Earthquake: ಈಕ್ವೆಡಾರ್‌ನಲ್ಲಿ ಪ್ರಬಲ ಭೂಕಂಪಕ್ಕೆ ಕನಿಷ್ಠ 14 ಸಾವು! ನೂರಾರು ಮಂದಿಗೆ ಗಂಭೀರ ಗಾಯ

ಟರ್ಕಿ ಮತ್ತು ಸಿರಿಯಾದಲ್ಲಿ ನಡೆದ ಭೂಕಂಪದ ಭೀಕರತೆ ಮನಸ್ಸಿಂದ ಮರೆಯಾಗುವ ಮುನ್ನವೇ ಮತ್ತೊಂದು ಇಂತಹದೇ ಆಘಾತಕಾರಿ ಘಟನೆ ಉತ್ತರ ಪೆರು ಹಾಗೂ ಈಕ್ವೆಡಾರ್‌ನಲ್ಲಿ ನಡೆದು ಹೋಗಿದೆ. ನಿನ್ನೆ ಪ್ರಬಲ ಭೂಕಂಪ ಈಕ್ವೆಡಾರ್ ಮತ್ತು ಪೆರುವಿನಲ್ಲಿ ಸಂಭವಿಸಿದ್ದು, ಪರಿಣಾಮ ಅನೇಕ ಸಾವು ನೋವುಗಳು ಸಂಭವಿಸಿವೆ ಎಂದು ತಿಳಿದು ಬಂದಿದೆ.

First published:

  • 17

    Earthquake: ಈಕ್ವೆಡಾರ್‌ನಲ್ಲಿ ಪ್ರಬಲ ಭೂಕಂಪಕ್ಕೆ ಕನಿಷ್ಠ 14 ಸಾವು! ನೂರಾರು ಮಂದಿಗೆ ಗಂಭೀರ ಗಾಯ

    ಇಲ್ಲಿನ ಕರಾವಳಿ ಪ್ರದೇಶದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಈ ಘಟನೆಯಲ್ಲಿ ಇಲ್ಲಿಯತನಕ ಕನಿಷ್ಠ 14 ಜನ ಸಾವನ್ನಪ್ಪಿ, 380ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 27

    Earthquake: ಈಕ್ವೆಡಾರ್‌ನಲ್ಲಿ ಪ್ರಬಲ ಭೂಕಂಪಕ್ಕೆ ಕನಿಷ್ಠ 14 ಸಾವು! ನೂರಾರು ಮಂದಿಗೆ ಗಂಭೀರ ಗಾಯ

    ಗುವಾಯಾಸ್ ಪ್ರಾಂತ್ಯದ ಬಾಲಾವೋ ನಗರದಿಂದ 10 ಕಿ.ಮೀ ದೂರದಲ್ಲಿ ಹಾಗೂ 66.4 ಕಿ.ಮೀ ಆಳದಲ್ಲಿ ಇದರ ಕೇಂದ್ರ ಬಿಂದುವನ್ನು ಗುರುತಿಸಲಾಗಿದ್ದು, ಘಟನೆಯಿಂದ ನೂರಾರು ಕಟ್ಟಡಗಳು, ಸಾವಿರಾರು ಮನೆಗಳು ಧರಾಶಾಹಿಯಾಗಿವೆ ಎಂದು ವರದಿಯಾಗಿದೆ.

    MORE
    GALLERIES

  • 37

    Earthquake: ಈಕ್ವೆಡಾರ್‌ನಲ್ಲಿ ಪ್ರಬಲ ಭೂಕಂಪಕ್ಕೆ ಕನಿಷ್ಠ 14 ಸಾವು! ನೂರಾರು ಮಂದಿಗೆ ಗಂಭೀರ ಗಾಯ

    ಘಟನೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಹೆಚ್ಚಿನ ಹಾನಿ ಎಲ್ ಓರೋ ಪ್ರದೇಶದಲ್ಲಿ ಉಂಟಾಗಿದೆ. ಈ ಪ್ರದೇಶದಲ್ಲಿ ಕನಿಷ್ಠ 44 ಮನೆಗಳು ಸಂಪೂರ್ಣ ನಾಶವಾದರೆ, 90ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.

