ಅಂದಹಾಗೆಯೇ ಈ ವರ್ಷದ ಡ್ರೋನ್ ಬೆಂಗಳೂರು ಮೂಲದ ಫುಲ್ ಸ್ಟಾಕ್ ಡ್ರೋನ್ ಟೆಕ್ನಾಲಜಿ ಕಂಪನಿ ಆಸ್ಟೆರಿಯಾ ಏರೋಸ್ಪೇಸ್ ಲಿಮಿಟೆಡ್ ಡ್ರೋನ್ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿದೆ. ನಾಗರಿಕ ವಿಮಾನಯಾನ ಸಚಿವಾಲಯವು, ಭಾರತೀಯ ಡ್ರೋನ್ ಫೆಡರೇಶನ್ (ಡಿಎಫ್‌ಐ) ಈವೆಂಟ್ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಡ್ರೋನ್ ಫೆಸ್ಟಿವಲ್ 2022 ನವದೆಹಲಿಯ ಪ್ರಗತಿ ಮೈದಾನದಲ್ಲಿ ಮೇ 27 ರಿಂದ ನಡೆಯುತ್ತಿದ್ದು, ಮೇ 28 ಕ್ಕೆ ಮುಕ್ತಾಯವಾಗಲಿದೆ.
ಆಸ್ಟೆರಿಯಾ ಏರೋಸ್ಪೇಸ್ ಲಿಮಿಟೆಡ್‌ನ ಸಹಸಂಸ್ಥಾಪಕ ನಿಹಾರ್ ವರ್ತಕ್ ಹೇಳುವಂತೆ “ನಮ್ಮ ಸುಧಾರಿತ ಡ್ರೋನ್‌ಗಳು ಮತ್ತು ಸ್ಕೈಡೆಕ್, ನಮ್ಮ ಡ್ರೋನ್ ಆಪರೇಶನ್ ಪ್ಲಾಟ್‌ಫಾರಂ ಅನ್ನು ನೀತಿ ನಿರೂಪಕರಿಗೆ ಮತ್ತು ಸರ್ಕಾರ ಹಾಗೂ ಸಂಸ್ಥೆಗಳಿಗೆ ಪ್ರದರ್ಶಿಸಲು ಈ ಕಾರ್ಯಕ್ರಮ ಉತ್ತಮ ಅವಕಾಶವಾಗಿತ್ತು. ಹತ್ತು ವರ್ಷಗಳ ಹಿಂದೆ, ಭಾರತದಲ್ಲಿ ಡ್ರೋನ್ ವಲಯಕ್ಕೆ ಕಾಲಿಟ್ಟ ಕೆಲವೇ ಸಂಸ್ಥೆಗಳಲ್ಲಿ ನಾವೂ ಒಬ್ಬರಾಗಿದ್ದೆವು ಮತ್ತು ಅಂದಿನಿಂದ ಬೇಡಿಕೆ ವಿಚಾರದಲ್ಲಿ ಮಹತ್ವದ ಸುಧಾರಣೆಯಾಗಿದೆ. ಹಲವು ಉದ್ಯಮಗಳಲ್ಲಿ ಈ ತಂತ್ರಜ್ಞಾನ ಬಳಕೆಯಾಗುತ್ತಿದೆ” ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಆಸ್ಟೆರಿಯಾ ತನ್ನ ಗಟ್ಟಿಮುಟ್ಟಾದ, ವಿಶ್ವಾಸಾರ್ಹ ಮತ್ತು ಕಾರ್ಯಕ್ಷಮತೆ ಆಧರಿತ ಡ್ರೋನ್‌ಗಳನ್ನು ಪ್ರದರ್ಶಿಸಿದೆ. ಭದ್ರತೆ, ನಿಗಾವಣೆ, ಮೇಲ್ವಿಚಾರಣೆ ಮತ್ತು ತಪಾಸಣೆಗಾಗಿ ಈ ವಿವಿಧ ಉದ್ಯಮಗಳಲ್ಲಿ ಈ ಡ್ರೋನ್‌ಗಳನ್ನು ಬಳಸಬಹುದಾಗಿದೆ. ತನ್ನ ಕ್ಲೌಡ್ ಆಧರಿತ ಡ್ರೋನ್ ಆಪರೇಶನ್‌ಗಳ ಪ್ಲಾಟ್‌ಫಾರಂ ಸ್ಕೈಡೆಕ್ ಅನ್ನೂ ಪ್ರದರ್ಶಿಸಿದೆ. ಡ್ರೋನ್ ಅನ್ನು ಸೇವೆಯಾಗಿ ಬಳಸಲು ಈ ಪ್ಲಾಟ್‌ಫಾರಂ ಅನುವು ಮಾಡುತ್ತದೆ.