ಪ್ರಸ್ತುತ ಈ ಸೇವೆ ಚೆನ್ನೈ ಟು ಪುದುಚೇರಿಗೆ ಮಾತ್ರ ಒದಗಿಸಲಾಗುತ್ತಿದೆ. ವಾರಾಂತ್ಯದಲ್ಲಿ ಚೆನ್ನೈನಿಂದ ಪುದುಚೇರಿಗೆ ಒಂದು ದಿನದ ಪ್ಯಾಕೇಜ್ ಟ್ರಿಪ್ ಆಗಿದೆ. ಕ್ಯಾಟಮರನ್ ಬ್ರೂಯಿಂಗ್ ಕಂಪನಿ ಏಪ್ರಿಲ್ 22ರಂದು ಹಾಪ್ ಆನ್ ಬ್ರೀವರಿ ಟೂರ್ ಬಸ್ ಅಥವಾ ಬಿಯರ್ ಬಸ್ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಇದು ವಾರಾಂತ್ಯದಲ್ಲಿ ಚೆನ್ನೈನಿಂದ ಪುದುಚೇರಿಗೆ ಒಂದು ದಿನದ ಪ್ಯಾಕೇಜ್ ಆಗಿದೆ.
ಇನ್ನು ಪ್ರವಾಸಿಗರನ್ನು ಎಸಿ ವೋಲ್ವೋ ಬಸ್‌ನಲ್ಲಿ 35-40 ಪ್ರವಾಸಿಗರನ್ನು ಗುಂಪಾಗಿ ಸಾಗಿಸಲು ಕಂಪನಿಯು ಐಷಾರಾಮಿ ಬಸ್ ಆಪರೇಟರ್ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಐಟಿ ವೃತ್ತಿಪರರು ಮತ್ತು ಎಂಎನ್‌ಸಿ ಉದ್ಯೋಗಿಗಳು ಕಂಪನಿಯ ಪ್ರಮುಖ ಟಾರ್ಗೆಟ್ ಆಗಿದೆ. ಬಿಯರ್ ಪ್ರೇಮಿಗಳು, ಕುಡಿಯದವರು ಹಾಗೂ ಮಕ್ಕಳೊಂದಿಗೆ ಹೋಗುವ ವಯಸ್ಕರಿಗೆ ಪ್ರತ್ಯೇಕ ದರಗಳನ್ನು ನಿಗದಿಪಡಿಸಿದೆ.