AICC Press Meet: ದಿಢೀರ್ ಸುದ್ದಿಗೋಷ್ಠಿ ಕರೆದ ಎಐಸಿಸಿ, ಸಿಎಂ ಹೆಸರು ಅಧಿಕೃತ ಘೋಷಣೆ ಸಾಧ್ಯತೆ!

ದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಭರ್ಜರಿ ಬಹುಮತ ಗಳಿಸಿದ ಬಳಿಕ ಸಿಎಂ ಆಯ್ಕೆ ವಿಚಾರವೇ ಹೈಕಮಾಂಡ್‌ಗೆ ಕಗ್ಗಂಟಾಗಿ ಪರಿಣಮಿಸಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಇದೇ ವಿಚಾರವಾಗಿ ದೆಹಲಿ ಅಂಗಳದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಸಿಎಂ ಕುರ್ಚಿಗಾಗಿ ಕದನ ನಡೆಯುತ್ತಿದೆ.

First published:

  • 17

    AICC Press Meet: ದಿಢೀರ್ ಸುದ್ದಿಗೋಷ್ಠಿ ಕರೆದ ಎಐಸಿಸಿ, ಸಿಎಂ ಹೆಸರು ಅಧಿಕೃತ ಘೋಷಣೆ ಸಾಧ್ಯತೆ!

    ಸಿಎಂ ಸ್ಥಾನವೇ ಬೇಕು ಎಂದು ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ಅವರನ್ನು ಮನವೊಲಿಸುವಲ್ಲಿ ಕೊನೆಗೂ ಹೈಕಮಾಂಡ್ ಯಶಸ್ವಿಯಾಗಿದ್ದು, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಹೆಸರು ಫೈನಲ್ ಆದ್ರೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆ ಶಿವಕುಮಾರ್ ಅವರನ್ನು ಒಪ್ಪಿಸುವಲ್ಲಿ ಮಲ್ಲಿಕಾರ್ಜುನ ಖರ್ಗೆ ಯಶಸ್ವಿಯಾಗಿದ್ದಾರೆ.

    MORE
    GALLERIES

  • 27

    AICC Press Meet: ದಿಢೀರ್ ಸುದ್ದಿಗೋಷ್ಠಿ ಕರೆದ ಎಐಸಿಸಿ, ಸಿಎಂ ಹೆಸರು ಅಧಿಕೃತ ಘೋಷಣೆ ಸಾಧ್ಯತೆ!

    ಈ ಮಧ್ಯೆ ಇಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಎಐಸಿಸಿ ದಿಢೀರ್ ಸುದ್ದಿಗೋಷ್ಠಿ ಕರೆದಿದ್ದು, ಸಿಎಂ ಆಯ್ಕೆ ವಿಚಾರ ಕಗ್ಗಂಟಿನ ಮಧ್ಯೆಯೇ ಕಾಂಗ್ರೆಸ್‌ ಹೈಕಮಾಂಡ್ ಸುದ್ದಿಗೋಷ್ಠಿ ಕರೆದಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.

    MORE
    GALLERIES

  • 37

    AICC Press Meet: ದಿಢೀರ್ ಸುದ್ದಿಗೋಷ್ಠಿ ಕರೆದ ಎಐಸಿಸಿ, ಸಿಎಂ ಹೆಸರು ಅಧಿಕೃತ ಘೋಷಣೆ ಸಾಧ್ಯತೆ!

    ಬೆಳಗ್ಗೆ 10 ಗಂಟೆಗೆ ಸರಿಯಾಗಿ ದೆಹಲಿಯಲ್ಲಿ ನಡೆಯಲಿರುವ ಈ ಮಹತ್ವದ ಸುದ್ದಿಗೋಷ್ಠಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡೆಸಲಿದ್ದು, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.

    MORE
    GALLERIES

  • 47

    AICC Press Meet: ದಿಢೀರ್ ಸುದ್ದಿಗೋಷ್ಠಿ ಕರೆದ ಎಐಸಿಸಿ, ಸಿಎಂ ಹೆಸರು ಅಧಿಕೃತ ಘೋಷಣೆ ಸಾಧ್ಯತೆ!

    ನಿನ್ನೆ ತಡರಾತ್ರಿ ಕರ್ನಾಟಕದ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರು ಫೈನಲ್ ಆಗಿರುವುದರಿಂದ ಇಂದು ನಡೆಯಲಿರುವ ಮಹತ್ವದ ಸುದ್ದಿಗೋಷ್ಠಿಯಲ್ಲಿ ಸಿಎಂ ಸ್ಥಾನದ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.

    MORE
    GALLERIES

  • 57

    AICC Press Meet: ದಿಢೀರ್ ಸುದ್ದಿಗೋಷ್ಠಿ ಕರೆದ ಎಐಸಿಸಿ, ಸಿಎಂ ಹೆಸರು ಅಧಿಕೃತ ಘೋಷಣೆ ಸಾಧ್ಯತೆ!

    ಇನ್ನು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಸಮಾನವಾಗಿ ಅಧಿಕಾರ ಹಸ್ತಾಂತರ ನಡೆಯಲಿದ್ದು, ಎರಡೂವರೆ ವರ್ಷ ಸಿದ್ದರಾಮಯ್ಯ ಮತ್ತು ಮತ್ತೆ ಎರಡೂವರೆ ವರ್ಷ ಡಿಕೆ ಶಿವಕುಮಾರ್ ಸಿಎಂ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

    MORE
    GALLERIES

  • 67

    AICC Press Meet: ದಿಢೀರ್ ಸುದ್ದಿಗೋಷ್ಠಿ ಕರೆದ ಎಐಸಿಸಿ, ಸಿಎಂ ಹೆಸರು ಅಧಿಕೃತ ಘೋಷಣೆ ಸಾಧ್ಯತೆ!

    ಡಿಕೆ ಶಿವಕುಮಾರ್ ಬಿಗಿಪಟ್ಟಿನ ಮಧ್ಯೆಯೂ ಸಿದ್ದರಾಮಯ್ಯ ಅವರಿಗೇ ಸಿಎಂ ಸ್ಥಾನ ನೀಡಲು ಹೈಕಮಾಂಡ್ ಒಲವು ತೋರಿರುವುದರ ಹಿಂದೆ ಹತ್ತಾರು ಲೆಕ್ಕಾಚಾರಗಳಿದ್ದು, ಪಕ್ಷದ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

    MORE
    GALLERIES

  • 77

    AICC Press Meet: ದಿಢೀರ್ ಸುದ್ದಿಗೋಷ್ಠಿ ಕರೆದ ಎಐಸಿಸಿ, ಸಿಎಂ ಹೆಸರು ಅಧಿಕೃತ ಘೋಷಣೆ ಸಾಧ್ಯತೆ!

    ಇನ್ನು ಮೇ 20ರಂದು ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯ ಪ್ರಮಾನವಚನ ಕಾರ್ಯಕ್ರಮ ನಡೆಯಲಿದ್ದು, ಇದೇ ವೇಳೆ ಎರಡೂ ಬಣದ ಸುಮಾರು 20ಕ್ಕೂ ಹೆಚ್ಚು ಮಂದಿ ಸಂಪುಟ ದರ್ಜೆ ಸಚಿವರಾಗಿಯೂ ಪ್ರಮಾಣವಚನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

    MORE
    GALLERIES