American Airlines: ಕುಡಿದ ಮತ್ತಿನಲ್ಲಿ ವಿಮಾನ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿದ್ಯಾರ್ಥಿ!

ನವದೆಹಲಿ: ಇತ್ತೀಚೆಗೆ ಏರ್‌ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಇಂತಹುದೇ ಘಟನೆ ಮರುಕಳಿಸಿದೆ. ನ್ಯೂಯಾರ್ಕ್-ದೆಹಲಿ ನಡುವಿನ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಈ ಘಟನೆ ಸಂಭವಿಸಿದ್ದು, ವಿದ್ಯಾರ್ಥಿಯೊಬ್ಬ ಕುಡಿದ ಅಮಲಿನಲ್ಲಿ ಸಹಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

First published:

 • 16

  American Airlines: ಕುಡಿದ ಮತ್ತಿನಲ್ಲಿ ವಿಮಾನ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿದ್ಯಾರ್ಥಿ!

  ಮೂತ್ರ ವಿಸರ್ಜನೆ ಮಾಡಿದ ಆರೋಪಿಯು ಅಮೆರಿಕದ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಯಾಗಿದ್ದು, ಕುಡಿತದ ಅಮಲಿನಲ್ಲಿ ನಿದ್ರಾಸ್ಥಿತಿಯಲ್ಲಿರುವಾಗ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಬಗ್ಗೆ ತಕ್ಷಣವೇ ಸಹ ಪ್ರಯಾಣಿಕ ವಿಮಾನ ಸಿಬ್ಬಂದಿಗೆ ದೂರು ನೀಡಿದ್ದಾರೆ.

  MORE
  GALLERIES

 • 26

  American Airlines: ಕುಡಿದ ಮತ್ತಿನಲ್ಲಿ ವಿಮಾನ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿದ್ಯಾರ್ಥಿ!

  ವಿಮಾನದಲ್ಲಿ ನಡೆದ ಈ ಘಟನೆಯ ಬಗ್ಗೆ ಸಿಬ್ಬಂದಿ ಪೈಲಟ್‌ಗೆ ಮಾಹಿತಿ ನೀಡಿದ್ದರು. ಆಗ ಪೈಲಟ್‌ ಎಟಿಸಿಗೆ ವಿಷಯ ತಲುಪಿಸಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಮಾನಯಾನ ಸಂಸ್ಥೆ ವಿಮಾನ ಲ್ಯಾಂಡ್‌ ಆಗುತ್ತಲೇ ಆರೋಪಿ ವಿದ್ಯಾರ್ಥಿಯನ್ನು ದೆಹಲಿ ಪೊಲೀಸರಿಗೆ ಒಪ್ಪಿಸಿದರು ಎಂದು ವಿಮಾನದ ಸಿಬ್ಬಂದಿ ಹೇಳಿದ್ದಾರೆ.

  MORE
  GALLERIES

 • 36

  American Airlines: ಕುಡಿದ ಮತ್ತಿನಲ್ಲಿ ವಿಮಾನ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿದ್ಯಾರ್ಥಿ!

  ಆದರೆ ಸಂತ್ರಸ್ತ ಪ್ರಯಾಣಿಕ ಪೊಲೀಸರಿಗೆ ದೂರು ನೀಡಿಲ್ಲ, ಘಟನೆ ನಡೆದ ಬೆನ್ನಲ್ಲೇ ವಿದ್ಯಾರ್ಥಿ ಆ ಪ್ರಯಾಣಿಕನ ಜೊತೆ ಕ್ಷಮೆ ಕೇಳಿದ್ದಾನೆ. ಹೀಗಾಗಿ ಆತನ ಭವಿಷ್ಯಕ್ಕೆ ತೊಂದರೆ ಆಗೋದು ಬೇಡ ಎನ್ನುವ ಕಾರಣಕ್ಕೆ ಪೊಲೀಸ್ ದೂರು ನೀಡಿಲ್ಲ ಎಂದು ಹೇಳಲಾಗಿದೆ.

  MORE
  GALLERIES

 • 46

  American Airlines: ಕುಡಿದ ಮತ್ತಿನಲ್ಲಿ ವಿಮಾನ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿದ್ಯಾರ್ಥಿ!

  ಶುಕ್ರವಾರ ರಾತ್ರಿ 9:16 ಕ್ಕೆ ನ್ಯೂಯಾರ್ಕ್‌ನಿಂದ ಹೊರಟ ಎಎ292 ವಿಮಾನದಲ್ಲಿ ಈ ಘಟನೆ ನಡೆದಿದ್ದು, 14 ಗಂಟೆ 26 ನಿಮಿಷಗಳ ಹಾರಾಟದ ನಂತರ ಶನಿವಾರ ರಾತ್ರಿ 10:12 ಕ್ಕೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿತ್ತು.

  MORE
  GALLERIES

 • 56

  American Airlines: ಕುಡಿದ ಮತ್ತಿನಲ್ಲಿ ವಿಮಾನ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿದ್ಯಾರ್ಥಿ!

  ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಸಂತ್ರಸ್ತ ಪ್ರಯಾಣಿಕ ಮತ್ತು ಮೂತ್ರ ವಿಸರ್ಜನೆ ಮಾಡಿದ ಆರೋಪಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.

  MORE
  GALLERIES

 • 66

  American Airlines: ಕುಡಿದ ಮತ್ತಿನಲ್ಲಿ ವಿಮಾನ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿದ್ಯಾರ್ಥಿ!

  ನಾಗರಿಕ ವಿಮಾನಯಾನ ನಿಯಮಗಳ ಪ್ರಕಾರ ವಿಮಾನದಲ್ಲಿ ಸಂಚರಿಸುವ ವೇಳೆ ಪ್ರಯಾಣಿಕರು ಅಶಿಸ್ತಿನ ವರ್ತನೆ ತೋರಿದರೆ ಕ್ರಿಮಿನಲ್ ಕಾನೂನಿನಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಗಂಭೀರ ಪ್ರಕರಣಗಳಲ್ಲಿ ಆ ಪ್ರಯಾಣಿಕರಿಗೆ ನಿರ್ದಿಷ್ಟ ಅವಧಿಗೆ ವಿಮಾನ ಪ್ರಯಾಣಕ್ಕೆ ನಿಷೇಧ ಹೇರುವ ನಿಯಮವೂ ಇದೆ.

  MORE
  GALLERIES