Online Games: ಮಹಿಳೆ ಖಾತೆಯಿಂದ 40 ಲಕ್ಷ ಎಗರಿಸಿದ ಬ್ಯಾಂಕ್ ನೌಕರ, ಕೆಲವೇ ಗಂಟೆಗಳಲ್ಲಿ ಕದ್ದ ಹಣ ಮಾಯ!

Online Casino: ಮಹಿಳೆಯೊಬ್ಬರ ಎಫ್​ಡಿ ಖಾತೆಯಿಂದ ಬರೋಬ್ಬರಿ 40 ಲಕ್ಷ ವರ್ಗಾವಣೆ ಮಾಡಿಕೊಂಡ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ, ಎಲ್ಲಾ ಹಣವನ್ನೂ ಜೂಜಿನಲ್ಲಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

First published:

  • 18

    Online Games: ಮಹಿಳೆ ಖಾತೆಯಿಂದ 40 ಲಕ್ಷ ಎಗರಿಸಿದ ಬ್ಯಾಂಕ್ ನೌಕರ, ಕೆಲವೇ ಗಂಟೆಗಳಲ್ಲಿ ಕದ್ದ ಹಣ ಮಾಯ!

    ಜನಸಾಮಾನ್ಯರು ತಾವು ಕಷ್ಟಪಟ್ಟು ದುಡಿದ ಹಣವನ್ನು ಉಳಿತಾಯ ಮತ್ತು ರಕ್ಷಣೆಗಾಗಿ ಬ್ಯಾಂಕಿನಲ್ಲಿಡುತ್ತಾರೆ. ಭವಿಷ್ಯದಲ್ಲಿ ಆ ಹಣ ಉಪಯೋಗಕ್ಕೆ ಬರುತ್ತದೆ ಎಂಬ ನಂಬಿಕೆ ಇರುತ್ತದೆ. ಬ್ಯಾಂಕ್​ಗಳು ಕೂಡ ಆದಷ್ಟು ಜನ ಸಾಮಾನ್ಯರ ಪರ ಇರಲು ಪ್ರಯತ್ನಿಸುತ್ತವೆ.

    MORE
    GALLERIES

  • 28

    Online Games: ಮಹಿಳೆ ಖಾತೆಯಿಂದ 40 ಲಕ್ಷ ಎಗರಿಸಿದ ಬ್ಯಾಂಕ್ ನೌಕರ, ಕೆಲವೇ ಗಂಟೆಗಳಲ್ಲಿ ಕದ್ದ ಹಣ ಮಾಯ!

    ಆದರೆ ಡೆಹ್ರಾಡೂನ್‌ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಬ್ಬ ಬ್ಯಾಂಕ್ ಉದ್ಯೋಗಿ ಕ್ಲೈಂಟ್ ಒಬ್ಬರು ತಾನು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ಜೂಜಿಗೆ ಬಳಸಿಕೊಂಡಿದ್ದಾನೆ. ಆನ್‌ಲೈನ್‌ನಲ್ಲಿ ಜೂಜಾಡಿದ ಬಹುತೇಕ ಹಣವನ್ನು ದುರಪಯೋಗಪಡಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

    MORE
    GALLERIES

  • 38

    Online Games: ಮಹಿಳೆ ಖಾತೆಯಿಂದ 40 ಲಕ್ಷ ಎಗರಿಸಿದ ಬ್ಯಾಂಕ್ ನೌಕರ, ಕೆಲವೇ ಗಂಟೆಗಳಲ್ಲಿ ಕದ್ದ ಹಣ ಮಾಯ!

    ಆರೋಪಿ ನಿಶಾಂತ್ ಸದನ ಡೆಹ್ರಾಡೂನ್‌ನ ಯೂನಿಯನ್ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಮಹಿಳೆಯೊಬ್ಬರ ಖಾತೆಯಿಂದ 40 ಲಕ್ಷ ಎಫ್‌ಡಿ ಹಣವನ್ನ ತನ್ನ ಪತ್ನಿ ಮತ್ತು ಇತರ ಸಂಬಂಧಿಕರ ಖಾತೆಗಳಿಗೆ ವರ್ಗಾಯಿಸಿದ್ದಾನೆ.

    MORE
    GALLERIES

  • 48

    Online Games: ಮಹಿಳೆ ಖಾತೆಯಿಂದ 40 ಲಕ್ಷ ಎಗರಿಸಿದ ಬ್ಯಾಂಕ್ ನೌಕರ, ಕೆಲವೇ ಗಂಟೆಗಳಲ್ಲಿ ಕದ್ದ ಹಣ ಮಾಯ!

    ನಿಶಾಂತ್ ಸದನಾ ಅವರು 2015 ರಿಂದ 2021 ರವರೆಗೆ ಇದೇ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ವೇಳೆ ನಿಶಾಂತ್ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಮಹಿಳೆಯ ಬ್ಯಾಂಕ್ ಖಾತೆಯಿಂದ 40 ಲಕ್ಷ ರೂ.ಗಳನ್ನು ವರ್ಗಾಯಿಸಿ ಆನ್​ಲೈನ್​ನಲ್ಲಿ ತೀನ್ ಪಟ್ಟಿ ಆಡಿ ಕಳೆದಿದ್ದಾನೆ

    MORE
    GALLERIES

  • 58

    Online Games: ಮಹಿಳೆ ಖಾತೆಯಿಂದ 40 ಲಕ್ಷ ಎಗರಿಸಿದ ಬ್ಯಾಂಕ್ ನೌಕರ, ಕೆಲವೇ ಗಂಟೆಗಳಲ್ಲಿ ಕದ್ದ ಹಣ ಮಾಯ!

