ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಮನೆಯಲ್ಲಿ ಮಗನ ವಿವಾಹ ನಿಶ್ಚಿತಾರ್ಥದ ಸಂಭ್ರಮ ಮನೆ ಮೇಳೈಸಿದೆ. ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಎಂಗೇಜ್ ಆಗಿದ್ದಾರೆ. ಈ ಸಂಭ್ರಮದಲ್ಲಿ ಅಂಬಾನಿ ದಂಪತಿ ಹೇಗೆ ಕಾಣಿಸ್ತಿದ್ದರು ಗೊತ್ತಾ? ಫೋಟೋಸ್ ಇಲ್ಲಿವೆ ನೋಡಿ...
ಖ್ಯಾತ ಉದ್ಯಮಿ ಮುಕೇಶ್ ಅಂಬಾನಿಯವರು ಮಗನ ಮದುವೆಯ ಸಂಭ್ರಮದಲ್ಲಿದ್ದಾರೆ. ಮುಂಬೈ ಆಂಟಿಲಿಯಾ ನಿವಾಸದಲ್ಲಿ ಅದ್ಧೂರಿ ಎಂಗೇಜ್ಮೆಂಟ್ ನಡೆದಿದೆ. ಅಂಬಾನಿ ಪುತ್ರ ಅನಂತ್ ಅಂಬಾನಿ ತಮ್ಮ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಎಂಗೇಜ್ ಆಗಿದ್ದಾರೆ.
ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ, ನೀತಾ ಅಂಬಾನಿ ದಂಪತಿ ಮಗನ ಎಂಗೇಜ್ಮೆಂಟ್ ಸಂಭ್ರಮದಲ್ಲಿದ್ದರು.
4/ 8
ಅಂಬಾನಿ ಕುಟುಂಬಸ್ಥರು ಸಂಭ್ರಮದಲ್ಲಿ ಭಾಗಿಯಾಗಿದ್ದರು. ಸಾಂಪ್ರದಾಯಿಕ ಸಮಾರಂಭಗಳ ನಡುವೆ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥ ನೆರವೇರಿತು.
5/ 8
ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಇಂದು ಅಂಬಾನಿ ನಿವಾಸದಲ್ಲಿ ಕುಟುಂಬ, ಸ್ನೇಹಿತರು ಮತ್ತು ಗಣ್ಯರ ಸಮ್ಮುಖದಲ್ಲಿ ನಡುವೆ ಔಪಚಾರಿಕವಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಗೋಲ್ ಧನ ಮತ್ತು ಚುನರಿ ವಿಧಿ ನಂತರ ಉಂಗುರಗಳ ವಿನಿಮಯ ನಡೆಯಿತು.
6/ 8
ಅನಂತ್ ಅವರ ತಾಯಿ ನೀತಾ ಅಂಬಾನಿ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು. ಉಂಗುರ ಬದಲಾಯಿಸಿಕೊಂಡ ನಂತರ ಭಾವಿ ದಂಪತಿ ತಮ್ಮ ಹಿರಿಯರಿಂದ ಆಶೀರ್ವಾದ ಪಡೆದರು.
7/ 8
ಅಂಬಾನಿ ಕುಟುಂಬವು ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಹಾಗೂ ಕುಟುಂಬಸ್ಥರನ್ನು ತಮ್ಮ ನಿವಾಸದಲ್ಲಿ ಆರತಿ ಮತ್ತು ಮಂತ್ರಗಳ ಪಠಣದ ನಡುವೆ ಆತ್ಮೀಯವಾಗಿ ಬರಮಾಡಿಕೊಂಡರು.
8/ 8
ಅನಂತ್ ಸಹೋದರಿ ಇಶಾ ಅವರು ರಿಂಗ್ ಸಮಾರಂಭದ ಬಗ್ಗೆ ಘೋಷಿಸಿದರು. ಆ ಬಳಿಕ ಅನಂತ್ ಮತ್ತು ರಾಧಿಕಾ ಕುಟುಂಬ ಮತ್ತು ಸ್ನೇಹಿತರ ಮುಂದೆ ಉಂಗುರಗಳನ್ನು ಬದಲಾಯಿಸಿಕೊಂಡರು.