Emergency Exit: ವಿಮಾನದ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನ; ತಡೆಯಲು ಬಂದ ಸಿಬ್ಬಂದಿಗೆ ಚಾಕು ಇರಿತ!

ಲಾಸ್ ಏಂಜಲೀಸ್: ಯುನೈಟೆಡ್‌ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ವಿಮಾನದ ತುರ್ತು ಬಾಗಿಲನ್ನು ತೆರೆಯಲು ಪ್ರಯತ್ನಿಸುತ್ತಿದ್ದ ಘಟನೆ ನಡೆದಿದೆ. ಅಲ್ಲದೇ ತಡೆಯಲು ಬಂದ ವಿಮಾನದ ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಸಿದ್ದು ಮಾತ್ರವಲ್ಲದೇ ಚಾಕುವಿನಿಂದ ಇರಿದು ರಾದ್ಧಾಂತ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

First published:

  • 17

    Emergency Exit: ವಿಮಾನದ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನ; ತಡೆಯಲು ಬಂದ ಸಿಬ್ಬಂದಿಗೆ ಚಾಕು ಇರಿತ!

    ಯುನೈಟೆಡ್​ ಏರ್​ಲೈನ್ಸ್​ ವಿಮಾನವು ಲಾಸ್​ ಏಂಜಲೀಸ್​ನಿಂದ ಬೋಸ್ಟನ್​ಗೆ ತೆರಳುತ್ತಿತ್ತು. ಈ ವೇಳೆ ಪ್ರಯಾಣಿಕನೊಬ್ಬ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದು, ತಡೆಯಲು ಬಂದ ಸಿಬ್ಬಂದಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.

    MORE
    GALLERIES

  • 27

    Emergency Exit: ವಿಮಾನದ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನ; ತಡೆಯಲು ಬಂದ ಸಿಬ್ಬಂದಿಗೆ ಚಾಕು ಇರಿತ!

    ನಂತರ ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿ ಟೊರೆಸ್ (33) ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ಮಾರ್ಚ್​ 9 ರವರೆಗೆ ಕಸ್ಟಡಿಯಲ್ಲಿಡಲು ನ್ಯಾಯಾಲಯ ಆದೇಶಿಸಿದೆ.

    MORE
    GALLERIES

  • 37

    Emergency Exit: ವಿಮಾನದ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನ; ತಡೆಯಲು ಬಂದ ಸಿಬ್ಬಂದಿಗೆ ಚಾಕು ಇರಿತ!

    ಟೊರೆಸ್ ಲಾಸ್ ಏಂಜಲೀಸ್‌ನಿಂದ ಬೋಸ್ಟನ್‌ಗೆ ಯುನೈಟೆಡ್ ಏರ್‌ಲೈನ್ಸ್ ವಿಮಾನವನ್ನು ಹತ್ತಿದ್ದ. ಲ್ಯಾಂಡಿಂಗ್‌ಗೆ ಸುಮಾರು 45 ನಿಮಿಷಗಳ ಮೊದಲು, ವಿಮಾನ ಸಿಬ್ಬಂದಿಗೆ ಕಾಕ್‌ಪಿಟ್‌ನಲ್ಲಿ ಎಚ್ಚರಿಕೆಯ ಶಬ್ದ ಕೇಳಿಸಿದೆ, ಅಲ್ಲದೇ, ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಸಂದೇಶ ಬಂದಿದೆ.

    MORE
    GALLERIES

  • 47

    Emergency Exit: ವಿಮಾನದ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನ; ತಡೆಯಲು ಬಂದ ಸಿಬ್ಬಂದಿಗೆ ಚಾಕು ಇರಿತ!

    ಇದಾದ ಬಳಿಕ ಬಾಗಿಲಿನ ಲಾಕ್ ಹ್ಯಾಂಡಲ್ ತೆರೆಯಲು ಪ್ರಯತ್ನಿಸಿರುವುದನ್ನು ಗಗನಸಖಿ ಗಮನಿಸಿದ್ದಾರೆ. ಆಗ ಈ ಹ್ಯಾಂಡಲ್ ಸುಮಾರು ಕಾಲುಭಾಗದವರೆಗೆ ತೆರೆಯಲ್ಪಟ್ಟಿತ್ತು. ತಕ್ಷಣ ಫ್ಲೈಟ್ ಅಟೆಂಡೆಂಟ್ ಬಾಗಿಲು ಮತ್ತು ತುರ್ತು ಸ್ಲೈಡ್‌ಗಳನ್ನು ಮುಚ್ಚಿ ಕ್ಯಾಪ್ಟನ್ ಮತ್ತು ಫ್ಲೈಟ್ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.

    MORE
    GALLERIES

  • 57

    Emergency Exit: ವಿಮಾನದ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನ; ತಡೆಯಲು ಬಂದ ಸಿಬ್ಬಂದಿಗೆ ಚಾಕು ಇರಿತ!

    ಆರೋಪಿ ಟೊರೆಸ್ ವಿಮಾನಕ್ಕೆ ಅಪಾಯವನ್ನುಂಟು ಮಾಡಿದ್ದು ಮಾತ್ರವಲ್ಲದೇ, ವಿಮಾನವನ್ನು ಆದಷ್ಟು ಬೇಗ ಇಳಿಸಬೇಕು ಎಂದು ಗಗನಸಖಿಗೆ ಹೇಳಿದ್ದಾನೆ. ಸ್ವಲ್ಪ ಸಮಯದ ನಂತರ ವಿಮಾನದ ಸಿಬ್ಬಂದಿಯೊಬ್ಬರ ಕಡೆಗೆ ನುಗ್ಗಿ ಆಕೆಯ ಕತ್ತಿಗೆ ಮೂರು ಬಾರಿ ಇರಿದು ಹಲ್ಲೆ ನಡೆಸಿದ್ದಾನೆ.

    MORE
    GALLERIES

  • 67

    Emergency Exit: ವಿಮಾನದ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನ; ತಡೆಯಲು ಬಂದ ಸಿಬ್ಬಂದಿಗೆ ಚಾಕು ಇರಿತ!

    ಇಷ್ಟೆಲ್ಲಾ ಘಟನೆ ಆದ ಬಳಿಕ ಪ್ರಯಾಣಿಕರು ಆರೋಪಿ ಟೊರೆಸ್‌ನನ್ನು ಹಿಡಿದು ದಾಳಿ ಮಾಡದಂತೆ ತಡೆದಿದ್ದಾರೆ. ಬಳಿಕ ವಿಮಾನವು ಬೋಸ್ಟನ್‌ನಲ್ಲಿ ಇಳಿದ ಸ್ವಲ್ಪ ಸಮಯದ ನಂತರ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

    MORE
    GALLERIES

  • 77

    Emergency Exit: ವಿಮಾನದ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನ; ತಡೆಯಲು ಬಂದ ಸಿಬ್ಬಂದಿಗೆ ಚಾಕು ಇರಿತ!

    ಮೂಲದ ಪ್ರಕಾರ, ಆರೋಪಿ ಟೊರೆಸ್‌ಗೆ ಜೀವಾವಧಿ ಶಿಕ್ಷೆ ಮತ್ತು ಫ್ಲೈಟ್ ಸಿಬ್ಬಂದಿ ಮತ್ತು ಸಹಾಯಕರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ US ಡಾಲರ್ 250,000 ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    MORE
    GALLERIES