ಭಾರತ್ ಬಂದ್ : ಕರ್ನಾಟಕ, ಪಶ್ಚಿಮ ಬಂಗಾಳದಲ್ಲಿ ಕಲ್ಲು ತೂರಾಟ; ಉಳಿದೆಡೆ ಮಿಶ್ರ ಪ್ರತಿಕ್ರಿಯೆ
ಕೇಂದ್ರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಭಾರತ್ ಬಂದ್ನ ಎರಡನೇ ದಿನವಾದ ಇಂದು ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವೆಡೆ ಸಾರಿಗೆ ಸಂಚಾರ ಸ್ತಬ್ಧವಾಗಿದ್ದು, ಬ್ಯಾಂಕ್ ಮತ್ತಿತರ ಸೇವೆಗಳು ಬಂದ್ ಆಗಿವೆ. ತ್ರಿಪುರಾ, ಗುಹಾವಟಿ, ಕೊಲ್ಕತ್ತಾ, ಮುಂಬೈ, ಭುವನೇಶ್ವರ್ ಮೊದಲಾದ ನಗರಗಳಲ್ಲಿ ರೈಲು ಮತ್ತು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವೆಡೆ ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.