Gold Smuggling: ಚಿನ್ನ ಕಳ್ಳ ಸಾಗಣೆಗೆ ಯತ್ನಿಸಿದ ಏರ್‌ ಇಂಡಿಯಾ ಸಿಬ್ಬಂದಿ! ತಗ್ಲಾಕ್ಕೊಂಡಿದ್ದು ಮಾತ್ರ ರೋಚಕ ಸುದ್ದಿ!

ಕೊಚ್ಚಿ: ವಿದೇಶದಿಂದ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ಚಿನ್ನ ಕಳ್ಳಸಾಗಾಣೆ ಮಾಡೋದನ್ನು ಕೇಳಿದ್ದೀವಿ. ಅಷ್ಟೇ ಅಲ್ಲ, ಬಹುತೇಕ ಸಂದರ್ಭದಲ್ಲಿ ಚಿನ್ನ ಕಳ್ಳಸಾಗಾಣೆ ಮಾಡಿ ಏರ್‌ಪೋರ್ಟ್‌ನಲ್ಲಿ ತಗ್ಲಾಕ್ಕೊಂಡವರನ್ನು ನೋಡಿದ್ದೀವಿ. ಅದೆಷ್ಟೇ ರಂಗೋಲಿ ಕೆಳಗೆ ನುಗ್ಗಿ ಚಿನ್ನ ಕಳ್ಳ ಸಾಗಾಣೆ ಮಾಡಲು ಪ್ರಯತ್ನ ಪಟ್ಟರೂ ಅನೇಕ ಮಂದಿ ಕಸ್ಟಮ್ಸ್ ಅಧಿಕಾರಿಗಳ ಮುಂದೆ ತಗ್ಲಾಕ್ಕೊಂಡಿದ್ದಾರೆ. ಅದಿರಲಿ, ಇಲ್ಲಿ ವಿಷಯ ಏನಪ್ಪಾ ಅಂದ್ರೆ, ಇಲ್ಲಿಯತನಕ ಪ್ರಯಾಣಿಕರು ಚಿನ್ನ ಕಳ್ಳಸಾಗಾಣೆ ಮಾಡುತ್ತಿದ್ದರು. ಆದ್ರೆ ಈಗ ವಿಮಾನ ಸಿಬ್ಬಂದಿಯೇ ಇಂತಹ ದುಷ್ಕೃತ್ಯಕ್ಕೆ ಕೈಹಾಕಿದ ಘಟನೆ ನಡೆದಿದೆ.

First published:

  • 17

    Gold Smuggling: ಚಿನ್ನ ಕಳ್ಳ ಸಾಗಣೆಗೆ ಯತ್ನಿಸಿದ ಏರ್‌ ಇಂಡಿಯಾ ಸಿಬ್ಬಂದಿ! ತಗ್ಲಾಕ್ಕೊಂಡಿದ್ದು ಮಾತ್ರ ರೋಚಕ ಸುದ್ದಿ!

    ಹೌದು.. ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 27

    Gold Smuggling: ಚಿನ್ನ ಕಳ್ಳ ಸಾಗಣೆಗೆ ಯತ್ನಿಸಿದ ಏರ್‌ ಇಂಡಿಯಾ ಸಿಬ್ಬಂದಿ! ತಗ್ಲಾಕ್ಕೊಂಡಿದ್ದು ಮಾತ್ರ ರೋಚಕ ಸುದ್ದಿ!

    ಬಂಧಿತ ಆರೋಪಿಯನ್ನು ವಯನಾಡು ಮೂಲದ ಶಫಿ ಎಂದು ಗುರುತಿಸಲಾಗಿದ್ದು, ಈತ 1,487 ಗ್ರಾಂ ಚಿನ್ನಾಭರಣವನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ಆದರೆ ಆತ ಕೊಚ್ಚಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ತಗ್ಲಾಕ್ಕೊಂಡಿದ್ದಾನೆ. ಬಂಧಿಸಿದ್ದಾರೆ.

    MORE
    GALLERIES

  • 37

    Gold Smuggling: ಚಿನ್ನ ಕಳ್ಳ ಸಾಗಣೆಗೆ ಯತ್ನಿಸಿದ ಏರ್‌ ಇಂಡಿಯಾ ಸಿಬ್ಬಂದಿ! ತಗ್ಲಾಕ್ಕೊಂಡಿದ್ದು ಮಾತ್ರ ರೋಚಕ ಸುದ್ದಿ!

    ಬೆಹ್ರೇನ್-ಕೋಝಿಕೋಡ್-ಕೊಚ್ಚಿ ಮಧ್ಯೆ ಸಂಚಾರ ನಡೆಸುತ್ತಿದ್ದ ವಿಮಾನ ಸೇವೆಯ ಕ್ಯಾಬಿನ್ ಸಿಬ್ಬಂದಿ ಶಫಿ ಎಂಬಾತ ಚಿನ್ನ ತರುತ್ತಿದ್ದ ಎಂಬ ಗೌಪ್ಯ ಮಾಹಿತಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್‌ಗೆ ಲಭಿಸಿತ್ತು.

    MORE
    GALLERIES

  • 47

    Gold Smuggling: ಚಿನ್ನ ಕಳ್ಳ ಸಾಗಣೆಗೆ ಯತ್ನಿಸಿದ ಏರ್‌ ಇಂಡಿಯಾ ಸಿಬ್ಬಂದಿ! ತಗ್ಲಾಕ್ಕೊಂಡಿದ್ದು ಮಾತ್ರ ರೋಚಕ ಸುದ್ದಿ!

    ಅದರಂತೆ ಆರೋಪಿಯು ಚಿನ್ನದ ಲೇಪವನ್ನು ಕೈಗೆ ಸುತ್ತಿ, ಅಂಗಿಯ ತೋಳು ಮುಚ್ಚಿಕೊಂಡು ಗ್ರೀನ್‌ ಚಾನೆಲ್ ಮೂಲಕ ಹಾದು ಹೋಗಲು ಪ್ಲಾನ್ ಹಾಕಿದ್ದ ಎಂದು ತಿಳಿದು ಬಂದಿದೆ.

    MORE
    GALLERIES

  • 57

    Gold Smuggling: ಚಿನ್ನ ಕಳ್ಳ ಸಾಗಣೆಗೆ ಯತ್ನಿಸಿದ ಏರ್‌ ಇಂಡಿಯಾ ಸಿಬ್ಬಂದಿ! ತಗ್ಲಾಕ್ಕೊಂಡಿದ್ದು ಮಾತ್ರ ರೋಚಕ ಸುದ್ದಿ!

    ಸದ್ಯ ಆರೋಪಿ ಶಫಿಯನ್ನು ಬಂಧನ ಮಾಡಿರುವ ಅಧಿಕಾರಿಗಳು ಚಿನ್ನ ಕಳ್ಳ ಸಾಗಾಣೆಗೆ ಸಂಬಂಧಿಸಿದಂತೆ ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 67

    Gold Smuggling: ಚಿನ್ನ ಕಳ್ಳ ಸಾಗಣೆಗೆ ಯತ್ನಿಸಿದ ಏರ್‌ ಇಂಡಿಯಾ ಸಿಬ್ಬಂದಿ! ತಗ್ಲಾಕ್ಕೊಂಡಿದ್ದು ಮಾತ್ರ ರೋಚಕ ಸುದ್ದಿ!

    ಇನ್ನೊಂದೆಡೆ ಸಿಂಗಾಪುರದಿಂದ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ಬುಧವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ₹ 3.32 ಕೋಟಿ ಮೌಲ್ಯದ 6.8 ಕೆಜಿ ತೂಕದ ಚಿನ್ನದ ಜೊತೆಗೆ ಬಂಧಿಸಲಾಗಿದೆ ಎಂದು ಚೆನ್ನೈ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

    MORE
    GALLERIES

  • 77

    Gold Smuggling: ಚಿನ್ನ ಕಳ್ಳ ಸಾಗಣೆಗೆ ಯತ್ನಿಸಿದ ಏರ್‌ ಇಂಡಿಯಾ ಸಿಬ್ಬಂದಿ! ತಗ್ಲಾಕ್ಕೊಂಡಿದ್ದು ಮಾತ್ರ ರೋಚಕ ಸುದ್ದಿ!

    ಈ ಬಗ್ಗೆ ಟ್ವೀಟ್ ಮಾಡಿರುವ ಚೆನ್ನೈ ಕಸ್ಟಮ್ಸ್ ‘ಗುಪ್ತ ಮಾಹಿತಿ ಆಧರಿಸಿ, ಸಿಂಗಾಪುರದಿಂದ AI-347 ಮತ್ತು 6E-52 ಮೂಲಕ ಬಂದ 2 ಪ್ಯಾಕ್ ಚಿನ್ನವನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ. ಒಟ್ಟು ₹3.32 ಮೌಲ್ಯದ 6.8 ಕೆಜಿ ತೂಕದ ಚಿನ್ನ ಸಿಕ್ಕಿದೆ ಎಂದು ಟ್ವೀಟ್ ಮಾಡಲಾಗಿದೆ.

    MORE
    GALLERIES