Dementia: ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 1 ಕೋಟಿಗೂ ಹೆಚ್ಚು ಜನರಿಗೆ ಮರೆವಿನ ಕಾಯಿಲೆ!

ನವದೆಹಲಿ: ಭಾರತದಲ್ಲಿ 60 ವರ್ಷ ಮತ್ತು ಅದಕ್ಕಿಂತಲೂ ಹೆಚ್ಚಿನ ವಯಸ್ಸಿನ 1 ಕೋಟಿಗೂ ಹೆಚ್ಚು ಜನರು ಮರೆವಿನ ಕಾಯಿಲೆಯಿಂದ ಬಳಲು ಸಾಧ್ಯತೆ ಇದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಮನುಷ್ಯರಿಗೆ ವಯಸ್ಸಾದಂತೆ ಮರೆವಿನ ಕಾಯಿಲೆ ಹೆಚ್ಚಾಗುತ್ತಿದ್ದು, ಅದರಲ್ಲೂ 60 ವರ್ಷ ಕಳೆದ ನಂತರ ಅರಳು ಮರಳು ಎಂಬ ಮಾತೇ ಇದೆ. ಇದೀಗ ಈ ಮಾತಿಗೆ ಪುಷ್ಠಿ ನೀಡುವಂತೆ 60 ಮತ್ತು ಅದಕ್ಕಿಂತ ಹೆಚ್ಚಿನ ಜನರಲ್ಲಿ ಮರೆವಿನ ಕಾಯಿಲೆ ಇರಬಹುದು ಎಂದು ಸಂಶೋಧನೆಯಲ್ಲಿ ಬಹಿರಂಗವಾಗಿದೆ.

First published:

  • 17

    Dementia: ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 1 ಕೋಟಿಗೂ ಹೆಚ್ಚು ಜನರಿಗೆ ಮರೆವಿನ ಕಾಯಿಲೆ!

    ಈ ಸಂಶೋಧನೆಯ ಬಗ್ಗೆ ‘ನ್ಯೂರೋಪಿಡೆಮಿಯಾಲಜಿ’ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದ್ದು, ಈ ಬಗ್ಗೆ ಭಾರತದಲ್ಲಿ ಸಂಶೋಧನೆಗಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದೊಂದಿಗೆ 31,477 ಹಿರಿಯ ವಯಸ್ಕರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿದೆ.

    MORE
    GALLERIES

  • 27

    Dementia: ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 1 ಕೋಟಿಗೂ ಹೆಚ್ಚು ಜನರಿಗೆ ಮರೆವಿನ ಕಾಯಿಲೆ!

    60 ವರ್ಷ ಅಥವಾ ಅದಕ್ಕಿಂತಲೂ ಮೇಲ್ಪಟ್ಟ ವಯೋಮಾನದ 1.08 ಕೋಟಿ ಜನರಲ್ಲಿ ಶೇ 8.44ರಷ್ಟು ಜನರು ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ.

    MORE
    GALLERIES

  • 37

    Dementia: ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 1 ಕೋಟಿಗೂ ಹೆಚ್ಚು ಜನರಿಗೆ ಮರೆವಿನ ಕಾಯಿಲೆ!

    ಇನ್ನು ಅಮೆರಿಕ, ಬ್ರಿಟನ್‌ನಲ್ಲಿನ ಜನರು ಎದುರಿಸುತ್ತಿರುವ ಮರೆವಿನ ಕಾಯಿಲೆ ಪ್ರಮಾಣಕ್ಕೆ ಹೋಲಿಸಿದರೆ ಭಾರತದ ಪ್ರಮಾಣ ಹೆಚ್ಚೇ ಇದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

    MORE
    GALLERIES

  • 47

    Dementia: ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 1 ಕೋಟಿಗೂ ಹೆಚ್ಚು ಜನರಿಗೆ ಮರೆವಿನ ಕಾಯಿಲೆ!

    ವಯೋವೃದ್ಧರು, ಮಹಿಳೆಯರು, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ವರದಿಯ ಸಹ ಲೇಖಕ ಹಾವೋಮಿಯಾವೊ ಜಿನ್‌ ಅವರು ಹೇಳಿದ್ದಾರೆ.

    MORE
    GALLERIES

  • 57

    Dementia: ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 1 ಕೋಟಿಗೂ ಹೆಚ್ಚು ಜನರಿಗೆ ಮರೆವಿನ ಕಾಯಿಲೆ!

    ಈ ಅಧ್ಯಯನಕ್ಕಾಗಿ ಇಂಗ್ಲೆಂಡ್‌ನ ಸರ್ರೇ ವಿಶ್ವವಿದ್ಯಾಲಯ, ಅಮೆರಿಕದ ಸದರನ್‌ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಮಿಶಿಗನ್‌ ವಿಶ್ವವಿದ್ಯಾಲಯ, ಭಾರತದ ಏಮ್ಸ್‌ ಸಂಸ್ಥೆಗಳು ಜಂಟಿಯಾಗಿ ಎಐ ಕಲಿಕಾ ಮಾದರಿಯನ್ನು ಅಭಿವೃದ್ಧಿಪಡಿಸಿದ್ದವು.

    MORE
    GALLERIES

  • 67

    Dementia: ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 1 ಕೋಟಿಗೂ ಹೆಚ್ಚು ಜನರಿಗೆ ಮರೆವಿನ ಕಾಯಿಲೆ!

    ಇನ್ನು ಈ ಅಧ್ಯಯನದ ಪ್ರಕಾರ ಮರೆವಿನ ಕಾಯಿಲೆಗೆ ಸೂಕ್ತ ರೋಗ ಯಾವುದೆಂದು ಪತ್ತೆ ಹಚ್ಚಲಾಗಿಲ್ಲ. ಆದರೆ ಮರೆವಿನ ಕಾಯಿಲೆ ಇರುವುದನ್ನು ಮಾತ್ರ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಲಾಗಿದೆ.

    MORE
    GALLERIES

  • 77

    Dementia: ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 1 ಕೋಟಿಗೂ ಹೆಚ್ಚು ಜನರಿಗೆ ಮರೆವಿನ ಕಾಯಿಲೆ!

    ಸಾಮಾನ್ಯವಾಗಿ ವಯಸ್ಸಾಗಿರುವುದು, ಜೀವನದಲ್ಲಿ ಜಿಗುಪ್ಸೆ, ಮಕ್ಕಳ ನಿರ್ಲಕ್ಷ್ಯ, ಮನೆಯಲ್ಲೇ ಇರುವುದು, ದೇಹ ಸ್ಪಂದನೆಯಲ್ಲಿ ಇಳಿಮುಖ ಮುಂತಾದ ಕಾರಣಗಳಿಂದ ಮರೆವಿನ ಕಾಯಿಲೆ ಉಂಟಾಗಿರುವ ಸಾಧ್ಯತೆ ಇದೆ ಅಂತಾನೂ ಹೇಳಲಾಗ್ತಿದೆ. ಆದರೆ ನಿಖರ ಕಾರಣ ತಿಳಿದುಬಂದಿಲ್ಲ.

    MORE
    GALLERIES