Assam Flood: ಅಸ್ಸಾಂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ ಬೆಂಗಳೂರಿನ ಶ್ರೀಹಟ್ಟ ಸಮ್ಮೇಳನ

ಅಸ್ಸಾಂನ ಸಿಲ್ಚಾರ್ ಪ್ರದೇಶವು ಪ್ರವಾಹದಿಂದಾಗಿ ಸಂಪೂರ್ಣವಾಗಿ ನೀರಿನಿಂದ ಮುಳುಗಿಹೋಗಿದೆ. ಜನರ ಎದೆಯಮಟ್ಟದಷ್ಟು ನೀರು ತುಂಬಿಕೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿನ ಶ್ರೀ ಹಟ್ಟ ಸಮ್ಮೇಳನ ಸೇರಿದಂತೆ ಅನೇಕ ಸಂಸ್ಥೆಗಳು ಸಿಲ್ಚಾರ್ ಪ್ರದೇಶದ ಜನರಿಗೆ ಸಹಾಯ ಮಾಡುತ್ತಿದೆ.

First published:

  • 17

    Assam Flood: ಅಸ್ಸಾಂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ ಬೆಂಗಳೂರಿನ ಶ್ರೀಹಟ್ಟ ಸಮ್ಮೇಳನ

    ಭೀಕರ ಪ್ರವಾಹದಿಂದಾಗಿ ಅಸ್ಸಾಂನ ಸಿಲ್ಚಾರ್ ಪ್ರದೇಶವು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಜೂನ್ 19 2022ರ ರಾತ್ರಿ ಬರಾಕ್ ಮತ್ತು ಇತರೆ ಉಪನದಿಗಳಿಂದ ನೀರು ಹರಿದು ಬಂದಿರುವುದರಿಂದ ಸಿಲ್ಚಾರ್ ಪ್ರದೇಶದಲ್ಲಿ ಸಂಪೂರ್ಣವಾಗಿ ನೀರು ತುಂಬಿಕೊಂಡಿದೆ.

    MORE
    GALLERIES

  • 27

    Assam Flood: ಅಸ್ಸಾಂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ ಬೆಂಗಳೂರಿನ ಶ್ರೀಹಟ್ಟ ಸಮ್ಮೇಳನ

    ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದಿರುವುದರಿಂದ ಜೂನ್ 20 ರ ಹೊತ್ತಿಗೆ ನಗರ ಸಂಪೂರ್ಣವಾಗಿ ನೀರಿನಿಂದ ಮುಳುಗಿದೆ. ಅಪಾಯದ ಮಟ್ಟಕ್ಕಿಂತ ನೀರು 1,78ಮೀ ಹರಿದು ಬಂದಿದ್ದು ಸಿಲ್ಚಾರ್ ಮತ್ತು ಅದರ ಅಕ್ಕ ಪಕ್ಕದ ಪ್ರದೇಶಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

    MORE
    GALLERIES

  • 37

    Assam Flood: ಅಸ್ಸಾಂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ ಬೆಂಗಳೂರಿನ ಶ್ರೀಹಟ್ಟ ಸಮ್ಮೇಳನ

    ಸಿಲ್ಚಾರ್ ಪ್ರದೇಶದಲ್ಲಿ ನೆರೆಯ ಪರಿಣಾಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ರೈಲು, ರಸ್ತೆ ಮತ್ತು ವಾಯು ಸಂಪರ್ಕ ಕಡಿತಗೊಂಡ ಕಾರಣದಿಂದಾಗಿ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ಆಹಾರ, ಕುಡಿಯುವ ನೀರು ಮತ್ತು ವೈದ್ಯಕೀಯ ಸೌಲಭ್ಯವಿಲ್ಲದೆ ಸಿಲ್ಚಾರ್ ನಿವಾಸಿಗಳು ಅಸಹಾಯಕರಾಗಿದ್ದಾರೆ.

