Crorepati CMs: ದೇಶದ 30 ಮುಖ್ಯಮಂತ್ರಿಗಳಲ್ಲಿ 29 ಮಂದಿ ಕೋಟ್ಯಾಧಿಪತಿಗಳು! ನಂಬರ್​ 1 ಯಾರು? ಬೊಮ್ಮಾಯಿಗೆ ಎಷ್ಟನೇ ಸ್ಥಾನ!

Crorepati CMs :ದೇಶದ ಮುಖ್ಯಮಂತ್ರಿಗಳ ಆಸ್ತಿ ಎಷ್ಟಿರಬಹುದು? ಯಾರು ಹೆಚ್ಚು ಆಸ್ತಿ ಹೊಂದಿದ್ದಾರೆ? ಯಾರಿಗೆ ಕಡಿಮೆ ಇದೆ? ಶ್ರೀಮಂತ ಮುಖ್ಯಮಂತ್ರಿಗಳು (ಸಿಎಂ) ಯಾರು? ಅಂತಹ ಕುತೂಹಲಕಾರಿ ಸಂಗತಿಗಳಿದ್ದರೆ ಈ ಸುದ್ದಿಯಲ್ಲಿ ಮಾಹಿತಿ ತಿಳಿದುಕೊಳ್ಳಬಹುದು

First published:

  • 18

    Crorepati CMs: ದೇಶದ 30 ಮುಖ್ಯಮಂತ್ರಿಗಳಲ್ಲಿ 29 ಮಂದಿ ಕೋಟ್ಯಾಧಿಪತಿಗಳು! ನಂಬರ್​ 1 ಯಾರು? ಬೊಮ್ಮಾಯಿಗೆ ಎಷ್ಟನೇ ಸ್ಥಾನ!

    ದೇಶದ ಮುಖ್ಯಮಂತ್ರಿಗಳ ಆಸ್ತಿ ಎಷ್ಟಿರಬಹುದು? ಯಾರು ಹೆಚ್ಚು ಆಸ್ತಿ ಹೊಂದಿದ್ದಾರೆ? ಯಾರಿಗೆ ಕಡಿಮೆ ಇದೆ? ಶ್ರೀಮಂತ ಮುಖ್ಯಮಂತ್ರಿಗಳು (ಸಿಎಂ) ಯಾರು? ಅಂತಹ ಕುತೂಹಲಕಾರಿ ಸಂಗತಿಗಳಿದ್ದರೆ ಈ ಸುದ್ದಿಯಲ್ಲಿ ಮಾಹಿತಿ ತಿಳಿದುಕೊಳ್ಳಬಹುದು

    MORE
    GALLERIES

  • 28

    Crorepati CMs: ದೇಶದ 30 ಮುಖ್ಯಮಂತ್ರಿಗಳಲ್ಲಿ 29 ಮಂದಿ ಕೋಟ್ಯಾಧಿಪತಿಗಳು! ನಂಬರ್​ 1 ಯಾರು? ಬೊಮ್ಮಾಯಿಗೆ ಎಷ್ಟನೇ ಸ್ಥಾನ!

    ದೇಶದ ಒಟ್ಟು 30 ಸಿಎಂಗಳ ಪೈಕಿ 29 ಮಂದಿ ಕೋಟ್ಯಾಧಿಪತಿಗಳು ಎಂದು ತಿಳಿದುಬಂದಿದೆ. ಈ 29 ಮಿಲಿಯನೇರ್‌ ಸಿಎಂಗಳ ಪೈಕಿ ಅಗ್ರಸ್ಥಾನದಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್​ ಮೋಹನ್ ರೆಡ್ಡಿ ಇದ್ದಾರೆ.

    MORE
    GALLERIES

  • 38

    Crorepati CMs: ದೇಶದ 30 ಮುಖ್ಯಮಂತ್ರಿಗಳಲ್ಲಿ 29 ಮಂದಿ ಕೋಟ್ಯಾಧಿಪತಿಗಳು! ನಂಬರ್​ 1 ಯಾರು? ಬೊಮ್ಮಾಯಿಗೆ ಎಷ್ಟನೇ ಸ್ಥಾನ!

    ಆಂಧ್ರ ಪ್ರದೇಶದ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಬರೋಬ್ಬರಿ 510 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಇದನ್ನು ಬಹಿರಂಗಪಡಿಸಿದೆ.

    MORE
    GALLERIES

  • 48

    Crorepati CMs: ದೇಶದ 30 ಮುಖ್ಯಮಂತ್ರಿಗಳಲ್ಲಿ 29 ಮಂದಿ ಕೋಟ್ಯಾಧಿಪತಿಗಳು! ನಂಬರ್​ 1 ಯಾರು? ಬೊಮ್ಮಾಯಿಗೆ ಎಷ್ಟನೇ ಸ್ಥಾನ!