    MORE
    GALLERIES

  • 47

    Earthquake: ಈಕ್ವೆಡಾರ್‌ನಲ್ಲಿ ಪ್ರಬಲ ಭೂಕಂಪಕ್ಕೆ ಕನಿಷ್ಠ 14 ಸಾವು! ನೂರಾರು ಮಂದಿಗೆ ಗಂಭೀರ ಗಾಯ

    ನಗರದ ಸಾಂಟಾ ರೋಸಾ ವಿಮಾನ ನಿಲ್ದಾಣದಲ್ಲಿಯೂ ಸಣ್ಣ ಮಟ್ಟದ ಹಾನಿ ಉಂಟಾಗಿದ್ದು, ಭೂಕಂಪ ಸಂಭವಿಸಿದ ತೀವ್ರತೆಗೆ ರಸ್ತೆಗಳು ಬಿರುಕು ಬಿಟ್ಟ ಪರಿಣಾಮ ಕೆಲವು ಭಾಗಗಳಲ್ಲಿ ರಸ್ತೆ ಸಂಚಾರವನ್ನು ಸ್ಥಗತಿಗೊಳಿಸಲಾಗಿದೆ.

    MORE
    GALLERIES

  • 57

    Earthquake: ಈಕ್ವೆಡಾರ್‌ನಲ್ಲಿ ಪ್ರಬಲ ಭೂಕಂಪಕ್ಕೆ ಕನಿಷ್ಠ 14 ಸಾವು! ನೂರಾರು ಮಂದಿಗೆ ಗಂಭೀರ ಗಾಯ

    ಭೂಕಂಪ ನಡೆದ ತಕ್ಷಣ ಇಲ್ಲಿ ಏನಾಗ್ತಿದೆ ಅನ್ನೋದನ್ನು ಅರಿಯದ ಜನ ಭಯ ಭೀತಿಯಿಂದಲೇ ಮನೆಯಿಂದ ಹೊರಗೆ ಓಡಿ ಬಂದರು. ಕೆಲವರು ಮನೆಯಿಂದ ಹೊರ ಬರಲಾಗದೆ ಅಲ್ಲಿ ಉಳಿದ ಪರಿಣಾಮ ಕಟ್ಟಡಗಳು ಅವರ ಮೇಲೆಯೇ ಉರುಳಿಬಿದ್ದು ಪ್ರಾಣ ಬಿಟ್ಟಿದ್ದಾರೆ.

    MORE
    GALLERIES

  • 67

    Earthquake: ಈಕ್ವೆಡಾರ್‌ನಲ್ಲಿ ಪ್ರಬಲ ಭೂಕಂಪಕ್ಕೆ ಕನಿಷ್ಠ 14 ಸಾವು! ನೂರಾರು ಮಂದಿಗೆ ಗಂಭೀರ ಗಾಯ

    ಘಟನೆಯ ಬಗ್ಗೆ ಜನರು ಆತಂಕಕ್ಕೆ ಒಳಗಾಗಿರುವಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಶಾಂತಿ ಕಾಪಾಡುವಂತೆ ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    MORE
    GALLERIES

  • 77

    Earthquake: ಈಕ್ವೆಡಾರ್‌ನಲ್ಲಿ ಪ್ರಬಲ ಭೂಕಂಪಕ್ಕೆ ಕನಿಷ್ಠ 14 ಸಾವು! ನೂರಾರು ಮಂದಿಗೆ ಗಂಭೀರ ಗಾಯ

    ಸದ್ಯ ಎಲ್ಲಾ ಇಲಾಖೆಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಕಟ್ಟಡದೊಳಗೆ ಬಂಧಿಯಾಗಿರುವ ಜನರು, ಭೂಕಂಪಕ್ಕೆ ಬಲಿಯಾಗಿರುವ ಜನರ ಮೃತದೇಹವನ್ನು ಹೊರಗೆ ತೆಗೆಯುವ ಕಾರ್ಯ ಸಮರೋಪಾದಿಯಲ್ಲಿ ಮುಂದುವರಿದಿದೆ.

    MORE
    GALLERIES