Kiran Kumar Reddy: ಬಿಜೆಪಿ ಸೇರ್ಪಡೆಯಾದ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ! ಕಾಂಗ್ರೆಸ್​ ಶಾಕ್​ ಕೊಟ್ಟ ಕಿರಣ್ ಕುಮಾರ್

ಕಾಂಗ್ರೆಸ್ ಲೀಡರ್, ಮಾಜಿ ಕೇಂದ್ರ ಸಚಿವ ಎಕೆ ಆಂಟೋನಿ ಮಗ ಅನಿಲ್​ ಅಂಟೋನಿ ಬಿಜೆಪಿ ಸೇರಿದ ಬೆನ್ನಲ್ಲೇ ಕಾಂಗ್ರೆಸ್​ಗೆ ಮತ್ತೊಂದು ಆಘಾತ ಎದುರಾಗಿದೆ. ಅವಿಭಜಿತ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

First published:

 • 17

  Kiran Kumar Reddy: ಬಿಜೆಪಿ ಸೇರ್ಪಡೆಯಾದ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ! ಕಾಂಗ್ರೆಸ್​ ಶಾಕ್​ ಕೊಟ್ಟ ಕಿರಣ್ ಕುಮಾರ್

  ಮಾಜಿ ಕೇಂದ್ರ ಸಚಿವ ಎಕೆ ಆಂಟೋನಿ ಮಗ ಅನಿಲ್​ ಅಂಟೋನಿ ಬಿಜೆಪಿ ಸೇರಿದ ಬೆನ್ನಲ್ಲೇ ಕಾಂಗ್ರೆಸ್​ಗೆ ಮತ್ತೊಂದು ಆಘಾತ ಎದುರಾಗಿದೆ. ಅವಿಭಜಿತ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

  MORE
  GALLERIES

 • 27

  Kiran Kumar Reddy: ಬಿಜೆಪಿ ಸೇರ್ಪಡೆಯಾದ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ! ಕಾಂಗ್ರೆಸ್​ ಶಾಕ್​ ಕೊಟ್ಟ ಕಿರಣ್ ಕುಮಾರ್

  2014ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣದ ವಿಭಜನೆಯಾಗುವ ಮೊದಲು ಕಿರಣ್​ ಕುಮಾರ್​ ರೆಡ್ಡಿ ಮುಖ್ಯಮಂತ್ರಿಯಾಗಿದ್ದರು. ಆದರೆ ಪಕ್ಷದ ನಾಯಕತ್ವದ ವಿಚಾರದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ.

  MORE
  GALLERIES

 • 37

  Kiran Kumar Reddy: ಬಿಜೆಪಿ ಸೇರ್ಪಡೆಯಾದ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ! ಕಾಂಗ್ರೆಸ್​ ಶಾಕ್​ ಕೊಟ್ಟ ಕಿರಣ್ ಕುಮಾರ್

  ಕಿರಣ್ ಕುಮಾರ್ 2014ರಲ್ಲಿಆಂಧ್ರಪ್ರದೇಶವನ್ನು ವಿಭಜನೆ ಮಾಡುವ ಯುಪಿಎ ಸರ್ಕಾರದ ನಿರ್ಧಾರ ವಿರೋಧಿಸಿ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ, ಜೈ ಸಮೈಕ್ಯ ಆಂಧ್ರ ಎಂಬ ಪಕ್ಷ ಸ್ಥಾಪಿಸಿದ್ದರು, ಆದರೆ ಆ ಚುನಾವಣೆಯಲ್ಲಿ ಯಾವುದೇ ಪ್ರಭಾವ ಭೀರದ ಹಿನ್ನಲೆ ಮತ್ತೆ 2018ರಲ್ಲಿ ಕಾಂಗ್ರೆಸ್​ ಸೇರಿದ್ದರು.

