ಅಸ್ಸಾಂನ 26 ಜಿಲ್ಲೆಗಳ ಜನರು ಭೀಕರ ಪ್ರವಾಹಕ್ಕೆ ಸಿಲುಕಿದ್ದಾರೆ. ಒಂದೆಡೆ ಪ್ರವಾಹ, ಇನ್ನೊಂದೆಡೆ ಭೂಕುಸಿತ ಸಂಭವಿಸಿದೆ. ಅಸ್ಸಾಂನಲ್ಲಿ ಈಗ ಸುಮಾರು 146 ಹಳ್ಳಿಗಳು ಜಲಾವೃತವಾಗಿವೆ. ಗ್ರಾಮಸ್ಥರಿಗೆ ಸಹಾಯ ಮಾಡಲು ಆಡಳಿತವು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ. ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಅನೇಕ ಜನರನ್ನು ಗ್ರಾಮದಿಂದ ಸ್ಥಳಾಂತರಿಸಲಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ನೀರು ಹರಿಯುತ್ತಿಲ್ಲ. ರೈಲು ಮಾರ್ಗಗಳು, ಸೇತುವೆಗಳು, ರಸ್ತೆಗಳು, ನೀರಿನ ಅಡಿಯಲ್ಲಿ ಇವೆ. ಮೂಲಭೂತ ವ್ಯವಸ್ಥೆಗಳು ಹಾನಿಯಾಗಿದ್ದು ಬಹಳಷ್ಟು ರೈಲುಗಳು ಕ್ಯಾನ್ಸಲ್ ಆಗಿವೆ. ಅಸ್ಸಾಂನ ಹೆಚ್ಚಿನ ನದಿಗಳು ಅಪಾಯದ ವಲಯದಲ್ಲಿ ಹರಿಯುತ್ತವೆ. ಇದರಿಂದಾಗಿ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ.