ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಲಕ್ಷಾಂತರ ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ. ಆದರೆ, ದೇಶದೆಲ್ಲೆಡೆ ಕೊರೋನಾ ಸೋಂಕು ಹೆಚ್ಚಾಗಿರುವುದರಿಂದ ಅಮರನಾಥ ಯಾತ್ರೆ ವೇಳೆ ಸಾವಿರಾರು ಜನರು ಒಂದೇ ಕಡೆ ಸೇರುವುದರಿಂದ ಸೋಂಕು ಇನ್ನಷ್ಟು ಹರಡಬಹುದು ಎಂಬ ಕಾರಣದಿಂದ ಈ ವರ್ಷದ ಅಮರನಾಥ ದೇವಾಲಯದ ದರ್ಶನವನ್ನು ರದ್ದುಗೊಳಿಸಲಾಗಿದೆ.