Tirumala: ತಿರುಮಲ ದೇವರ ಸನ್ನಿಧಿಯಲ್ಲೇ ಬಿಗ್​​ ಸ್ಕ್ಯಾಮ್​​! ಎಂಎಲ್​​ಸಿ ವಿರುದ್ಧ ಎಫ್​​ಐಆರ್​ ದಾಖಲಿಸಿದ ಪೊಲೀಸರು

300 ರೂಪಾಯಿ ವಿಶೇಷ ಪ್ರವೇಶ ದರ್ಶನ ವಿಭಾಗದ ಅಡಿ ಆರು ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲು ಎಂಎಲ್‌ಸಿ 1 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

First published:

 • 18

  Tirumala: ತಿರುಮಲ ದೇವರ ಸನ್ನಿಧಿಯಲ್ಲೇ ಬಿಗ್​​ ಸ್ಕ್ಯಾಮ್​​! ಎಂಎಲ್​​ಸಿ ವಿರುದ್ಧ ಎಫ್​​ಐಆರ್​ ದಾಖಲಿಸಿದ ಪೊಲೀಸರು

  ತಿರುಮಲ ತಿರುಪತಿ ದೇವಸ್ಥಾನದ ಪ್ರೋಟೋಕಾಲ್ ದರ್ಶನ ವ್ಯವಸ್ಥೆಗೆ ಸಂಬಂಧಿಸಿದ ಹಗರಣ ಭಾರೀ ಚರ್ಚೆಗೆ ಕಾರಣವಾಗಿದೆ. ತಿರುಮಲ ತಿರುಪತಿ ದೇವಸ್ಥಾನ ವಿಜಿಲೆನ್ಸ್ ಮತ್ತು ಸೆಕ್ಯುರಿಟಿ ವಿಭಾಗ ಶುಕ್ರವಾರ ದರ್ಶನ ಟಿಕೆಟ್ ಮಾರಾಟಕ್ಕೆ ಸಂಬಂಧಿಸಿದಂತೆ ಪೂರ್ವ-ಪಶ್ಚಿಮ ಗೋದಾವರಿ ಶಿಕ್ಷಕ ಕ್ಷೇತ್ರದ ಎಂಎಲ್‌ಸಿ ಶೇಖ್ ಸಾಬ್ಜಿ ಮತ್ತು ಅವರ ಸಹೋದ್ಯೋಗಿಗಳನ್ನು ವಶಕ್ಕೆ ತೆಗೆದುಕೊಂಡಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 28

  Tirumala: ತಿರುಮಲ ದೇವರ ಸನ್ನಿಧಿಯಲ್ಲೇ ಬಿಗ್​​ ಸ್ಕ್ಯಾಮ್​​! ಎಂಎಲ್​​ಸಿ ವಿರುದ್ಧ ಎಫ್​​ಐಆರ್​ ದಾಖಲಿಸಿದ ಪೊಲೀಸರು

  ವಿಜಿಲೆನ್ಸ್ ವಿಂಗ್ ಅಧಿಕಾರಿಗಳ ದೂರಿನ ಮೇರೆಗೆ ತಿರುಪತಿ ಪೊಲೀಸರು ಎಂಎಲ್​​ಸಿ ಪಿಎ ವೇಣುಗೋಪಾಲ್ ಎ1, ಡೇಗರಾಜು ಎ2, ಎಂಎಲ್​​ಸಿ ಶೇಖ್ ಸಾಬ್ಜಿ ಎ3 ವಿರುದ್ಧ ಐಪಿಸಿ ಸೆಕ್ಷನ್ 420, 468, 472 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 38

  Tirumala: ತಿರುಮಲ ದೇವರ ಸನ್ನಿಧಿಯಲ್ಲೇ ಬಿಗ್​​ ಸ್ಕ್ಯಾಮ್​​! ಎಂಎಲ್​​ಸಿ ವಿರುದ್ಧ ಎಫ್​​ಐಆರ್​ ದಾಖಲಿಸಿದ ಪೊಲೀಸರು

  ಪ್ರಕರಣ ದಾಖಲಿಸಿಕೊಂಡ ಬಳಿಕ ಎಂಎಲ್​ಸಿ ಶೇಖ್ ಸಾಬ್ಜಿಗೆ ನೋಟಿಸ್ ನೀಡಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಉಳಿದಂತೆ ಆರೋಪಿ ಡೇಗರಾಜುನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಇನ್ನು ಎಂಎಲ್​​ಸಿ ಪಿಎ ವೇಣುಗೋಪಾಲ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 48

  Tirumala: ತಿರುಮಲ ದೇವರ ಸನ್ನಿಧಿಯಲ್ಲೇ ಬಿಗ್​​ ಸ್ಕ್ಯಾಮ್​​! ಎಂಎಲ್​​ಸಿ ವಿರುದ್ಧ ಎಫ್​​ಐಆರ್​ ದಾಖಲಿಸಿದ ಪೊಲೀಸರು

  300 ರೂಪಾಯಿ ವಿಶೇಷ ಪ್ರವೇಶ ದರ್ಶನ ವಿಭಾಗದ ಅಡಿ ಆರು ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲು ಎಂಎಲ್‌ಸಿ 1 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ನಕಲಿ ಆಧಾರ್ ಕಾರ್ಡ್ ಬಳಸಿ ಅಕ್ರಮವಾಗಿ ದೇವರ ದರ್ಶನ ಟಿಕೆಟ್ ಪಡೆದಿದ್ದಾರೆ ಎಂದು ಟಿಟಿಡಿ ಜಾಗೃತ ಇಲಾಖೆ ತಿಳಿಸಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 58

