Assam Floods: ಅಸ್ಸಾಂ ಪ್ರವಾಹ; ಪ್ರಾಣ ಉಳಿಸಿಕೊಳ್ಳಲು ಪ್ರಾಣಿಗಳ ಪರದಾಟ, ಮುಳುಗಿದ ಮನೆಯಿಂದ ಜನರು ವಲಸೆ!
Assam Floods: ಅಸ್ಸಾಂನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಅಲ್ಲಿನ ಜನರ ಜೀವನ ಅತಂತ್ರವಾಗಿದೆ. ಪ್ರವಾಹದಿಂದಾಗಿ ಊರಿಗೆ ಊರೇ ಮುಳುಗುತ್ತಿದ್ದು, ಜನರು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳತ್ತ ವಲಸೆ ಹೋಗುತ್ತಿದ್ದಾರೆ. ಸಾಕುಪ್ರಾಣಿಗಳನ್ನೂ ದೋಣಿಯಲ್ಲಿ ಸಾಗಿಸುತ್ತಿರುವ ಫೋಟೋಗಳು ವೈರಲ್ ಆಗಿವೆ. ನ್ಯಾಷನಲ್ ಪಾರ್ಕ್ನಲ್ಲಿರುವ ಕಾಡುಪ್ರಾಣಿಗಳು ಆಹಾರಕ್ಕಾಗಿ ಊರೊಳಗೆ ಬರತೊಡಗಿವೆ. ಇನ್ನು ಹಲವು ಪ್ರಾಣಿಗಳು ನೀರಿನಲ್ಲಿ ಮುಳುಗಿ, ಸಾಯುವ ಭೀತಿಯಲ್ಲಿವೆ. (ಫೋಟೋ ಕೃಪೆ: ಟ್ವಿಟ್ಟರ್)
ಅಸ್ಸಾಂನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ.
2/ 23
ಈ ಪ್ರವಾಹದ ಹೊಡೆತಕ್ಕೆ ಸಿಲುಕಿ ಸೋಮವಾರ ಮತ್ತೆ 6 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಅಸ್ಸಾಂನ ಪ್ರವಾಹಕ್ಕೆ ಒಟ್ಟು 76 ಜನರು ಬಲಿಯಾದಂತಾಗಿದೆ.
3/ 23
ಇದುವರೆಗೂ ಅಸ್ಸಾಂನ 27 ಜಿಲ್ಲೆಗಳಲ್ಲಿನ 22 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಲಾಗಿದೆ.
4/ 23
ಅಸ್ಸಾಂನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, ಅಸ್ಸಾಂ ಲಕ್ಷಿಂಪುರ್, ಬಾರ್ಪೇಟ, ಬೊಂಗೈಗಾಂವ್, ಕಾಮರೂಪ್, ಗೋಲಾಘಾಟ್ ಮತ್ತು ಶಿವಸಾಗರದ ತಲಾ ಒಬ್ಬರು ನಿನ್ನೆ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ.
5/ 23
ಒಟ್ಟಾರೆ ಸಾವನ್ನಪ್ಪಿರುವ 76 ಜನರಲ್ಲಿ 26 ಜನರು ಭೂಕುಸಿತದಲ್ಲಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ.
6/ 23
ಯುನೆಸ್ಕೋದ ಮಾನ್ಯತೆ ಪಡೆದಿರುವ ಅಸ್ಸಾಂನ ಕಾಝಿರಂಗ ನ್ಯಾಷನಲ್ ಪಾರ್ಕ್ ಬಹುತೇಕ ಪ್ರವಾಹದಿಂದ ಜಲಾವೃತವಾಗಿದೆ.
7/ 23
ಇದರಿಂದ ವನ್ಯಜೀವಿಗಳು ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. 13 ನದಿಗಳ ನೀರು ಒಂದಏ ಬಾರಿಗೆ ಉಕ್ಕಿ ಹರಿದ ಪರಿಣಾಮ ಈ ನ್ಯಾಷನಲ್ ಪಾರ್ಕ್ ಬಹುತೇಕ ಮುಳುಗಡೆಯಾಗಿದೆ. ಈ ಕಾರಣದಿಂದ ಇಲ್ಲಿನ ಸುಮಾರು 51 ವನ್ಯಪ್ರಾಣಿಗಳು ಸಾವನ್ನಪ್ಪಿವೆ. 100ಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಿಸಿ, ಬೇರೆಡೆಗೆ ಸ್ಥಳಾಂತರಿಸಲಾಗಿದೆ.
