ಗ್ಯಾರೇಜ್ನಿಂದ ಉದ್ಯಮ ಆರಂಭಿಸಿದ ವ್ಯಕ್ತಿಯೊಬಗ್ಬ ವಿಶ್ವದಲ್ಲಿ ಈವರೆಗಿನ ಅತ್ಯಂತ ಶ್ವರೀಮಂತ ವ್ಯಕ್ತಿಯಾಗಿದ್ದಾರೆ. ಈ ವ್ಯಕ್ತಿ ಅದೆಷ್ಟು ಅಸಾಮಾನ್ಯನೆಂದರೆ ಹಲವಾರು ವರ್ಷಗಳಿಂದ ಶ್ರೀಮಂತರ ವಿಶ್ವದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಮೈಕ್ರೋಸಾಫ್ಟ್ನ ಬಿಲ್ ಗೇಟ್ಸ್ರನ್ನೂ ಹಿಂದಿಕ್ಕಿದ್ದಾರೆ. ಇವರು ಬೇರಾರೂ ಅಲ್ಲ, ಅಮೆಜಾನ್ನ ಸಿಇಒ ಜೆಫ್ ಬೆಜೋಸ್ ಆಗಿದ್ದಾರೆ. ಇವರಿಗೆ ಸಂಪತ್ತು ಯಾರದೋ ಕೃಪೆಯಿಂದ ದಲಕ್ಕಿದ್ದಲ್ಲ, ಬದಲಾಗಿ ಇದನ್ನವರು ತಮ್ಮ ಕಠಿಣ ಪರಿಶ್ರಮದಿಂದ ಸಂಪಾದಿಸಿದ್ದಾಗಿದೆ. ಹಾಗಾದ್ರೆ ಇವರ ಬಳಿ ಇರುವ ಸಂಪತ್ತೆಷ್ಟು? ಮುಂದಿನ ಸ್ಲೈಡ್ಗಳಲ್ಲಿದೆ ವಿವರ
ಬೇಜೋಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬುವುದರ ಜೊತೆಗೆ, ಈವರೆಗಿನ ಶ್ರೀಮಂತ ವ್ಯಕ್ತಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಇವರ ಒಟ್ಟು ಆಸ್ತಿ 105 ಬಿಲಿಯನ್ ಡಾಲರ್ ಅಂದರೆ ಸುಮಾರು 66,000 ಕೋಟಿಯಾಗಿದೆ. ಅವರ ಸಂಪತ್ತಿನ ಹೆಚ್ಚಿನ ಪಾಲು ಅಮೆಜಾನ್ನ 7.89 ಕೋಟಿ ಶೇರ್ಗಳಿಂದ ಬರುತ್ತಿದೆ. ಅವರ ಸಂಪತ್ತು ಹೆಚ್ಚಾಗಿದ್ದು ಹೇಗೆ? ಮುಂದಿನ ಸ್ಲೈಡ್ನಲ್ಲಿದೆ ವಿವರ