Afghanistan: ದೇಶ ಬಿಟ್ಟು ಜೀವ ಉಳಿಸೊಕೊಳ್ಳೋಕೆ ಒದ್ದಾಡ್ತಿದ್ದಾರೆ ಆಫ್ಘನ್ನರು, ಈಗ ಹೇಗಿದೆ ಅಲ್ಲಿನ ಪರಿಸ್ಥಿತಿ? ಚಿತ್ರಗಳಲ್ಲಿ ನೋಡಿ
Afghanistan: ತಾಲಿಬಾನ್ (Taliban) ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಕಾಬುಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನ ಜೀವಭಯದಿಂದ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅನಿವಾರ್ಯವಾಗಿ ತಾವು ಗಾಳಿಯಲ್ಲಿ ಗುಂಡು ಹಾರಿಸಿ ಗುಂಪು ಚದುರಿಸಬೇಕಾಯ್ತು ಎಂದು ಅಮೇರಿಕಾ ಸೈನ್ಯ ತಿಳಿಸಿತ್ತು. ವಿಮಾನ ಟೇಕಾಫ್ ಆಗುವುದೇ ಅಸಾಧ್ಯ ಎನ್ನುವಂಥಾ ಪರಿಸ್ಥಿತಿ ಬಂದಿದ್ದರಿಂದ ಹಾಗೆ ಮಾಡಬೇಕಾಯ್ತು ಎಂದಿದ್ದಾರೆ.