Vaccination Lottery: ಒಂದು ಡೋಸ್ ವ್ಯಾಕ್ಸಿನ್ ಹಾಕಿಸಿ 1 ಮಿಲಿಯನ್ ಗೆದ್ದ ಯುವತಿ: ಅದು ಹೇಗೆ? ನೀವೇ ನೋಡಿ
Vaccination Lottery: ಆಸ್ಟ್ರೇಲಿಯಾದಲ್ಲಿ 25 ವರ್ಷದ ಜೋನ್ನೆ ಝು ಎಂಬ ಯುವತಿ ಒಂದು ಮಿಲಿಯನ್ ಆಸ್ಟ್ರೇಲಿಯನ್ ಕರೆನ್ಸಿ ಗೆದ್ದಿದ್ದಾಳೆ. ಅದು ಕೇವಲ ಒಂದು ವ್ಯಾಕ್ಸಿನೇಷನ್ ಹಾಕಿಸಿ ಅಂದರೆ ನಂಬಲು ಸಾಧ್ಯವಿಲ್ಲ ಆದರೂ ಇದು ನಿಜ.
ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂದರೆ ನಮ್ಮ ಜನ ಮೊದಲೆಲ್ಲ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಯಾವಾಗ ಈ ಕೊರೋನಾ ಅಬ್ಬರ ಹೆಚ್ಚಾಯ್ತೋ ಆಗ ಎಲ್ಲರು ಸಂಜೀವಿನಿಗಾಗಿ ಮುಗಿಬಿದ್ದರು. ಆದರೆ ಇಲ್ಲೊಬ್ಬ ಮಹಿಳೆ ವ್ಯಾಕ್ಸಿನೇಷನ್ ಹಾಕಿಸಿ ಒನ್ ಮಿಲಿಯನ್ ಎಯುಡಿ ಹಣವನ್ನು ಗೆದಿದ್ದಾಳೆ ಅದು ಹೇಗೆ ಅಂತೀರಾ? ಮುಂದೆ ನೋಡಿ
2/ 8
ಹೌದು ಆಸ್ಟ್ರೇಲಿಯಾದಲ್ಲಿ 25 ವರ್ಷದ ಜೋನ್ನೆ ಝು ಎಂಬ ಯುವತಿ ಒಂದು ಮಿಲಿಯನ್ ಆಸ್ಟ್ರೇಲಿಯನ್ ಕರೆನ್ಸಿ ಗೆದ್ದಿದ್ದಾಳೆ. ಅದು ಕೇವಲ ಒಂದು ವ್ಯಾಕ್ಸಿನೇಷನ್ ಹಾಕಿಸಿ ಅಂದರೆ ನಂಬಲು ಸಾಧ್ಯವಿಲ್ಲ ಆದರೂ ಇದು ನಿಜ.
3/ 8
ಅಕ್ಟೋಬರ್ ತಿಂಗಳಲ್ಲಿ ಈ ವ್ಯಾಕ್ಸಿನ್ ಲಾಟರಿಯನ್ನು ಅಲ್ಲಿನ ಸರ್ಕಾರ ಆಯೋಜನೆ ಮಾಡಿತ್ತು. ಇದು ವ್ಯಾಕ್ಸಿನ್ ಹಾಕಿಸಿಕೊಳ್ಳುವವರ ಸಂಖ್ಯೆಯನ್ನು ಹೆಚ್ಚಿಸಲು ಈ ರೀತಿ ಮಾಡಲಾಗಿತ್ತು. ಹಣ ಸಿಗುತ್ತೆ ಎಂದ ತಕ್ಷಣ ಸಾವಿರಾರು ಸಂಖ್ಯೆಯಲ್ಲಿ ಜನ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರು.
4/ 8
ಈ ವ್ಯಾಕ್ಸಿನೇಷನ್ ಲಾಟರಿಯಲ್ಲಿ ಜೋನ್ನೆ ಝು ಎಂಬಾಕೆ ಗೆದ್ದಿದ್ದಾಳೆ. ಲಕ್ಕಿ ಡಿಪ್ ಮೂಲಕ ವಿಜೇತರನ್ನ ಆಯ್ಕೆ ಮಾಡಲಾಗಿತ್ತು. ಜೋನ್ನೆ ಝು ಭಾರತದ ಕರೆನ್ಸಿ ಪ್ರಕಾರ 5 ಕೋಟಿಯ 49 ಲಕ್ಷ ರೂಪಾಯಿ ಹಣವನ್ನು ಗೆದ್ದಿದ್ದಾರೆ.
5/ 8
ಈ ಬಗ್ಗೆ ಜೋನ್ನೆ ಝು ಸಂತಸ ವ್ಯಕ್ತಪಡಿಸಿದ್ದಾಳೆ. ನನಗೆ ಕರೆ ಬಂದಾಗ ನಾನು ಆಫೀಸ್ನಲ್ಲಿದ್ದ ಕಾರಣ, ಸರಿಯಾಗಿ ಮಾತನಾಡಿಲ್ಲ. ಬಳಿಕ ಮನೆಗೆ ಬಂದು ಅದೇ ನಂಬರ್ಗೆ ಕರೆ ಮಾಡಿದಾಗ ಅವರು ನೀವು ಒಂದು ಮಿಲಿಯನ್ ಹಣ ಗೆದ್ದಿದ್ದೀರಾ ಅಂತ ಹೇಳಿದರು ಎಂದು ಝು ತಿಳಿಸಿದ್ದಾರೆ.
6/ 8
ಹಣ ಬಂದ ಬಳಿಕ ಜೋನ್ನೆ ಝು ತನ್ನ ಸ್ನೇಹಿತರನೆಲ್ಲ ರೆಸ್ಟೋರೆಂಟ್ಗೆ ಕರೆದುಕೊಂಡು ಹೋಗಿದ್ದಳು. ಈ ವೇಳೆ ಚೀನಾದಲ್ಲಿರುವ ತನ್ನ ಕುಟುಂಬವನ್ನು ಆಸ್ಟ್ರೇಲಿಯಾಗೆ ಶಿಫ್ಟ್ ಮಾಡುವ ಆಸೆ ಇದೆ ಎಂದು ಹೇಳಿಕೊಂಡಿದ್ದಾಳೆ.
7/ 8
ಉಳಿದ ಹಣದಲ್ಲಿ ಬ್ಯುಸಿನೆಸ್ ಮಾಡುವುದಾಗಿ ಆ ಯುವತಿ ಹೇಳಿಕೊಂಡಿದ್ದಾಳೆ. ಜೊತೆಗೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಕುಟುಂಬಗಳಿಗೆ ಸಹಾಯ ಮಾಡುವುದಾಗಿಯೂ ಹೇಳಿಕೊಂಡಿದ್ದಾಳೆ.
8/ 8
ಕೇವಲ ಒಂದು ವ್ಯಾಕ್ಸಿನ್ ಹಾಕಿಸಿಕೊಂಡ ಈ ಮಹಿಳೆ ಒಂದು ಮಿಲಿಯನ್ ಆಸ್ಟ್ರೇಲಿಯನ್ ಕರೆನ್ಸಿ ಗೆದ್ದಿರುವುದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ನಮ್ಮ ಊರಿನಲ್ಲಿ ಈ ರೀತಿ ಏನಾದರೂ ಮಾಡಿ ಜನ ಆಗ ವ್ಯಾಕ್ಸಿನ ಹಾಕಿಸಿಕೊಳ್ಳಲು ಮುಗಿ ಬಿಳುತ್ತಾರೆ ಅಂತ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.