ಆದರೆ ಶ್ರೀವಾರಿ ದರ್ಶನ ಹಾಗೂ ಬಾಡಿಗೆ ರೂಮ್ಗಳಿಗೆ ಭಕ್ತಾದಿಗಳಿಂದ ಭಾರೀ ಬೇಡಿಕೆ ಇದೆ. ಇದನ್ನೇ ದುರಪಯೋಗಪಡಿಸಿಕೊಳ್ಳುತ್ತಿರುವ ವಂಚಕರು ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ನಂತೆ ನಕಲಿ ವೆಬ್‌ಸೈಟ್ ವಿನ್ಯಾಸಗೊಳಿಸಿ ತಿಮ್ಮಪ್ಪನ ಭಕ್ತರಿಗೆ ಮೋಸ ಮಾಡುತ್ತಿದ್ದಾರೆ. (ಸಾಂಕೇತಿಕ ಚಿತ್ರ)
TTD https://tirupatibalaji.ap.gov.in/ ಹೆಸರಿನ ಅಧಿಕೃತ ವೆಬ್‌ಸೈಟ್ ಹೊಂದಿದೆ. ಇದು ಮಾತ್ರ ಒರಿಜಿನಲ್ ವೆಬ್ ಸೈಟ್ ಆಗಿದೆ. ಆದರೆ ಕೆಲ ಕಿಡಿಗೇಡಿಗಳು ಸಣ್ಣಪುಟ್ಟ ಬದಲಾವಣೆಗಳೊಂದಿಗೆ https://tirupatibalaji-ap-gov.org/ ಎಂಬ ನಕಲಿ ವೆಬ್‌ಸೈಟ್ ಸೃಷ್ಟಿಸಿದ್ದಾರೆ. ಈ ನಕಲಿ ವೆಬ್‌ಸೈಟ್ ಅನ್ನು ನಂಬಬೇಡಿ ಎಂದು ಭಕ್ತರಿಗೆ ಟಿಟಿಡಿ ಮನವಿ ಮಾಡಿದೆ. (ಸಾಂಕೇತಿಕ ಚಿತ್ರ)
ಏತನ್ಮಧ್ಯೆ, ಟಿಟಿಡಿ ಏಪ್ರಿಲ್ 25 ರಂದು ಆನ್‌ಲೈನ್‌ನಲ್ಲಿ ಮೇ ಮತ್ತು ಜೂನ್ ತಿಂಗಳ 300 ರೂಪಾಯಿಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಿದೆ. ತಿರುಮಲದಲ್ಲಿ ಬಾಡಿಗೆಗೆ ಕೊಠಡಿಗಳ ಬುಕ್ಕಿಂಗ್ ಅನ್ನು ಮರುದಿನ ತೆರೆಯಲಾಗುತ್ತದೆ. ಎರಡು ತಿಂಗಳ ಟಿಕೆಟ್‌ಗಳನ್ನು ಒಂದೇ ಬಾರಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಟಿಟಿಡಿ ತಿಳಿಸಿದೆ. (ಸಾಂಕೇತಿಕ ಚಿತ್ರ)