ವಿಮಾನದಲ್ಲಿ ಕೆಲವು ವಸ್ತುಗಳನ್ನು ಕೊಂಡೊಯ್ಯಲು ನಿಷೇಧವಿದೆ. ಹಾಗೆ ವಿಮಾನದೊಳಗೆ ದೂಮಪಾನ ಮಾಡುವುದನ್ನ ನಿಷೇಧಿಸಲಾಗಿದೆ. ಆದರೆ ವ್ಯಕ್ತಿಯೊಬ್ಬರ ಬಟ್ಟೆ ಸರಿಯಿಲ್ಲ ಎಂಬ ಕಾರಣಕ್ಕಾಗಿ ವಿಮಾನವನ್ನು ಹತ್ತಲು ಅನುಮತಿ ನೀಡದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ. ಮೈತುಂಬಾ ಬಟ್ಟೆಯಲ್ಲ ಎಂಬ ಕಾರಣಕ್ಕೆ ಇಬ್ಬರು ಮಹಿಳಾ ಪ್ರಯಾಣಿಕರಿಗೆ ವಿಮಾನ ಪ್ರವೇಶವನ್ನು ತಡೆದ ಘಟನೆ ನಡೆದಿದೆ.
ಮೇ 2 ರಂದು ಲಾಸ್ ವೇಗಾಸ್‌ನ ಹ್ಯಾರಿ ರೀಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಘಟನೆಯ ಬಗ್ಗೆ ಕಾಮೆಡಿಯನ್ ಕ್ರಿಸ್ಸಿ ಮೇರ್ ಟ್ವೀಟ್ ಮಾಡಿದ್ದಾರೆ. ಮೇಯರ್ ಪ್ರಕಾರ, ಅಮೇರಿಕನ್ ಏರ್‌ಲೈನ್ಸ್ ಉದ್ಯೋಗಿಯೊಬ್ಬರು ನಟಿ ಮತ್ತು ಅವರ ಸಹಜ ಪ್ರಯಾಣಿಕರಾದ ಕೀನು ಸಿ. ಥಾಂಪ್ಸನ್ ಅವರನ್ನು ವಿಮಾನ ಏರುವ ಮೊದಲು ಪ್ಯಾಂಟ್ ಬದಲಾಯಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕ್ರಿಸ್ಸಿ ಮೇಯರ್ ತಾವೂ ವಿಮಾನ ಹತ್ತುವ ಮೊದಲು ತೊಟ್ಟಿದ್ದ ಹಾಗೂ ನಂತರ ಧರಿಸಿದ ಬಟ್ಟೆಗಳೊಂದಿಗೆ ಎರಡು ಫೋಟೋಗಳನ್ನು ತೆಗೆದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ ಪ್ರಕಾರ ಆ ಇಬ್ಬರು ಮೊದಲು ಹಾಫ್ ಪ್ಯಾಂಟ್ ಧರಿಸಿದ್ದಾರೆ. ಎರಡನೇ ಚಿತ್ರದಲ್ಲಿ, ಅವರು ಕಾಲು ಮುಚ್ಚಿಕೊಂಡಿರುವ ಹೊಸ ಉಡುಗೆಯನ್ನು ಧರಿಸಿದ್ದಾರೆ. ಪೋಸ್ಟ್ ಅನ್ನು ಮೇ 2 ರಂದು ಹಂಚಿಕೊಳ್ಳಲಾಗಿದೆ. ಟ್ವೀಟ್ ಮಾಡಿದ ನಂತರ, ಈ ಶೇರ್ ಸುಮಾರು 1.9 ಲಕ್ಷಕ್ಕೂ ಹೆಚ್ಚೂ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಏರ್ಲೈನ್ಸ್ಗೆ ಪ್ರತಿಕ್ರಿಯಿಸಿರುವ ಮೇಯರ್, ಇದು ನಿಜವಾಗಿಯೂ ನಿಂದನೀಯ ವರ್ತನೆಯಾಗಿದೆ. ನಾನು ನಿಮ್ಮ ಖಾಯಂ ಗ್ರಾಹಕನಾಗಿದ್ದೇನೆ. ನಾನು ನಿಮ್ಮ ಕ್ರೆಡಿಟ್ ಕಾರ್ಡ್ ಮತ್ತು ಎಲ್ಲವನ್ನೂ ಹೊಂದಿದ್ದೇನೆ ಎಂದು ಹೇಳಿದ್ದಾರೆ. ನಂತರ ವಿಮಾನಯಾನ ಸಂಸ್ಥೆ ಮತ್ತೆ ಉತ್ತರಿಸಿದ್ದು, ನಾವು ನಿಮಗಾಗಿ ಈ ಕುರಿತು ತನಿಖೆಗಳನ್ನು ಮಾಡಲು ಬಯಸುತ್ತೇವೆ. ಹೆಚ್ಚುವರಿ ವಿವರಗಳನ್ನು ನಮಗೆ ಕಳುಹಿಸಿಕೊಡಿ ಎಂದು ತಿಳಿಸಿದೆ. ಆದರೂ ಕೆಲವು ನೆಟ್ಟಿಗರೂ ಮಹಿಳೆಯರನ್ನು ವಿಮಾನ ಗೇಟ್ ಆವರಣದಲ್ಲಿ ಬಟ್ಟೆ ಬದಲಿಸುವಂತೆ ಮಾಡಿದ್ದಕ್ಕೆ ಏರ್ಲೈನ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.