10 ವರ್ಷಗಳ ಹಿಂದೆ ಮದುವೆಯಾಗಿರುವ ಪ್ರಮೋದ್ ದಾಸ್ ಮತ್ತು ಶುಕ್ಲಾ ದೇವಿ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದು, ತನ್ನ ಗಂಡನಿಂದ ಬೇರ್ಪಟ್ಟ ನಂತರ ಕಳೆದ ಆರು ತಿಂಗಳ ಹಿಂದೆ ಸ್ವಂತ ನಾದಿನಿಯನ್ನೇ ಶುಕ್ಲಾ ದೇವಿ ವಿವಾಹವಾಗಿ ಪರಸ್ಪರ ಒಟ್ಟಿಗೆ ಬದಕಲು ಆರಂಭಿಸಿದ್ದಾರೆ. ಜೊತೆಹೆ ಎಲ್ಲಾ ರೀತಿಯ ಶಾಸ್ತ್ರ, ಸಂಪ್ರದಾಯಗಳಿಗೆ ಸೆಡ್ಡು ಹೊಡೆದು ನಮ್ಮ ಬದುಕು ನಮ್ಮ ಇಷ್ಟ ಎಂಬಂತೆ ಬದುಕುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶುಕ್ಲಾ ದೇವಿ, ‘ನಾವಿಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದೆವು. ಹೀಗಾಗಿ ನಾವು ಮದುವೆಯಾಗಿದ್ದೇವೆ ಎಂದು ಹೇಳಿದ್ಧಾರೆ. ಅಲ್ಲದೇ, ಈಗಾಗಲೇ ಮದುವೆಯಾಗಿ ಗಂಡ ಇರುವಾಗ ನಾದಿನಿಯನ್ನು ಏಕೆ ಮದವೆ ಆಗಿದ್ದೀರಿ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ‘ಆತ ನನ್ನ ಗಂಡ ಆಗಿದ್ದರೆ ಏನಂತೆ? ಎಲ್ಲಿ ಪ್ರೀತಿ ಇರುತ್ತದೆಯೋ ನಾವು ಅಲ್ಲಿ ಉಳಿದುಕೊಳ್ಳುತ್ತೇವೆ. ನಾವಿಬ್ಬರೂ ಮದುವೆಯಾದ ನಂತರ ಬಹಳ ಖುಷಿಯಾಗಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.
ತನ್ನ ಹೆಂಡತಿ ತನ್ನಿಂದ ಬೇರ್ಪಟ್ಟು ತಂಗಿಯ ಜೊತೆಗೆ ವಿವಾಹ ಆಗಿರುವ ಕುರಿತಂತೆ ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಶುಕ್ಲಾ ದೇವಿ ಪತಿ ಪ್ರಮೋದ್ ದಾಸ್, ‘ನನ್ನ ಪತ್ನಿ ಮತ್ತು ತಂಗಿಯ ಈ ಸಂಸಾರಕ್ಕೆ ತನ್ನ ಆಕ್ಷೇಪವಿಲ್ಲ. ಅವಳು ಖುಷಿಯಾಗಿದ್ದರೆ ನಾನೂ ಸಂತಸದಿಂದ ಇರುತ್ತೇನೆ. ನನ್ನ ಹೆಂಡತಿಗೆ ನನ್ನ ತಂಗಿ ಮೇಲೆ ಪ್ರೀತಿ ಮೂಡಿತ್ತು. ಅದಾದ ಬಳಿಕ ಅವರಿಬ್ಬರೂ ಜತೆಯಾಗಿ ವಾಸಿಸಲು ಆರಂಭಿಸಿದ್ದಾರೆ’ ಎಂದು ಹೇಳಿದ್ದಾರೆ.