Kamal Haasan: ನಟ ಕಮಲ್ ಹಾಸನ್ಗೆ ಕೋವಿಡ್ ಸೋಂಕು ದೃಢ; ಆಸ್ಪತ್ರೆಗೆ ದಾಖಲು
ಕೊರೋನಾ ಅಲೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ನಟ ಕಮಲ್ ಹಾಸನ್ (Kamal haasan) ಕೋವಿಡ್ ಸೋಂಕಿಗೆ (Covid-19) ತುತ್ತಾಗಿದ್ದಾರೆ. ಈ ಸಂಬಂಧ ಟ್ವೀಟರ್ನಲ್ಲಿ ದೃಢಪಡಿಸಿರುವ ನಟ ಅಮೆರಿಕದಿಂದ (America) ಮರಳಿದ ಬಳಿಕ ತಮಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಎಂದಿ ತಿಳಿಸಿದ್ದಾರೆ.
ನಟ ಕಮಲ್ ಹಾಸನ್ ಆರೋಪಿಸಿರುವ ಹೊಸ ಬಟ್ಟೆ ಉದ್ಯಮದ ಶಾಪ್ ಉದ್ಘಾಟನೆಗೆಗಾಗಿ ಅವರು ಅಮೆರಿಕಕ್ಕೆ ತೆರಳಿದ್ದರು. ಕಮಲ್ ಹೌಸ್ ಆಫ್ ಖದ್ದರ್ ಎಂಬ ತಮ್ಮ ಜವಳಿ ಮಳಿಗೆಯನ್ನು ಅವರು ಅಮೆರಿಕದಲ್ಲಿ ಪ್ರಾರಂಭಿಸಿದ್ದಾರೆ.
2/ 5
ಅಮೆರಿದಿಂದ ಮರಳಿದ ಬಳಿಕ ಅವರಿಗೆ ಸ್ವಲ್ಪ ಕೆಮ್ಮು ಕಾಣಿಸಿಕೊಂಡಿದೆ. ಈ ವೇಳೆ ತಪಾಸಣೆಗಗೆ ಒಳಗಾದ ಅವರಿಗೆ ಕೋವಿಡ್ ಧೃಡ ಪಟ್ಟಿದೆ. ಸದ್ಯ ಅವರು ಚೆನ್ನೈ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
3/ 5
ಈ ಸಂಬಂಧ ಟ್ವೀಟ್ ಮಾಡಿರುವ ಅವರು ಇತ್ತೀಚೆಗೆ ತಮ್ಮ ಸಂಪರ್ಕಕ್ಕೆ ಒಳಗಾದವರು ಎಚ್ಚರವಹಿಸುವಂತೆ ಮನವಿ ಮಾಡಿದ್ದು, ಇನ್ನೂ ಕೋವಿಡ್ ನಮ್ಮಿಂದ ದೂರ ಆಗಿಲ್ಲ. ಈ ಹಿನ್ನಲೆ ಪರೀಕ್ಷೆಗೆ ಒಳಗೊಳ್ಳುವಂತೆ ತಿಳಿಸಿದ್ದಾರೆ.
4/ 5
ಕೋವಿಡ್ ನಮ್ಮಿಂದ ದೂರ ಆಗಿದೆ ಎಂದು ಅನೇಕರು ತಿಳಿದಿದ್ದಾರೆ. ಆದರೆ, ಅದು ಇನ್ನೂ ಆಗಿಲ್ಲ. ಈ ಬಗ್ಗೆ ಜನರು ಜಾಗ್ರತೆವಹಿಸುವುದು ಅವಶ್ಯ ಜೊತೆಗೆ ಮುನ್ನೆಚ್ಚರಿಕೆಯನ್ನು ಮರೆಯದೇ ಪಾಲಿಸಬೇಕು ಎಂದಿದ್ದಾರೆ.
5/ 5
ನಟ ಕಮಲ್ ಹಾಸನ್ ಅವರು ಕಳೆದ ಮಾರ್ಚ್ನಲ್ಲಿಯೇ ಕೋವಿಡ್ ಮೊದಲ ಡೋಸ್ ಲಸಿಕೆ ಪಡೆದಿದ್ದರು. ಎರಡು ಡೋಸ್ ಲಸಿಕೆ ಪಡೆದ ಬಳಿಕವೂ ಅವರಿಗೆ ಸೋಂಕು ದೃಢಪಟ್ಟಿದೆ.