Bungalow Controversy: ಕೇಜ್ರಿವಾಲ್ ನಿವಾಸಕ್ಕೆ ಖರ್ಚಾಗಿದ್ದು ₹45 ಕೋಟಿ ಅಲ್ಲ, ₹171 ಕೋಟಿ: ಕಾಂಗ್ರೆಸ್‌ ಗಂಭೀರ ಆರೋಪ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಅಧಿಕೃತ ಸರ್ಕಾರಿ ನಿವಾಸದ ನವೀಕರಣಕ್ಕೆ ಅತೀ ಹೆಚ್ಚು ಖರ್ಚು ಮಾಡಿರುವ ವಿವಾದ ಇದೀಗ ಮುನ್ನೆಲೆಗೆ ಬಂದಿದೆ.

First published:

  • 17

    Bungalow Controversy: ಕೇಜ್ರಿವಾಲ್ ನಿವಾಸಕ್ಕೆ ಖರ್ಚಾಗಿದ್ದು ₹45 ಕೋಟಿ ಅಲ್ಲ, ₹171 ಕೋಟಿ: ಕಾಂಗ್ರೆಸ್‌ ಗಂಭೀರ ಆರೋಪ

    ಕೇಜ್ರಿವಾಲ್ ಸರ್ಕಾರ ಬಂಗಲೆ ನವೀಕರಣಕ್ಕೆ ಖರ್ಚು ಮಾಡಿದ್ದು 45 ಕೋಟಿ ರೂಪಾಯಿ ಅಲ್ಲ, ಬದಲಿಗೆ ಅದರ ಮೂರು ಪಟ್ಟು, ಅಂದ್ರೆ 171 ಕೋಟಿ ರೂಪಾಯಿ ಎಂದು ಕಾಂಗ್ರೆಸ್‌ ಮುಖಂಡ ಅಜಯ್ ಮಾಕೆನ್ ಹೇಳಿದ್ದಾರೆ.

    MORE
    GALLERIES

  • 27

    Bungalow Controversy: ಕೇಜ್ರಿವಾಲ್ ನಿವಾಸಕ್ಕೆ ಖರ್ಚಾಗಿದ್ದು ₹45 ಕೋಟಿ ಅಲ್ಲ, ₹171 ಕೋಟಿ: ಕಾಂಗ್ರೆಸ್‌ ಗಂಭೀರ ಆರೋಪ

    ಇತ್ತೀಚೆಗೆ ಬಿಜೆಪಿಯು ದೆಹಲಿ ಸಿಎಂ ಅಧಿಕೃತ ಸರ್ಕಾರಿ ನಿವಾಸದ ನವೀಕರಣಕ್ಕೆ ಅರವಿಂದ್ ಕೇಜ್ರಿವಾಲ್ ಸರ್ಕಾರ 45 ಕೋಟಿ ರುಪಾಯಿ ಖರ್ಚು ಮಾಡಿದೆ ಎಂದು ಆರೋಪ ಮಾಡಿತ್ತು. ಇದೀಗ ಕಾಂಗ್ರೆಸ್‌ನ ಅಜಯ್ ಮಾಕನ್ ಅವರು ಸರ್ಕಾರಿ ಬಂಗಲೆಯ ನವೀಕರಣಕ್ಕೆ ಕೇಜ್ರಿವಾಲ್ ಸರ್ಕಾರ 171 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    MORE
    GALLERIES

  • 37

    Bungalow Controversy: ಕೇಜ್ರಿವಾಲ್ ನಿವಾಸಕ್ಕೆ ಖರ್ಚಾಗಿದ್ದು ₹45 ಕೋಟಿ ಅಲ್ಲ, ₹171 ಕೋಟಿ: ಕಾಂಗ್ರೆಸ್‌ ಗಂಭೀರ ಆರೋಪ

    ಅಲ್ಲದೇ ಮುಖ್ಯಮಂತ್ರಿಗಳ ವಸತಿ ಸಮುಚ್ಚಯದ ನಿರ್ಮಾಣದ ವಿಸ್ತರಣೆಗಾಗಿ ಮನೆಗಳನ್ನು ಕೆಡವಿ ಅಥವಾ ತೆರವು ಮಾಡಬೇಕಾದ ಅಧಿಕಾರಿಗಳಿಗೆ ತಮ್ಮ ಸರ್ಕಾರ ಹೆಚ್ಚುವರಿ ಫ್ಲ್ಯಾಟ್‌ಗಳನ್ನು ಖರೀದಿಸಬೇಕಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.