  Tirumala: ತಿರುಮಲ ದೇವರ ಸನ್ನಿಧಿಯಲ್ಲೇ ಬಿಗ್​​ ಸ್ಕ್ಯಾಮ್​​! ಎಂಎಲ್​​ಸಿ ವಿರುದ್ಧ ಎಫ್​​ಐಆರ್​ ದಾಖಲಿಸಿದ ಪೊಲೀಸರು

  14 ಮಂದಿಗೆ ಶಿಷ್ಟಾಚಾರದ ಅಡಿ ವಿಐಪಿ ಬ್ರೇಕ್ ದರ್ಶನ ನೀಡುವ ಕುರಿತು ಎಂಎಲ್‌ಸಿ ಅವರು ಜೆಇಒ ಕಚೇರಿಗೆ ಮುಂಗಡ ಮಾಹಿತಿ ರವಾನಿಸಿದ್ದರು ಎಂದು ಟಿಟಿಡಿ ವಿಜಿಲೆನ್ಸ್ ಇಲಾಖೆ ತಿರುಮಲ ಒನ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 68

  Tirumala: ತಿರುಮಲ ದೇವರ ಸನ್ನಿಧಿಯಲ್ಲೇ ಬಿಗ್​​ ಸ್ಕ್ಯಾಮ್​​! ಎಂಎಲ್​​ಸಿ ವಿರುದ್ಧ ಎಫ್​​ಐಆರ್​ ದಾಖಲಿಸಿದ ಪೊಲೀಸರು

  ತಿರುಮಲ ದೇಗುಲದಲ್ಲಿ ಸಾರ್ವಜನಿಕ ಪ್ರತಿನಿಧಿಯೊಬ್ಬರು ದರ್ಶನ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟಿಂಗ್‌ನಲ್ಲಿ ಸೇಲ್​ ಮಾಡಿರುವ ಪ್ರಕರಣ ಇತ್ತೀಚಿನ ದಿನಗಳಲ್ಲಿ ಇದೇ ಮೊದಲು ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 78

  Tirumala: ತಿರುಮಲ ದೇವರ ಸನ್ನಿಧಿಯಲ್ಲೇ ಬಿಗ್​​ ಸ್ಕ್ಯಾಮ್​​! ಎಂಎಲ್​​ಸಿ ವಿರುದ್ಧ ಎಫ್​​ಐಆರ್​ ದಾಖಲಿಸಿದ ಪೊಲೀಸರು

  ಸಿಕ್ಕಿ ಬಿದ್ದಿದ್ದು ಹೇಗೆ?
  ಶುಕ್ರವಾರ ಮುಂಜಾನೆ ಎಂಎಲ್​ಸಿ ಶೇಖ್ ಸಾಬ್ಜಿ ಇತರ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಭಕ್ತರು ನೀಡಿದ್ದ ಆಧಾರ್ ಕಾರ್ಡ್ ನಕಲಿ ಎಂದು ಟಿಟಿಡಿ ಜಾಗೃತ ದಳ ಪತ್ತೆ ಮಾಡಿತ್ತು. ದರ್ಶನ ಟಿಕೆಟ್‌ಗೆ ಅರ್ಜಿ ಸಲ್ಲಿಸುವಾಗ ಸಂದರ್ಭದಲ್ಲಿ ಭಕ್ತರು ನೀಡಿದ್ದ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸ ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ಸೇರಿದ್ದು ಎಂದು ತಿಳಿದು ಬಂದಿತ್ತು. (ಸಾಂದರ್ಭಿಕ ಚಿತ್ರ)

  MORE
  GALLERIES

 • 88

  Tirumala: ತಿರುಮಲ ದೇವರ ಸನ್ನಿಧಿಯಲ್ಲೇ ಬಿಗ್​​ ಸ್ಕ್ಯಾಮ್​​! ಎಂಎಲ್​​ಸಿ ವಿರುದ್ಧ ಎಫ್​​ಐಆರ್​ ದಾಖಲಿಸಿದ ಪೊಲೀಸರು

  ಈ ವೇಳೆ ಸೆಕ್ಯುರಿಟಿ ವಿಂಗ್ ಭಕ್ತರನ್ನು ಪ್ರಶ್ನೆ ಮಾಡಿದಾಗ, 500 ರೂಪಾಯಿ ಮೌಲ್ಯದ ವಿಐಪಿ ದರ್ಶನ ಟಿಕೆಟ್‌ಗಾಗಿ ಎಂಎಲ್‌ಸಿ ಶೇಖ್ ಸಾಬ್ಜಿಗೆ 1 ಲಕ್ಷ ರೂಪಾಯಿ ನೀಡಿದ್ದಾಗಿ ಅವರು ತಿಳಿಸಿದ್ದರು. ದರ್ಶನ ಟಿಕೆಟ್ ಬ್ಲಾಕ್ ಮಾರ್ಕೆಟ್​ ಮೂಲಕ ಮಾರಾಟ ಮಾಡಿ ಅವರಿಂದ ಪಡೆದ ಹಣ ಎಂಎಲ್​ಸಿ ಕಾರು ಚಾಲಕನ ಬ್ಯಾಂಕ್ ಖಾತೆಗೆ ಸೇರಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES