Angry Tiger: ಸಫಾರಿಗೆ ತೆರಳಿದ್ದ ವೇಳೆ ಹುಲಿಯನ್ನು ಕೆರಳಿಸಿದ ಯುವಕರು; ದಾಳಿಗೆ ಮುಂದಾದ ವ್ಯಾಘ್ರ!

ಉತ್ತರಾಖಂಡ: ಸಫಾರಿಗೆ ತೆರಳಿದ್ದ ಯುವಕರ ತಂಡದ ಮೇಲೆ ಕೋಪಗೊಂಡ ಹುಲಿಯೊಂದು ದಾಳಿಗೆ ಮುಂದಾಗಿರುವ ರೋಚಕ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

 • News18 Kannada
 • |
 •   | Uttarakhand (Uttaranchal), India
First published:

 • 17

  Angry Tiger: ಸಫಾರಿಗೆ ತೆರಳಿದ್ದ ವೇಳೆ ಹುಲಿಯನ್ನು ಕೆರಳಿಸಿದ ಯುವಕರು; ದಾಳಿಗೆ ಮುಂದಾದ ವ್ಯಾಘ್ರ!

  ಕೋಪದಿಂದ ಘರ್ಜಿಸುತ್ತಾ ಸಫಾರಿ ಮಾಡುತ್ತಿದ್ದ ಯುವಕರ ಅಟ್ಟಾಡಿಸಿಕೊಂಡು ಬರುವ ಹುಲಿಯ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  MORE
  GALLERIES

 • 27

  Angry Tiger: ಸಫಾರಿಗೆ ತೆರಳಿದ್ದ ವೇಳೆ ಹುಲಿಯನ್ನು ಕೆರಳಿಸಿದ ಯುವಕರು; ದಾಳಿಗೆ ಮುಂದಾದ ವ್ಯಾಘ್ರ!

  ಹಾಗೆ ನೋಡಿದರೆ ಈ ದೃಶ್ಯದಲ್ಲಿ ಹುಲಿಯ ತಪ್ಪೇನಿಲ್ಲ, ಯಾಕೆಂದರೆ ಹುಲಿಯನ್ನು ಕಂಡು ಸಫಾರಿಯಲ್ಲಿದ್ದ ಯುವಕರೇ ಕರ್ಕಶವಾಗಿ ಕಿರುಚಿ ಹುಲಿಗೆ ಕಿರಿಕಿರಿ ಮಾಡಿದ್ದಾರೆ. ಅಷ್ಟಕ್ಕೆ ಬೆದರಿದ ಹುಲಿ ಯುವಕರತ್ತ ದಾಳಿಗೆ ಮುಂದಾಗಿದೆ.

  MORE
  GALLERIES

 • 37

  Angry Tiger: ಸಫಾರಿಗೆ ತೆರಳಿದ್ದ ವೇಳೆ ಹುಲಿಯನ್ನು ಕೆರಳಿಸಿದ ಯುವಕರು; ದಾಳಿಗೆ ಮುಂದಾದ ವ್ಯಾಘ್ರ!

  ಈ ಮನುಷ್ಯರೇ ಇಷ್ಟು ಅನ್ಸುತ್ತೆ, ಕಾಡುಪ್ರಾಣಿಗಳನ್ನು ವೀಕ್ಷಿಸುವ ನೆಪದಲ್ಲಿ ಕಾಡಿಗೆ ತೆರಳಿ ಸಫಾರಿ ಮಾಡುತ್ತೇವೆ. ಆದರೆ ಪ್ರಾಣಿಗಳನ್ನು ಕಂಡಾಗ ಸುಮ್ಮನಿರದೇ ಅವುಗಳಿಗೆ ಪ್ರಚೋದಿಸಿ ವಿಕೃತ ಸುಖ ಅನುಭವಿಸುತ್ತಾರೆ. ಇದು ಒಂದಿಬ್ಬರ ಕಥೆಯಲ್ಲ, ಯಾವುದೇ ಮೃಗಾಲಯ, ವನ್ಯಧಾಮಕ್ಕೆ ಹೋದಾಗ ಇಂತಹ ಮನಸ್ಥಿತಿಯವರು ಕಾಣಸಿಗುತ್ತಾರೆ.

  MORE
  GALLERIES

 • 47

  Angry Tiger: ಸಫಾರಿಗೆ ತೆರಳಿದ್ದ ವೇಳೆ ಹುಲಿಯನ್ನು ಕೆರಳಿಸಿದ ಯುವಕರು; ದಾಳಿಗೆ ಮುಂದಾದ ವ್ಯಾಘ್ರ!