    MORE
    GALLERIES

  • 47

    Assam Flood: ಅಸ್ಸಾಂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ ಬೆಂಗಳೂರಿನ ಶ್ರೀಹಟ್ಟ ಸಮ್ಮೇಳನ

    ಎದೆಯಮಟ್ಟದಷ್ಟು ನೀರು ನಿಂತಿದ್ದರಿಂದ ಚಿಕ್ಕ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ತೀವ್ರ ತೊಂದರೆ ಅನುಭವಿಸಿದರು. ಕೆಲವು ಜನರು ಮನೆಯ ಮೇಲ್ಛಾವಣಿಯಲ್ಲಿ ಮತ್ತು ಮಹಡಿಗಳಲ್ಲಿ ಇದ್ದಾರೆ. ಆದರೆ ಬಡವರು ಮತ್ತು ಸಾಮಾನ್ಯ ಜನರ ಮನೆಗಳು ಸಂಪೂರ್ಣವಾಗಿ ನೀರಿನಿಂದ ತುಂಬಿಹೋಗಿದ್ದು ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ನಗರದ ಹಲವೆಡೆ ಮೃತದೇಹಗಳು ನೀರಿನಲ್ಲಿ ತೇಲುತ್ತಿದೆ.

    MORE
    GALLERIES

  • 57

    Assam Flood: ಅಸ್ಸಾಂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ ಬೆಂಗಳೂರಿನ ಶ್ರೀಹಟ್ಟ ಸಮ್ಮೇಳನ

    ಹಲವಾರು ನಾಗರಿಕ ಸಮಾಜ ಸಂಸ್ಥೆಗಳು, ವಿವಿಧ ಸರ್ಕಾರೇತರ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳು ತೊಂದರೆಯಲ್ಲಿರುವ ನಿವಾಸಿಗಳ ರಕ್ಷಣೆಗೆ ಮುಂದಾದವು ಮತ್ತು ನರೆ ಪರಿಹಾರ ನೀಡಲು ಸಹಾಯ ಮಾಡಿದರು. ಇವುಗಳಲ್ಲಿ ಬೆಂಗಳೂರಿನ ಶ್ರೀ ಹಟ್ಟಸಮ್ಮೇಳನ (ಬಿಎಸ್‌ಎಸ್) ಕೂಡ ಸೇರಿದೆ.

    MORE
    GALLERIES

  • 67

    Assam Flood: ಅಸ್ಸಾಂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ ಬೆಂಗಳೂರಿನ ಶ್ರೀಹಟ್ಟ ಸಮ್ಮೇಳನ

    ಬಿಎಸ್ ಎಸ್ ಸ್ವಯಂಸೇವಕರು ಮತ್ತು ಸ್ಥಳೀಯ ಎನ್‌ಜಿಒಗಳ ಜೊತೆಗೂಡಿ ಪ್ರವಾಹಕ್ಕೆ ಸಿಲುಕಿದ ಅನೇಕ ಕುಟುಂಬಗಳನ್ನು ರಕ್ಷಿಸಿದರು ಮತ್ತು ಹಲವಾರು ವೃದ್ಧರು ಮತ್ತು ಗರ್ಭಿಣಿಯರನ್ನು ಆಸ್ಪತ್ರೆಗೆ ತಲುಪಲು ಸಹಾಯ ಮಾಡಿದರು. ಜನರನ್ನು ರಕ್ಷಿಸುವುದರ ಜೊತೆಗೆ 1,200 ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ, ಕುಡಿಯುವ ನೀರು, ಔಷಧಗಳು ಮತ್ತು ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ವಿತರಿಸಿದೆ.

    MORE
    GALLERIES

  • 77

    Assam Flood: ಅಸ್ಸಾಂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ ಬೆಂಗಳೂರಿನ ಶ್ರೀಹಟ್ಟ ಸಮ್ಮೇಳನ

    BSS ಸ್ವಯಂಸೇವಕರು ಮತ್ತು ಎನ್‌ಜಿಒಗಳು ನಗರದ ಹೊರವಲಯದಲ್ಲಿ ಇಲ್ಲಿಯವರೆಗೆ ಮೂರು ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿವೆ, ಅಲ್ಲಿ 1,000 ಕ್ಕೂ ಹೆಚ್ಚು ಜನರು ವೈದ್ಯಕೀಯ ಆರೈಕೆ, ಔಷಧಗಳು ಮತ್ತು ಕುಡಿಯುವ ನೀರನ್ನು ಪಡೆದರು.

    MORE
    GALLERIES