8/ 23
ಅಸ್ಸಾಂ ಪ್ರವಾಹದ ವೈಮಾನಿಕ ದೃಶ್ಯ
9/ 23
ಪ್ರವಾಹದ ನೀರಿನಿಂದ ಮನೆ ಮುಳುಗಡೆಯಾಗಿರುವುದರಿಂದ ಸಾಕುಪ್ರಾಣಿಗಳೊಂದಿಗೆ ಸುರಕ್ಷಿತ ಸ್ಥಳದತ್ತ ತೆರಳುತ್ತಿರುವ ಜನರು
10/ 23
ಅಸ್ಸಾಂನ ಕಾಝಿರಂಗ ನ್ಯಾಷನಲ್ ಪಾರ್ಕ್ ಬಹುತೇಕ ಮುಳುಗಡೆಯಾಗಿದೆ. ಇಲ್ಲಿನ ಜಿಂಕೆಗಳು ಪ್ರಾಣ ಉಳಿಸಿಕೊಳ್ಳಲು ದಡದತ್ತ ತೆರಳುತ್ತಿರುವ ದೃಶ್ಯ
11/ 23
ಅಸ್ಸಾಂನ ಕಾಝಿರಂಗ ನ್ಯಾಷನಲ್ ಪಾರ್ಕ್ನಲ್ಲಿ ಪ್ರವಾಹದಿಂದ ಸಿಲುಕಿದ್ದ ಪ್ರಾಣಿಗಳನ್ನು ದೋಣಿಯಲ್ಲಿ ಕರೆತರುತ್ತಿರುವ ಸ್ವಯಂಸೇವಕರು
12/ 23
ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹದಿಂದ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿರುವ ಜನರು
13/ 23
ಅಸ್ಸಾಂ ಪ್ರವಾಹದ ವೈಮಾನಿಕ ದೃಶ್ಯ
14/ 23
ಅಸ್ಸಾಂನಲ್ಲಿ ಸುರಿದ ಮಳೆಯಿಂದ ಕೆರೆಗಳಂತಾಗಿರುವ ಊರು
15/ 23
ಅಸ್ಸಾಂನ ಕಾಝಿರಂಗ ನ್ಯಾಷನಲ್ ಪಾರ್ಕ್ನಲ್ಲಿ ಸಿಲುಕಿರುವ ಹುಲಿ ಪ್ರವಾಹದ ನೀರಿನಲ್ಲಿ ಈಜಿ ದಡದತ್ತ ಸಾಗುತ್ತಿರುವ ದೃಶ್ಯ
16/ 23
ಅಸ್ಸಾಂ ಪ್ರವಾಹದಲ್ಲಿ ಸಿಲುಕಿರುವ ಜನರು ದೋಣಿಗಳ ಮೂಲಕ ಸುರಕ್ಷಿತ ಸ್ಥಳದತ್ತ ಸಾಗುತ್ತಿರುವುದು
17/ 23
ಮನೆಯೊಳಗೆ ನುಗ್ಗಿದ ನೀರಿನ ನಡುವೆಯೇ ಜೀವ ಸಾಗಿಸುತ್ತಿರುವ ಕುಟುಂಬ
18/ 23
ಅಸ್ಸಾಂನ ಕಾಝಿರಂಗ ನ್ಯಾಷನಲ್ ಪಾರ್ಕ್ನಲ್ಲಿ ಪ್ರವಾಹದಿಂದಾಗಿ ಸಿಲುಕಿದ ಹುಲಿ
19/ 23
ನಾವು ಸುರಕ್ಷತವಾಗಿ ಬೇರೆಡೆ ಹೋದರೆ ಸಾಕೇ? ಸಾಕು ಪ್ರಾಣಿಗಳನ್ನೂ ತಮ್ಮೊಡನೆ ಕರೆದೊಯ್ಯುತ್ತಿರುವ ಪ್ರವಾಹಪೀಡಿತ ಪ್ರದೇಶಗಳ ಜನರು
20/ 23
ಅಸ್ಸಾಂನ ಪ್ರವಾಹದ ಸದ್ಯದ ಪರಿಸ್ಥಿತಿ
21/ 23
ಅಸ್ಸಾಂನ ಕಾಝಿರಂಗ ನ್ಯಾಷನಲ್ ಪಾರ್ಕ್ ರಸ್ತೆಯಲ್ಲಿ ಸಾಗುತ್ತಿರುವ ಆನೆ
22/ 23
ಪ್ರವಾಹದಲ್ಲಿ ಮುಳುಗಿದ ಮನೆಯ ಮೇಲೇ ಹತ್ತಿ ಕುಳಿತು ದಿನ ಕಳೆಯುತ್ತಿರುವ ಕುಟುಂಬ!
23/ 23
ಸುತ್ತಲೂ ನೀರು, ಮುಳುಗಿದ ಮನೆ, ಅತಂತ್ರವಾಗಿದೆ ಅಸ್ಸಾಮಿಗರ ಬದುಕು