    MORE
    GALLERIES

  • 47

    Bungalow Controversy: ಕೇಜ್ರಿವಾಲ್ ನಿವಾಸಕ್ಕೆ ಖರ್ಚಾಗಿದ್ದು ₹45 ಕೋಟಿ ಅಲ್ಲ, ₹171 ಕೋಟಿ: ಕಾಂಗ್ರೆಸ್‌ ಗಂಭೀರ ಆರೋಪ

    ಅರವಿಂದ್‌ ಕೇಜ್ರಿವಾಲ್ ಅವರ ಮನೆಯ ಸುತ್ತಲೂ ನಾಲ್ಕು ಬಿಲ್ಡಿಂಗ್‌ಗಳಿವೆ, ಅದರಲ್ಲಿ 22 ಅಧಿಕಾರಿಗಳು ಇದ್ದಾರೆ. ನವೀಕರಣ ಪ್ರಾರಂಭವಾದಾಗಿನಿಂದ ಕೇಜ್ರಿವಾಲ್ ಅವರ ಬಂಗಲೆಯ ವಿಸ್ತರಣೆಗಾಗಿ ಈ ಫ್ಲಾಟ್‌ಗಳನ್ನು ಖಾಲಿ ಮಾಡಲಾಗುತ್ತಿದೆ ಎಂದು ಅಜಯ್ ಮಾಕನ್ ಹೇಳಿದ್ದಾರೆ.

    MORE
    GALLERIES

  • 57

    Bungalow Controversy: ಕೇಜ್ರಿವಾಲ್ ನಿವಾಸಕ್ಕೆ ಖರ್ಚಾಗಿದ್ದು ₹45 ಕೋಟಿ ಅಲ್ಲ, ₹171 ಕೋಟಿ: ಕಾಂಗ್ರೆಸ್‌ ಗಂಭೀರ ಆರೋಪ

    ಮುಂದುವರಿದು ಮಾತನಾಡಿರುವ ಅಜಯ್ ಮಾಕನ್. ಈಗ, ಅಧಿಕಾರಿಗಳಿಗೆ ವಸತಿ ಕಲ್ಪಿಸಲು, ಸರ್ಕಾರವು ಕಾಮನ್‌ವೆಲ್ತ್ ವಿಲೇಜ್‌ನಲ್ಲಿ ತಲಾ ₹ 6 ಕೋಟಿ ವೆಚ್ಚದಲ್ಲಿ 21 ವಿಧದ 5 ಫ್ಲಾಟ್‌ಗಳನ್ನು ಖರೀದಿಸಿದೆ. ಈ ಹಣವು ರಾಜ್ಯದ ಬೊಕ್ಕಸದಿಂದ ಹೋಗುತ್ತಿದೆ. ಇದನ್ನು ಸಿಎಂ ಬಂಗಲೆಗಾಗಿ ಮಾಡಿದ ವೆಚ್ಚಕ್ಕೆ ಸೇರಿಸಿದ್ದಾರೆ ಎಂದು ಹೇಳಿದ್ದಾರೆ.

    MORE
    GALLERIES

  • 67

    Bungalow Controversy: ಕೇಜ್ರಿವಾಲ್ ನಿವಾಸಕ್ಕೆ ಖರ್ಚಾಗಿದ್ದು ₹45 ಕೋಟಿ ಅಲ್ಲ, ₹171 ಕೋಟಿ: ಕಾಂಗ್ರೆಸ್‌ ಗಂಭೀರ ಆರೋಪ

    ಅರವಿಂದ್ ಕೇಜ್ರಿವಾಲ್ ಅವರು ಸರ್ಕಾರಿ ಬಂಗಲೆಯ ನವೀಕರಣಕ್ಕೆ ಮುಂದಾಗಿನಿಂದ ವಿವಾದ ತಲೆ ಎತ್ತಿತ್ತು. ಆದರೆ ಆಪ್ ಸರ್ಕಾರ ಮಾತ್ರ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿತ್ತು. ಅಲ್ಲದೇ ಇತರ ಸಿಎಂಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೇ ನಮಗಿಂತ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಆಪ್ ಪಕ್ಷದ ಮುಖಂಡರು ಸಮರ್ಥಿಸಿಕೊಂಡಿದ್ದಾರೆ.

    MORE
    GALLERIES

  • 77

    Bungalow Controversy: ಕೇಜ್ರಿವಾಲ್ ನಿವಾಸಕ್ಕೆ ಖರ್ಚಾಗಿದ್ದು ₹45 ಕೋಟಿ ಅಲ್ಲ, ₹171 ಕೋಟಿ: ಕಾಂಗ್ರೆಸ್‌ ಗಂಭೀರ ಆರೋಪ

    ದೆಹಲಿಯ ಮಾಸ್ಟರ್‌ಪ್ಲಾನ್ ಅನ್ನು ಹೇಗೆ ಅಗೌರವಿಸಲಾಗಿದೆ ಎಂಬುದನ್ನು ಎತ್ತಿ ತೋರಿಸಲು ಎಲ್-ಜಿಗೆ ಪತ್ರ ಬರೆಯುವುದಾಗಿ ಅಜಯ್ ಮಾಕೆನ್ ಹೇಳಿದ್ದಾರೆ.

    MORE
    GALLERIES