Manipur: ಬಂಡುಕೋರರ ಪುಂಡಾಟ, ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ, ನಾಲ್ವರು ಗಂಭೀರ!

ಇಂಫಾಲ: ಇತ್ತೀಚಿನ ದಿನಗಳಲ್ಲಿ ಭಾರತೀಯ ಸೈನಿಕರ ಮೇಲೆ ಉಗ್ರರ ಕರಿನೆರಳು ಪದೇ ಪದೇ ಬೀಳುತ್ತಿದ್ದು, ಇದೀಗ ಮತ್ತೊಮ್ಮೆ ಮಣಿಪುರದಲ್ಲಿ ಶಂಕಿತ ಉಗ್ರರ ದಾಳಿಗೆ ಓರ್ವ ಪೊಲೀಸ್ ಕಮಾಂಡೋ ಹುತಾತ್ಮರಾಗಿದ್ದಾರೆ.

First published:

  • 17

    Manipur: ಬಂಡುಕೋರರ ಪುಂಡಾಟ, ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ, ನಾಲ್ವರು ಗಂಭೀರ!

    ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಟ್ರೋಂಗ್ಲೋಬಿ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಶಂಕಿತ ಕುಕಿ ಉಗ್ರರು ಅಡಗಿ ಕುಳಿತು ಸಂಚಿನಿಂದ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 27

    Manipur: ಬಂಡುಕೋರರ ಪುಂಡಾಟ, ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ, ನಾಲ್ವರು ಗಂಭೀರ!

    ಈ ಭೀಕರ ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದು, ಐದು ಮಂದಿ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 37

    Manipur: ಬಂಡುಕೋರರ ಪುಂಡಾಟ, ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ, ನಾಲ್ವರು ಗಂಭೀರ!

    ಅಪರಿಚಿತ ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಐದು ಮಂದಿ ಪೊಲೀಸರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

    MORE
    GALLERIES

  • 47

    Manipur: ಬಂಡುಕೋರರ ಪುಂಡಾಟ, ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ, ನಾಲ್ವರು ಗಂಭೀರ!

    ಹಿಂಸಾಚಾರ ಪೀಡಿತ ಚುರಾಚಂದ್‌ಪುರ ಜಿಲ್ಲೆಯ ಗಡಿಯಿಂದ ಶಂಕಿತ ಕುಕಿ ಬಂಡುಕೋರರು ಮೂವರು ಮೈತೆಯ್ ಗ್ರಾಮಸ್ಥರನ್ನು ಅಪಹರಿಸಿದ್ದರು ಎಂದು ವರದಿಯಾಗಿದೆ.

    MORE
    GALLERIES

  • 57

    Manipur: ಬಂಡುಕೋರರ ಪುಂಡಾಟ, ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ, ನಾಲ್ವರು ಗಂಭೀರ!

    ಅಲ್ಲದೇ, ಬುಧವಾರ ಮುಂಜಾನೆ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಅರೆಸೇನಾ ಪಡೆಯ ಗಸ್ತು ತಂಡದ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು, ಈ ವೇಳೆ ಅಸ್ಸಾಂ ರೈಫಲ್ಸ್ ಯೋಧರೊಬ್ಬರು ಗಾಯಗೊಂಡಿದ್ದರು.

    MORE
    GALLERIES

  • 67

    Manipur: ಬಂಡುಕೋರರ ಪುಂಡಾಟ, ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ, ನಾಲ್ವರು ಗಂಭೀರ!

    ಇದೀಗ ಪುನಃ ದುಷ್ಕರ್ಮಿಗಳು ಪೊಲೀಸ್ ಪಡೆಯ ಮೇಲೆ ದಾಳಿ ಮಾಡಿದ್ದು, ಗುರುವಾರ ಪೊಲೀಸ್ ಕಮಾಂಡೋಗಳು ಗಸ್ತು ತಿರುಗುತ್ತಿದ್ದಾಗ ಉಗ್ರರು ಹತ್ತಿರದ ಬೆಟ್ಟದಿಂದ ಲಾಥೋಡ್ ಬಾಂಬ್‌ಗಳನ್ನು ಎಸೆದು ನಂತರ ಗುಂಡಿನ ದಾಳಿ ನಡೆಸಿದರು. ಪರಿಣಾಮ ಕಾನ್ಸ್‌ಟೆಬಲ್‌ ಚೇತನ್ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

    MORE
    GALLERIES

  • 77

    Manipur: ಬಂಡುಕೋರರ ಪುಂಡಾಟ, ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ, ನಾಲ್ವರು ಗಂಭೀರ!

    ದುಷ್ಕೃತ್ಯ ಮೆರೆದ ಕಿಡಿಗೇಡಿಗಳನ್ನು ಬಂಧಿಸಲು ಹೆಚ್ಚುವರಿ ಪೊಲೀಸ್ ಪಡೆಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

    MORE
    GALLERIES