ಆದರೆ ಈಗ ಕಾಲ ಬದಲಾಗಿದೆ. ಸಣ್ಣ-ಪುಟ್ಟ ವಿಷಯಗಳಿಗೆ ಮದುವೆ ರದ್ಧಾಗುತ್ತವೆ. ಅದರಲ್ಲೂ ವಧು ತಾಳಿ ಕಟ್ಟುವ ವೇಳೆ, ಹಸಮಣೆಗೆ ಕೂರುವ ವೇಳೆ ಮದುವೆಯನ್ನು ನಿಲ್ಲಿಸಿರುವ ಪ್ರಕರಣಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಅದೇ ರೀತಿಯ ಒಂದು ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿ ವಧು ಹಾರ ಬದಲಾಯಿಸಿಕೊಳ್ಳುವ ಸಂದರ್ಭದಲ್ಲಿ ವರನ ಬಣ್ಣ ಮತ್ತು ವಯಸ್ಸಿನ ಅಂತರದ ಬಗ್ಗೆ ಅಸಮಾಧಾನಗೊಂಡು ಮದುವೆಯನ್ನು ನಿಲ್ಲಿಸಿದ್ದಾಳೆ.
ಇಂತದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲೂ ನಡೆದಿತ್ತು. ವಧು ಮದುವೆಗೂ ಮುನ್ನ ವರನನ್ನು ಕರೆದು ನಿನ್ನ ಬಣ್ಣ ಕಪ್ಪು, ಅಲ್ಲದೆ ಅವಿದ್ಯಾವಂತ, ನನಗೆ ನಿನ್ನನ್ನು ಮದುವೆಯಾಗಲು ಇಷ್ಟವಿಲ್ಲ. ಆದರೆ ನಾನು ಈ ಮದುವೆ ನಿಲ್ಲಿಸಿದ ಆರೋಪವನ್ನು ತೆಗೆದುಕೊಳ್ಳಲು ನಾನು ಬಯಸಲ್ಲ, ನೀನೆ ನಿಲ್ಲಿಸು, ಇಲ್ಲದಿದ್ದರೆ ಮದುವೆಯ ಮೊದಲು ಓಡಿಹೋಗುವುದಾಗಿ ಬೆದರಿಕೆ ಹಾಕಿದ್ದಾಳೆ. ನಂತರ ವರ ಮದುವೆಯನ್ನು ನಿಲ್ಲಿಸಿದ್ದಾನೆ. ವರನೇ ಮದುವೆ ನಿಲ್ಲಿಸಿದ್ದಾನೆ ಎಂದು ಗಲಾಟೆ ನಡೆದು ಕೊನೆಗೆ ಈ ಪ್ರಕರಣದ ಪೊಲೀಸ್ ಮೆಟ್ಟಿಲೇರಿತ್ತು.