  MORE
  GALLERIES

 • 47

  Kiran Kumar Reddy: ಬಿಜೆಪಿ ಸೇರ್ಪಡೆಯಾದ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ! ಕಾಂಗ್ರೆಸ್​ ಶಾಕ್​ ಕೊಟ್ಟ ಕಿರಣ್ ಕುಮಾರ್

  ಆದರೆ ನಾಯಕತ್ವದ ವಿಚಾರದಲ್ಲಿ ಮನಸ್ಥಾಪ ಉಂಟಾಗಿ, ಕಳೆದ ತಿಂಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇವಲ ಒಂದು ಸಾಲಿನ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಅದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಲ್ಲಿಸಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದರು.

  MORE
  GALLERIES

 • 57

  Kiran Kumar Reddy: ಬಿಜೆಪಿ ಸೇರ್ಪಡೆಯಾದ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ! ಕಾಂಗ್ರೆಸ್​ ಶಾಕ್​ ಕೊಟ್ಟ ಕಿರಣ್ ಕುಮಾರ್

  ಇದೀಗ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಸಮ್ಮುಖದಲ್ಲಿ ಕಿರಣ್ ಕುಮಾರ್ ರೆಡ್ಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಪ್ರಹ್ಲಾದ್ ಜೋಶಿ ಕಿರಣ್ ಕುಮಾರ್ ರೆಡ್ಡಿ ಅವರಿಗೆ ಕೇಸರಿ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಸ್ವಾಗತ ಕೋರಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸೇರಿದಂತೆ ಪಕ್ಷದ ನಾಯಕರು ಉಪಸ್ಥಿತರಿದ್ದರು.

  MORE
  GALLERIES

 • 67

  Kiran Kumar Reddy: ಬಿಜೆಪಿ ಸೇರ್ಪಡೆಯಾದ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ! ಕಾಂಗ್ರೆಸ್​ ಶಾಕ್​ ಕೊಟ್ಟ ಕಿರಣ್ ಕುಮಾರ್

  ಬಿಜೆಪಿ ಸೇರ್ಪಡೆಗೊಂಡ ನಂತರ ಮಾತನಾಡಿದ ಕಿರಣ್ ಕುಮಾರ್ ರೆಡ್ಡಿ, ಕಾಂಗ್ರೆಸ್ ನಾಯಕತ್ವವು ಜನರ ತೀರ್ಪನ್ನು ಒಪ್ಪಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಜತೆಗೆ ತಪ್ಪುಗಳನ್ನು ತಿದ್ದಿಕೊಳ್ಳುವ ಸಾಮರ್ಥ್ಯವೂ ಇಲ್ಲ. ಅವರು ತಮ್ಮದೇ ಸರಿ ಹಾಗೂ ಭಾರತದ ಜನರು ಸೇರಿದಂತೆ ಉಳಿದವರೆಲ್ಲರದೂ ತಪ್ಪು ಎಂದೇ ನಂಬಿದ್ದಾರೆ ಎಂದು ಕಿರಣ್ ರೆಡ್ಡಿ, ತಮ್ಮ ಮಾಜಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

  MORE
  GALLERIES

 • 77

  Kiran Kumar Reddy: ಬಿಜೆಪಿ ಸೇರ್ಪಡೆಯಾದ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ! ಕಾಂಗ್ರೆಸ್​ ಶಾಕ್​ ಕೊಟ್ಟ ಕಿರಣ್ ಕುಮಾರ್

  62 ವರ್ಷದ ಕಿರಣ್ ರೆಡ್ಡಿ ಅವರು ರಾಯಲಸೀಮೆ ಭಾಗದವರಾಗಿದ್ದು, ಅಲ್ಲಿ ಅವರು ಗಮನಾರ್ಹ ಪ್ರಭಾವ ಹೊಂದಿರುವುದರಿಂದ ಬಿಜೆಪಿ ಅಸ್ತಿತ್ವಕ್ಕೆ ಬಲ ಸಿಗಲಿದೆ . ಅಲ್ಲದೆ ರಾಜ್ಯದಲ್ಲಿ ಮೂರನೇ ಪರ್ಯಾಯ ಆಯ್ಕೆಯ ಪಕ್ಷವಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿರುವ ಬಿಜೆಪಿ, ಕಿರಣ್ ಕುಮಾರ್​ ಅವರನ್ನ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆ ಇದೆ.

  MORE
  GALLERIES