ಯೋಧರು ಮಲಗಿದ್ದ ಸಮಯದಲ್ಲಿ ಸೇನಾ ಘಟಕಕ್ಕೆ ನುಗ್ಗಿದ ದುಷ್ಕರ್ಮಿಗಳು ನಾಲ್ವರು ಯೋಧರನ್ನು ಕೊಲೆ ಮಾಡಿದ್ದರು. ಘಟನೆಯಲ್ಲಿ ಸಾಗರ್ ಬನ್ನೆ (25), ಕಮಲೇಶ್ ಆರ್ (24), ಯೋಗೇಶ್‌ಕುಮಾರ್ ಜೆ (24) ಮತ್ತು ಸಂತೋಷ್ ಎಂ ನಾಗರಾಳ್ (25) ಎಂಬ ಸೈನಿಕರು ಪ್ರಾಣ ಕಳೆದುಕೊಂಡಿದ್ದರು.
2/ 7
ದುಃಖದ ಸಂಗತಿಯೆಂದರೆ ಮೃತ ಯೋಧರ ಪೈಕಿ ಸಂತೋಷ್ ಎಂ ನಾಗರಾಳ್ (25) ಅವರು ಕರ್ನಾಟಕದ ಬಾಗಲಕೋಟೆ ಮೂಲದವರು ಆಗಿದ್ದು, ಇವರು ನಾಲ್ಕು ವರ್ಷಗಳ ಹಿಂದಷ್ಟೇ ಸೇನೆಗೆ ಸೇರಿದ್ದರು.
3/ 7
ಬತಿಂಡಾ ಮಿಲಿಟರಿ ಸ್ಟೇಷನ್ ಒಳಗೆ ಬುಧವಾರ ಬೆಳಗಿನ ಜಾವ 4.35ರ ಸುಮಾರಿಗೆ ಈ ಗುಂಡಿನ ದಾಳಿ ಘಟನೆ ನಡೆದಿದ್ದು, ಈ ವೇಳೆ ಸೇನಾ ಘಟಕದ ಬ್ಯಾರಕ್‌ನಲ್ಲಿ ಯೋಧರು ನಿದ್ರಿಸುತ್ತಿದ್ದರು ಎಂದು ತಿಳಿದು ಬಂದಿದೆ.
4/ 7
ಇದೀಗ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ಬಟಿಂಡಾ ಪೊಲೀಸರು ಸೋಮವಾರ ಒಬ್ಬ ಸೈನಿಕನನ್ನು ಬಂಧಿಸಿದ್ದಾರೆ.
5/ 7
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇದೀಗ ಆ ಪೈಕಿ ಓರ್ವನನ್ನು ಪೊಲೀಸರು ಬಂಧನ ಮಾಡಿದ್ದಾರೆ.
6/ 7
ಪೊಲೀಸರ ಮಾಹಿತಿ ಪ್ರಕಾರ ಆರೋಪಿಗಳು ಬಿಳಿ ಕುರ್ತಾ ಪೈಜಾಮಾ ಧರಿಸಿದ್ದರು ಮತ್ತು ಗುಂಡಿನ ದಾಳಿ ನಡೆದ ಸಮಯದಲ್ಲಿ ರೈಫಲ್ ಮತ್ತು ಕೊಡಲಿಯನ್ನು ಹಿಡಿದಿದ್ದರು ಎಂದು ವರದಿಯಾಗಿದೆ.
7/ 7
ಗುಂಡಿನ ದಾಳಿ ನಡೆದು ನಾಲ್ವರು ಯೋಧರು ಸಾವನ್ನಪ್ಪಿ ದಿನವೇ ಸ್ಥಳೀಯ ಪೊಲೀಸರು ಇದು ಉಗ್ರರ ದಾಳಿ ಅಲ್ಲ ಎಂದು ಹೇಳಿದ್ದರು. ಇದೀಗ ಪ್ರಕರಣದಲ್ಲಿ ಸೈನಿಕನನ್ನೇ ಬಂಧನ ಮಾಡಿದ್ದಾರೆ.
First published:
17
Army Jawan Arrested: 4 ಯೋಧರ ಗುಂಡಿಟ್ಟು ಕೊಂದ ಪ್ರಕರಣದಲ್ಲಿ ಓರ್ವ ಸೈನಿಕನ ಬಂಧನ!