ತೆಲಂಗಾಣದ ಚಿಂತಕಣಿ ಮಂಡಲದ ಸೀತಂಪೇಟ್ ಗ್ರಾಮದಲ್ಲಿ ನಡೆಯುತ್ತಿದ್ದ ಈ ಮದುವೆ ಸಮಾರಂಭದಲ್ಲಿ ಎಲ್ಲಾ ಮಹಿಳೆಯರು ಒಟ್ಟಾಗಿ ಡಿಜೆ ಹಾಡಿಗೆ ನೃತ್ಯ ಮಾಡುತ್ತಿದ್ದರು. ಮೃತ ಮಹಿಳೆ ರಾಣಿ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಮದುವೆಯ ಮೆರವಣಿಗೆ ಮುಗಿಯುವ ಹೊತ್ತಿಗೆ ವಧುವನ್ನು ಪತಿಯೊಂದಿಗೆ ಮನೆಗೆ ಕಳುಹಿಸುತ್ತಿದ್ದಾಗ ಆಚರಿಸುವ ‘ಅಪ್ಪಗಿಂಥಳು’ ಎಂಬ ಸಂಪ್ರದಾಯ ಮಾಡುವ ವೇಳೆ ಮಹಿಳೆ ಇದ್ದಕ್ಕಿದ್ದಂತೆ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ.
ಇನ್ನೊಂದೆಡೆ ಮಧ್ಯಪ್ರದೇಶದಲ್ಲೂ ಕೂಡ ಇಂತಹದೇ ಘಟನೆಯೊಂದು ನಡೆದಿದೆ. ಭೋಪಾಲ್‌ನಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಸಹೋದ್ಯೋಗಿಗಳೊಂದಿಗೆ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುವಾಗ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಭೋಪಾಲ್ ಪೋಸ್ಟಲ್ ಸರ್ಕಲ್ ಕಛೇರಿಯ ಸಹಾಯಕ ನಿರ್ದೇಶಕ ಸುರೇಂದ್ರ ಕುಮಾರ್ ದೀಕ್ಷಿತ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ನೃತ್ಯ ಮಾಡುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ.