ರಾವಣ ದಹನವನ್ನು ನೋಡಲು ಮೈಮರೆತು ರೈಲ್ವೆ ಹಳಿಯ ಮೇಲೆ ನಿಂತು ನೋಡುತ್ತಿದ್ದ ಜನರಿಗೆ ಯಮನ ರೂಪದಲ್ಲಿ ರೈಲು ಬರುತ್ತದೆ ಎಂಬ ಯಾವುದೇ ಅರಿವಿರಲಿಲ್ಲ. ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ನವರಾತ್ರಿಯ ಕಡೆಯ ರಾತ್ರಿಯೇ ಕೊನೆಯ ರಾತ್ರಿ ಆಯಿತು. ಅಮೃತಸರದ ಬಳಿಕ ಜೊರ್ಘಟಕ್ ಪ್ರದೇಶದಲ್ಲಿ ನಡೆದ ರೈಲು ದುರಂತ ದಸರಾ ಸಂಭ್ರಮವನ್ನೆ ಜನರಿಂದ ಕಿತ್ತುಕೊಂಡಿತ್ತು. ತಮ್ಮವರನ್ನು ಕಳೆದುಕೊಂಡ ಜನರ ಅಳಲು ಮುಗಿಲು ಮುಟ್ಟಿತು. ದೇಶದ್ಯಾಂತ ಸಂಭ್ರಮದಲ್ಲಿದ್ದ ಜನರಿಗೆ ಈ ರೈಲು ದುರಂತ ಆಘಾತವನ್ನೇ ತಂದೊಡ್ಡಿತು