Archana Gautam: ಯುಪಿ ಚುನಾವಣೆಯಲ್ಲಿ ಟಾಲಿವುಡ್ ಹೀರೋಯಿನ್, ಅರ್ಚನಾ ಗೌತಮ್ಗೆ MLA ಟಿಕೆಟ್ ನೀಡಿದ ಕಾಂಗ್ರೆಸ್
Archana Guatam: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 125 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಅರ್ಚನಾ ಗೌತಮ್. ಆಕೆ ಯಾರು? ಟಾಲಿವುಡ್ ಜೊತೆ ಅವರ ಸಂಬಂಧ ಏನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಅರ್ಚನಾ ಗೌತಮ್: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 125 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಅರ್ಚನಾ ಗೌತಮ್. ಆಕೆ ಯಾರು? ಟಾಲಿವುಡ್ ಜೊತೆ ಅವರ ಸಂಬಂಧ ಏನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
2/ 10
ಮತ್ತೊಬ್ಬ ಸಿನಿಮಾ ತಾರೆ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಾಟ್ ಬ್ಯೂಟಿ ಅರ್ಚನಾ ಗೌತಮ್ ಯುಪಿ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಹಸ್ತಿನಾಪುರ ವಿಧಾನಸಭಾ ಟಿಕೆಟ್ ನೀಡಿದೆ. (ಚಿತ್ರ: Instagram)
3/ 10
ಅರ್ಚನಾ ಗೌತಮ್ ಉತ್ತರ ಪ್ರದೇಶದ ಮೀರತ್ನಲ್ಲಿ ಜನಿಸಿದರು. ಅವರಿಗೆ ಈಗ ಕೇವಲ 26 ವರ್ಷ. ಆದರೆ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು 20 ವರ್ಷ ಕಳೆದರೂ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. (ಚಿತ್ರ: Instagram)
4/ 10
ನಟಿ ಅರ್ಚನಾ ಗೌತಮ್ ವೃತ್ತಿಪರ ಬಿಕಿನಿ ಹುಡುಗಿ. ಮಿಸ್ ಬಿಕಿನಿ ಇಂಡಿಯಾ 2018 ರ ಸೌಂದರ್ಯ ಸ್ಪರ್ಧೆಯಯಲ್ಲಿ ವಿಜೇತರಾಗಿದ್ದರು. ಅರ್ಚನಾ ಐಐಎಂಟಿಯಿಂದ ಬಿಜೆಎಂಸಿ ಮುಗಿಸಿದ್ದಾರೆ. ಅವರು ಮಿಸ್ ಉತ್ತರ ಪ್ರದೇಶ 2014, ಮಿಸ್ ಕಾಸ್ಮೊ ಇಂಡಿಯಾ 2018 ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. (ಚಿತ್ರ: Instagram)
5/ 10
ಅರ್ಚನಾ ಗೌತಮ್ ತಮ್ಮ ಬಹುತೇಕ ಚಿತ್ರಗಳನ್ನು ಹಿಂದಿಯಲ್ಲಿ ಮಾಡಿದ್ದಾರೆ. 2016 ರಲ್ಲಿ ಗ್ರೇಟ್ ಗ್ರ್ಯಾಂಡ್ ಮಸ್ತಿ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ದಿ ಗ್ರೇಟ್ ಗ್ರ್ಯಾಂಡ್ ಮಸ್ತಿ, ಹಸೀನಾ ಪಾರ್ಕರ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅರ್ಚನಾ ನಟಿಸಿದ್ದಾರೆ. (ಚಿತ್ರ: Instagram)
6/ 10
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಸಮ್ಮುಖದಲ್ಲಿ ಅರ್ಚನಾ ಗೌತಮ್ ಕಾಂಗ್ರೆಸ್ಗೆ ಸೇರ್ಪಡೆಗೊಂಡರು. (ಚಿತ್ರ: Instagram)
7/ 10
ಅರ್ಚನಾ ಅವರು 'ಗರ್ಲ್ ಹೂನ್, ಲಡ್ ಸಕ್ತೀ ಹೂನ್' ಅಭಿಯಾನದಿಂದ ಪ್ರಭಾವಿತರಾಗಿ ರಾಜಕೀಯ ಪ್ರವೇಶಿಸಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ. (ಚಿತ್ರ: Instagram)
8/ 10
ಸದ್ಯ ಕಾಂಗ್ರೆಸ್ MLA ಟಿಕೆಟ್ ನೀಡಿದ್ದರಿಂದ ಅರ್ಚನಾ ಗೌತಮ್ ತುಂಬಾ ಖುಷಿಯಾಗಿದ್ದಾರೆ. ಶೀಘ್ರದಲ್ಲೇ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಲಿದ್ದಾರೆ. (ಚಿತ್ರ: Instagram)
9/ 10
ಅರ್ಚನಾ ಗೌತಮ್ ಸದ್ಯ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಐಪಿಎಲ್ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್ ಹಂತದಲ್ಲಿದೆ. (ಚಿತ್ರ: Instagram)
10/ 10
ಆದರೆ, ಬಿಕಿನಿ ಭಾಮರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ವೃತ್ತಿಯೊಂದಿಗೆ ರಾಜಕೀಯವನ್ನು ಜೋಡಿಸಬೇಡಿ ಎಂದು ಮನವಿ ಮಾಡಿದರು. ಯುಪಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು. (ಚಿತ್ರ: Instagram)