Triple Talaq: ಸೈಬರ್​ ವಂಚಕರಿಂದ ಒಂದೂವರೆ ಲಕ್ಷ ಕಳೆದುಕೊಂಡ ಪತ್ನಿ! ಸಂತೈಸುವುದು ಬಿಟ್ಟು ತಲಾಕ್ ನೀಡಿದ ಪತಿ!

ಭುವನೇಶ್ವರ್: ಸೈಬರ್​ ವಂಚನೆಗೆ ಬಲಿಯಾಗಿ 1.5 ಲಕ್ಷ ರೂಪಾಯಿ ಕಳೆದುಕೊಂಡಿದ್ದ ಹೆಂಡತಿಗೆ ಸಂತೈಸುವುದನ್ನ ಬಿಟ್ಟು ತ್ರಿವಳಿ ತಲಾಕ್ ನೀಡಿದ ಘಟನೆ ಬೆಳಕಿಗೆ ಬಂದಿದೆ.

First published:

  • 17

    Triple Talaq: ಸೈಬರ್​ ವಂಚಕರಿಂದ ಒಂದೂವರೆ ಲಕ್ಷ ಕಳೆದುಕೊಂಡ ಪತ್ನಿ! ಸಂತೈಸುವುದು ಬಿಟ್ಟು ತಲಾಕ್ ನೀಡಿದ ಪತಿ!

    ಭುವನೇಶ್ವರ್: ಸೈಬರ್​ ವಂಚನೆಗೆ ಬಲಿಯಾಗಿ 1.5 ಲಕ್ಷ ರೂಪಾಯಿ ಕಳೆದುಕೊಂಡಿದ್ದ ಹೆಂಡತಿಗೆ ಸಂತೈಸುವುದನ್ನ ಬಿಟ್ಟು ತ್ರಿವಳಿ ತಲಾಕ್ ನೀಡಿದ ವ್ಯಕ್ತಿಯೊಬ್ಬನ ವಿರುದ್ಧ ಒಡಿಶಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    MORE
    GALLERIES

  • 27

    Triple Talaq: ಸೈಬರ್​ ವಂಚಕರಿಂದ ಒಂದೂವರೆ ಲಕ್ಷ ಕಳೆದುಕೊಂಡ ಪತ್ನಿ! ಸಂತೈಸುವುದು ಬಿಟ್ಟು ತಲಾಕ್ ನೀಡಿದ ಪತಿ!

    ಒಡಿಶಾದ ಕೇಂದ್ರಪಾರ ಜಿಲ್ಲೆಯ 32 ವರ್ಷದ ಮಹಿಳೆಯೊಬ್ಬರು ತಮ್ಮ ಪತಿ ತಮಗೆ ಮೂರು ಬಾರಿ ತಲಾಕ್ ಹೇಳಿ ಅಕ್ರಮವಾಗಿ ವಿಚ್ಛೇದನ ನೀಡಿದ್ದಾನೆ ಎಂದು ದೂರು ನೀಡಿದ್ದಾರೆ.

    MORE
    GALLERIES

  • 37

    Triple Talaq: ಸೈಬರ್​ ವಂಚಕರಿಂದ ಒಂದೂವರೆ ಲಕ್ಷ ಕಳೆದುಕೊಂಡ ಪತ್ನಿ! ಸಂತೈಸುವುದು ಬಿಟ್ಟು ತಲಾಕ್ ನೀಡಿದ ಪತಿ!

    ಪ್ರಸ್ತುತ ಗುಜರಾತ್​ನಲ್ಲಿ ವಾಸಿಸುತ್ತರುವ ಪತಿ ಏಪ್ರಿಲ್​ 1ರಂದು ತಮಗೆ ಮೂರು ಬಾರಿ ತಲಾಕ್​ ಹೇಳಿದರು ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. ಮೊಬೈಲ್​ ಮೂಲಕ ಸೈಬರ್​ ವಂಚನೆಗೆ ಒಳಗಾಗಿ ಒಂದೂವರೆ ಲಕ್ಷ ಕಳೆದುಕೊಂಡ ವಿಚಾರ ತಿಳಿದ ಪತಿ ತಮಗೆ ವಿಚ್ಛೇದನ ನೀಡಿದ್ದಾರೆ ಎಂದು ಮಹಿಳೆ ತಿಳಿಸಿದ್ದಾಳೆ.

    MORE
    GALLERIES

  • 47

    Triple Talaq: ಸೈಬರ್​ ವಂಚಕರಿಂದ ಒಂದೂವರೆ ಲಕ್ಷ ಕಳೆದುಕೊಂಡ ಪತ್ನಿ! ಸಂತೈಸುವುದು ಬಿಟ್ಟು ತಲಾಕ್ ನೀಡಿದ ಪತಿ!

    ಸಂತ್ರಸ್ತ ಮಹಿಳೆ 15 ವರ್ಷಗಳ ಹಿಂದೆ ವಿವಾಹವಾಗಿದ್ದಾಗಿ ಹಾಗೂ ಮೂರು ಹದಿಹರೆಯದ ಮಕ್ಕಳಿರುವುದಾಗಿ ತಿಳಿಸಿದ್ದಾರೆ. ಆ ಮಹಿಳೆ ಸೈಬರ್ ಕ್ರಿಮಿನಲ್‌ಗಳಿಂದ ಹೇಗೆ ಹಣವನ್ನು ಕಳೆದುಕೊಂಡಳು ಎಂಬ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ.

    MORE
    GALLERIES

  • 57

    Triple Talaq: ಸೈಬರ್​ ವಂಚಕರಿಂದ ಒಂದೂವರೆ ಲಕ್ಷ ಕಳೆದುಕೊಂಡ ಪತ್ನಿ! ಸಂತೈಸುವುದು ಬಿಟ್ಟು ತಲಾಕ್ ನೀಡಿದ ಪತಿ!

    ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರಪಾರ ಸದರ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸರೋಜ್ ಕುಮಾರ್ ಸಾಹೂ ತಿಳಿಸಿದ್ದಾರೆ.

    MORE
    GALLERIES

  • 67

    Triple Talaq: ಸೈಬರ್​ ವಂಚಕರಿಂದ ಒಂದೂವರೆ ಲಕ್ಷ ಕಳೆದುಕೊಂಡ ಪತ್ನಿ! ಸಂತೈಸುವುದು ಬಿಟ್ಟು ತಲಾಕ್ ನೀಡಿದ ಪತಿ!

    2017 ರಿಂದ ಭಾರತದಲ್ಲಿ ತ್ರಿವಳಿ ತಲಾಖ್ ನೀಡುವುದು ಅಕ್ರಮವಾಗಿದೆ. ವಿವಾಹ ರಕ್ಷಣೆಯ ಕಾಯ್ದೆಯಡಿ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಇನ್ನು ಮಹಿಳೆ ತನಗೆ ಪತಿಯಿಂದ ವರದಕ್ಷಿಣೆ ಕಿರುಕುಳವೂ ಇತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

    MORE
    GALLERIES

  • 77

    Triple Talaq: ಸೈಬರ್​ ವಂಚಕರಿಂದ ಒಂದೂವರೆ ಲಕ್ಷ ಕಳೆದುಕೊಂಡ ಪತ್ನಿ! ಸಂತೈಸುವುದು ಬಿಟ್ಟು ತಲಾಕ್ ನೀಡಿದ ಪತಿ!

    ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆಯಡಿ ತ್ರಿವಳಿ ತಲಾಕ್ ಘೋಷಿಸುವ ವ್ಯಕ್ತಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

    MORE
    GALLERIES