ಅಸ್ಸಾಂನ 29 ಜಿಲ್ಲೆಗಳಲ್ಲಿ ಸುಮಾರು 8.12 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ನಾಗಾಂವ್ನಲ್ಲಿ 3.38 ಲಕ್ಷಕ್ಕೂ ಹೆಚ್ಚು ಜನರು, ಕಚಾರ್ನಲ್ಲಿ 1.6 ಲಕ್ಷ, ಹೊಜಾಯ್ನಲ್ಲಿ 1.11 ಲಕ್ಷ ಮತ್ತು ದಾರಂಗ್ನಲ್ಲಿ 52,609 ಜನರು ಬಾಧಿತರಾಗಿದ್ದಾರೆ. ರಾಜ್ಯ ಸರ್ಕಾರದ ಪ್ರಕಾರ, ಒಟ್ಟು 60,038 ಹೆಕ್ಟೇರ್ ಕೃಷಿಯೋಗ್ಯ ಭೂಮಿ ಮತ್ತು 2,251 ಹಳ್ಳಿಗಳು ಇನ್ನೂ ಜಲಾವೃತವಾಗಿವೆ.