  ಈ ವಿಡಿಯೋದಲ್ಲಿ ಕರ್ಕಶವಾಗಿ ಕಿರುಚಾಡಿ ಹುಲಿಗೆ ಹಿಂಸೆ ನೀಡಿದ್ದರಿಂದ ಅದು ಪ್ರಚೋದನೆಗೊಂಡಿದೆ. ಒಂದು ವೇಳೆ ಆ ಹುಲಿ ನಮ್ಮ ಮನೆಗೆ ಬಂದು ನಾವು ಮಾಡಿದ ರೀತಿಯಲ್ಲೇ ಅದೂ ಮಾಡುತ್ತಿದ್ದರೆ ನಾವೇನು ಮಾಡುತ್ತಿದ್ವಿ? ಇದೇ ಪ್ರಶ್ನೆಯನ್ನು ವಿಡಿಯೋ ಟ್ವೀಟ್‌ ಮಾಡಿದ ವ್ಯಕ್ತಿ ಕೂಡ ಪ್ರಶ್ನಿಸಿದ್ದಾರೆ.

  MORE
  GALLERIES

 • 57

  Angry Tiger: ಸಫಾರಿಗೆ ತೆರಳಿದ್ದ ವೇಳೆ ಹುಲಿಯನ್ನು ಕೆರಳಿಸಿದ ಯುವಕರು; ದಾಳಿಗೆ ಮುಂದಾದ ವ್ಯಾಘ್ರ!

  ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಬಂದ ಚಿರತೆ, ಹುಲಿ ಅಂತಾ ಸುದ್ದಿಗಳನ್ನು ನೋಡಿರ್ತೀವಿ. ಹಾಗೆ ನೋಡಿದ್ರೆ, ಕಾಡು ಪ್ರಾಣಿಗಳು ನಾಡಿಗೆ ಬಂದಿದ್ದಲ್ಲ, ನಾವೇ ಕಾಡನ್ನು ನಾಶ ಮಾಡಿ ಪ್ರಾಣಿಗಳಿಗೆ ನೆಲೆ ಇಲ್ಲದಂತೆ ಮಾಡಿದ್ದೀವಿ, ಹೀಗಾಗಿಯೇ ಪ್ರಾಣಿಗಳು ನಾಡಿಗೆ ಬರುತ್ತಿವೆ ಅನ್ನೋ ಕನಿಷ್ಠ ಪ್ರಜ್ಞೆ ಕೂಡ ಅನೇಕರಿಗೆ ಇರೋದಿಲ್ಲ.

  MORE
  GALLERIES

 • 67

  Angry Tiger: ಸಫಾರಿಗೆ ತೆರಳಿದ್ದ ವೇಳೆ ಹುಲಿಯನ್ನು ಕೆರಳಿಸಿದ ಯುವಕರು; ದಾಳಿಗೆ ಮುಂದಾದ ವ್ಯಾಘ್ರ!

  ಈ ವಿಡಿಯೋದಲ್ಲಿ ಗಮನಿಸಿದಂತೆ, ವಾಹನದಲ್ಲಿದ್ದ ವ್ಯಕ್ತಿಯೊಬ್ಬ ಅಸಹ್ಯವಾಗಿ ಕಿರುಚಾಡಿದ್ದರಿಂದ ಹುಲಿ ದಾಳಿಗೆ ಮುಂದಾಗಿದೆ. ಒಂದು ವೇಳೆ ಚಾಕ ವಾಹನವನ್ನು ಮುಂದಕ್ಕೆ ಚಲಿಸದೇ ಇರುತ್ತಿದ್ದರೆ ಖಂಡಿತವಾಗಿಯೂ ಹುಲಿ ದಾಳಿ ಮಾಡುತ್ತಿತ್ತು ಅನ್ನೋದರಲ್ಲಿ ಸಂಶಯವೇ ಇಲ್ಲ.

  MORE
  GALLERIES

 • 77

  Angry Tiger: ಸಫಾರಿಗೆ ತೆರಳಿದ್ದ ವೇಳೆ ಹುಲಿಯನ್ನು ಕೆರಳಿಸಿದ ಯುವಕರು; ದಾಳಿಗೆ ಮುಂದಾದ ವ್ಯಾಘ್ರ!

  ಇನ್ನಾದರೂ ಮೃಗಾಲಯ, ಉದ್ಯಾನವನಗಳಿಗೆ ಸಫಾರಿಗೆ ತೆರಳುವ ಪ್ರವಾಸಿಗರು ಮೌನವಾಗಿ ಕಾಡುಪ್ರಾಣಿಗಳ ಚಲನವಲನಗಳನ್ನು ಗಮನಿಸಿ, ಅನುಭವಿಸಿ ಬರೋದನ್ನು ಕಲಿತು, ಅವುಗಳನ್ನು ಕಂಡಾಗ ಹಿಂಸೆ ಮಾಡೋದು, ವಿಚಿತ್ರವಾಗಿ ನಿರುಚಾಡೋದನ್ನು ನಿಲ್ಲಿಸುವಂತಹ ಕನಿಷ್ಠ ಪ್ರಜ್ಞೆಯನ್ನು ಬೆಳೆಸಬೇಕಾಗಿದೆ.

  MORE
  GALLERIES