    ಚುನಾವಣಾ ಅಫಿಡವಿಟ್‌ಗಳನ್ನು ಪರಿಶೀಲಿಸಿದ ನಂತರ ಎಡಿಆರ್ ಈ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ದೇಶದ ಎಲ್ಲಾ ಮುಖ್ಯಮಂತ್ರಿಗಳನ್ನು ಹಿಂದಿಕ್ಕಿದ್ದಾರೆ. ಕರ್ನಾಕಟದ ಸಿಎಂ ಬಸವರಾಜ ಬೊಮ್ಮಾಯಿ ಅವರ ಆಸ್ತಿಯ ಬಗ್ಗೆ ವರದಿಯಲ್ಲಿ ಬಹಿರಂಗವಾಗಿಲ್ಲವಾದರೂ, 2018ರ ಚುನಾವಣೆ ವೇಳೆ ಅವರು 8 ಕೋಟಿ ಆಸ್ತಿಯಿದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

    MORE
    GALLERIES

  • 58

    Crorepati CMs: ದೇಶದ 30 ಮುಖ್ಯಮಂತ್ರಿಗಳಲ್ಲಿ 29 ಮಂದಿ ಕೋಟ್ಯಾಧಿಪತಿಗಳು! ನಂಬರ್​ 1 ಯಾರು? ಬೊಮ್ಮಾಯಿಗೆ ಎಷ್ಟನೇ ಸ್ಥಾನ!

    30 ಮುಖ್ಯಮಂತ್ರಿಗಳ ಪೈಕಿ ಪಶ್ಚಿಮ ಬಂಗಳಾದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಮಾತ್ರ ಕೋಟ್ಯಾಧಿಪತಿಗಳ ಪಟ್ಟಿಗೆ ಸೇರಿಲ್ಲ. ಅವರ ಆಸ್ತಿ 15 ಲಕ್ಷ ರೂಪಾಯಿಗಳಾಗಿದೆ. ಮಮತಾ ಹೊರತು ಪಡಿಸಿ 29 ಸಿಎಂಗಳ ಸರಾಸರಿ  ಆಸ್ತಿ 33.96 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ

    MORE
    GALLERIES

  • 68

    Crorepati CMs: ದೇಶದ 30 ಮುಖ್ಯಮಂತ್ರಿಗಳಲ್ಲಿ 29 ಮಂದಿ ಕೋಟ್ಯಾಧಿಪತಿಗಳು! ನಂಬರ್​ 1 ಯಾರು? ಬೊಮ್ಮಾಯಿಗೆ ಎಷ್ಟನೇ ಸ್ಥಾನ!

    ಶ್ರೀಮಂತ ಸಿಎಂಗಳ ಪೈಕಿ ಟಾಪ್ 3 ಮುಖ್ಯಮಂತ್ರಿಗಳನ್ನು ನೋಡುವುದಾದರೆ, ಅರುಣಾಚಲ ಪ್ರದೇಶದ ಸಿಎಂ ಪೇಮಾ ಖಂಡು, ಜಗನ್ ನಂತರದ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ 163 ಕೋಟಿ ರೂಪಾಯಿಗಳಾಗಿದೆ. ಮೂರನೇ ಸ್ಥಾನದಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಇದ್ದು, ಅವರ ಆಸ್ತಿ 63 ಕೋಟಿ ಆಗಿದ್ದು, ಅಗ್ರ 3 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

    MORE
    GALLERIES

  • 78

    Crorepati CMs: ದೇಶದ 30 ಮುಖ್ಯಮಂತ್ರಿಗಳಲ್ಲಿ 29 ಮಂದಿ ಕೋಟ್ಯಾಧಿಪತಿಗಳು! ನಂಬರ್​ 1 ಯಾರು? ಬೊಮ್ಮಾಯಿಗೆ ಎಷ್ಟನೇ ಸ್ಥಾನ!

    ಕಡಿಮೆ ಆಸ್ತಿ ಹೊಂದಿರುವ ಸಿಎಂಗಳನ್ನು ನೋಡುವುದಾದರೆ, ಮಮತಾ ಬ್ಯಾನರ್ಜಿ 15 ಲಕ್ಷ ರೂ, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಕೋಟ್ಯಾಂತರ ಆಸ್ತಿ ಒಂದು ಕೋಟಿ, ಹರಿಯಾಣ ಸಿಎಂ ಮನೋಹರ್ ಲಾಲ್ ಆಸ್ತಿ ಒಂದು ಕೋಟಿ ರೂಪಾಯಿಗಳಾಗಿವೆ. ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಸ್ತಿ 3 ಕೋಟಿ ರೂಪಾಯಿಗಿಂತ ಹೆಚ್ಚಿದೆ.

    MORE
    GALLERIES

  • 88

    Crorepati CMs: ದೇಶದ 30 ಮುಖ್ಯಮಂತ್ರಿಗಳಲ್ಲಿ 29 ಮಂದಿ ಕೋಟ್ಯಾಧಿಪತಿಗಳು! ನಂಬರ್​ 1 ಯಾರು? ಬೊಮ್ಮಾಯಿಗೆ ಎಷ್ಟನೇ ಸ್ಥಾನ!

    30 ಮುಖ್ಯಮಂತ್ರಿಗಳ ಪೈಕಿ 43% ಮುಖ್ಯಮಂತ್ರಿಗಳ ಮೇಲೆ ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ಕೇಜ್ರಿವಾಲ್​ ಸೇರಿದಂತೆ ಶೇ.30 ರಷ್ಟು ಸಿಎಂಗಳು ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.

    MORE
    GALLERIES