ಇನ್ನುಳಿದಂತೆ ಸಮುದಾಯದಲ್ಲಿ ಸಾವು ಸಂಭವಿಸಿದರೆ 12 ಮತ್ತು 13ನೇ ದಿನ ಐಷಾರಾಮಿ ವಸ್ತುಗಳನ್ನು ಸೇವನೆ ಮಾಡಬಾರದು, ಔತಣಕೂಟಕ್ಕೆ ಅಡುಗೆ ಮಾಡುವವರನ್ನು ಕರೆಯಬಾರದು, ಮದುವೆಗಳಲ್ಲಿ ಡಿಜೆ ನಿಷೇಧಿಸಬೇಕು, ಹೋಟೆಲ್‌ಗಳಲ್ಲಿ ಹುಟ್ಟುಹಬ್ಬ ಆಚರಣೆ ನಿಷೇಧ, ಮದುವೆ ಸಮಾರಂಭದಲ್ಲಿ ಪಟಾಕಿಗಳ ಸೀಮಿತ ಬಳಕೆ, ಮದುವೆಗೆ ದುಬಾರಿ ಕಾರ್ಡ್ ಮುದ್ರಿಸಬಾರದು ಎಂದು ನಿಯಮ ರೂಪಿಸಲಾಗಿದೆ.
ಈ ಬಗ್ಗೆ ಸಭೆಯಲ್ಲಿ ಶಿಕಾರಪುರದ ಗಡಿಪತಿ ದಯಾರಾಮಜೀ ಮಹಾರಾಜ್ ಮಾತನಾಡಿ, ಹಿಂದೂ ಧರ್ಮದಲ್ಲಿ ಸಂತರು ಮತ್ತು ಸಾಧುಸಂತರು ಮಾತ್ರ ಗಡ್ಡ ಬಿಡಬೇಕಾಗಿದ್ದು, ಸಮಾಜದ ಯುವಕರು ಗಡ್ಡ ಬಿಟ್ಟರೆ ಚೆನ್ನಾಗಿ ಕಾಣುವುದಿಲ್ಲ. ಹಾಗಾಗಿ ಅವರು ಗಡ್ಡ ಬೆಳೆಸಬಾರದು. ಹೀಗಾಗಿ ಗಡ್ಡ ಬಿಟ್ಟು ಓಡಾಡುವ ಯುವಕರ ವಿರುದ್ಧ ಎಚ್ಚರಿಕೆ ನೀಡಿ ಅವರನ್ನು ದೂರವಿಡುವಂತೆ ಸೂಚಿಸಲಾಗಿದೆ. ಆದೇಶವನ್ನು ಪಾಲಿಸದವರಿಗೆ ದಂಡ ಪಾವತಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.