    ಈ ವಿಷಯ ಪೊಲೀಸರ ಗಮನಕ್ಕೆ ಬಂದಾಗ ಪೊಲೀಸರು ತನಿಖೆ ಆರಂಭಿಸಿದ್ದು ನಿಶಾಂತ್ ಸದನ ವಿರುದ್ಧ ಸಾಕ್ಷ್ಯ ಸಿಕ್ಕಿದೆ. ನಂತರ ಡೆಹ್ರಾಡೂನ್ ಪೊಲೀಸರು ಆತನನ್ನು ನೈನಿತಾಲ್ ಜಿಲ್ಲೆಯ ಹಲ್ದ್ವಾನಿನಲ್ಲಿ ಬಂಧಿಸಿದ್ದಾರೆ.

    MORE
    GALLERIES

  • 68

    Online Games: ಮಹಿಳೆ ಖಾತೆಯಿಂದ 40 ಲಕ್ಷ ಎಗರಿಸಿದ ಬ್ಯಾಂಕ್ ನೌಕರ, ಕೆಲವೇ ಗಂಟೆಗಳಲ್ಲಿ ಕದ್ದ ಹಣ ಮಾಯ!

    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮುನ್ಸಿಪಲ್ ಕಾರ್ಪೊರೇಷನ್ ಶಾಖೆಯಲ್ಲಿ 2021 ರಲ್ಲಿ ಮಹಿಳೆಯೊಬ್ಬರ ಎಫ್‌ಡಿ ಖಾತೆಯಿಂದ 40 ಲಕ್ಷ ರೂಪಾಯಿಗಳನ್ನು ಹಿಂಪಡೆಯಲಾಗಿದೆ ಎಂದು ಡೆಹ್ರಾಡೂನ್ ಎಸ್‌ಪಿ ಸಿಟಿ ಸರಿತಾ ದೋಬಲ್ ಹೇಳಿದ್ದಾರೆ. ಬ್ಯಾಂಕ್ ತನಿಖೆ ಪೂರ್ಣಗೊಳಿಸಿದಾಗ ನಿಶಾಂತ್ ಸದನ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಬ್ಯಾಂಕಿನ ಒತ್ತಡಕ್ಕೆ ಮಣಿದು 7.5 ಲಕ್ಷ ರೂ.ಗಳನ್ನು ಹಿಂದಿರುಗಿಸಿದ್ದಾರೆ. ನಿಶಾಂತ್ ಅವರನ್ನು ಬ್ಯಾಂಕ್ ಅಮಾನತು ಮಾಡಿದೆ.

    MORE
    GALLERIES

  • 78

    Online Games: ಮಹಿಳೆ ಖಾತೆಯಿಂದ 40 ಲಕ್ಷ ಎಗರಿಸಿದ ಬ್ಯಾಂಕ್ ನೌಕರ, ಕೆಲವೇ ಗಂಟೆಗಳಲ್ಲಿ ಕದ್ದ ಹಣ ಮಾಯ!

    ಏಪ್ರಿಲ್ 25ರಂದು ನಿಶಾಂತ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಸರಿತಾ ದೋಬಲ್ ಹೇಳಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೂ ಕಳುಹಿಸಲಾಗಿದೆ.

    MORE
    GALLERIES

  • 88

    Online Games: ಮಹಿಳೆ ಖಾತೆಯಿಂದ 40 ಲಕ್ಷ ಎಗರಿಸಿದ ಬ್ಯಾಂಕ್ ನೌಕರ, ಕೆಲವೇ ಗಂಟೆಗಳಲ್ಲಿ ಕದ್ದ ಹಣ ಮಾಯ!

    ನಿಶಾಂತ್ ಅವರು ಆನ್‌ಲೈನ್ ಕ್ಯಾಸಿನೊ ಆಟಗಳನ್ನು ಆಡುವ ಅಭ್ಯಾಸವನ್ನು ಹೊಂದಿದ್ದರು ಎಂದು ವಿಚಾರಣೆಗೆ ತಿಳಿಸಿದರು. ಇದರಿಂದ ಅವನ ಎಲ್ಲಾ ಹಣ ಬಳಸಿಕೊಂಡಿದ್ದಾರೆ. ಮಹಿಳೆ ಗ್ರಾಹಕರ ನಿಶ್ಚಿತ ಠೇವಣಿ ಬಗ್ಗೆ ಅವರಿಗೆ ತಿಳಿದಿದ್ದರಿಂದ, ಎಫ್‌ಡಿಯಿಂದ .40 ಲಕ್ಷವನ್ನು ವಿತ್​ಡ್ರಾ ಮಾಡಿ ಪತ್ನಿ ಮತ್ತು ಸಂಬಂಧಿಕರ ಖಾತೆಗೆ ವರ್ಗಾಯಿಸಿಕೊಂಡಿದ್ದ ಎಂದು ತಿಳಿದುಬಂದಿದೆ.. (ಸಾಂಕೇತಿಕ ಚಿತ್ರ)

    MORE
    GALLERIES