ತಿರುಪತಿಗೆ ಹೋಗುವ ಭಕ್ತರಿಗೆ ಟಿಟಿಡಿಯು ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕಟ್ಟಡದಲ್ಲಿ ಭಕ್ತರಿಗೆ ಅನ್ನ, ಹಾಲು ಮತ್ತು ನೀರಿನ ಸೌಲಭ್ಯ ಇರುತ್ತದೆ. ಜೊತೆಗೆ ತಿರುಮಲದ ಅನ್ನಪ್ರಸಾದ ಕೌಂಟರ್‌ಗಳು, ನಾರಾಯಣಗಿರಿ ಉದ್ಯಾನವನಗಳು ಮತ್ತು ಭಕ್ತರ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಅನ್ನ, ಹಾಲು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.