಕುಮಾರ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
ಬಿಹಾರದ ನವಾಡಾದ ಅಕ್ಬರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪ್ರಾ ಖುರ್ದ್ ಗ್ರಾಮದ ನಿವಾಸಿ ರಾಜು ರಾಮ್ ಎಂಬವರು ಡ್ರೀಮ್ 11ನಲ್ಲಿ ಒಂದು ಕೋಟಿ ರೂಪಾಯಿ ಗೆದ್ದಿದ್ದರು. ಈತನಿಗೆ ತೆರಿಗೆ ಕಡಿತವಾಗಿ ಇವರಿಗೆ 70 ಲಕ್ಷ ರೂ. ಸಿಕ್ಕಿತ್ತು. ಇವರಲ್ಲದೇ ಭೋಜ್ಪುರ ಜಿಲ್ಲೆಯ ಚಾರ್ಪೋಖಾರಿ ಬ್ಲಾಕ್ನ ಠಾಕುರಿ ಗ್ರಾಮದ ಯುವಕ ಸೌರಭ್ ಎಂಬಾತ 49 ರೂಪಾಯಿ ಕಂಟೆಸ್ಟ್ನಲ್ಲಿ ಒಂದು ಕೋಟಿ ಗೆದ್ದಿದ್ದರು. (ಸಾಂದರ್ಭಿಕ ಚಿತ್ರ)