Crime News: ಉತ್ತರ ಪ್ರದೇಶದಲ್ಲಿ 6 ವರ್ಷದ ದಲಿತ ಬಾಲಕಿಯ ಶವ ಪತ್ತೆ! ಪೊಲೀಸರು ಹೇಳಿದ್ದೇನು?

ಲಕ್ನೋ: ದಲಿತ ಸಮುದಾಯಕ್ಕೆ ಸೇರಿದ ಆರು ವರ್ಷದ ಬಾಲಕಿಯ ಮೃತದೇಹ ಉತ್ತರ ಪ್ರದೇಶದ ಕಾನ್ಪುರದಲ್ಲಿ ಪತ್ತೆಯಾಗಿದೆ. ನಿರ್ಜನ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆಯಾಗಿದ್ದು, ಆಕೆಯನ್ನು ಕೊಲೆ ಮಾಡುವ ಮುನ್ನ ಅತ್ಯಾಚಾರ ಮಾಡಿರುವ ಸಾಧ್ಯತೆ ಇದೆ ಅನ್ನೋದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

First published:

  • 17

    Crime News: ಉತ್ತರ ಪ್ರದೇಶದಲ್ಲಿ 6 ವರ್ಷದ ದಲಿತ ಬಾಲಕಿಯ ಶವ ಪತ್ತೆ! ಪೊಲೀಸರು ಹೇಳಿದ್ದೇನು?

    ಬಾಲಕಿಯ ಮೃತದೇಹ ಸಿಕ್ಕ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡು ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಈಗಾಗಲೇ ಶಂಕಿತ ಆರೋಪಿಗಳಾದ ಚಂದ್ರಭಾನ್, ಆತನ ಪತ್ನಿ ಸುಧಾ ಮತ್ತು ಸಹೋದರ ಸುಲ್ತಾನ್ ಎಂಬ ಮೂವರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಕಾನ್ಪುರ ದಕ್ಷಿಣ ವಿಭಾಗದ ಹೆಚ್ಚುವರಿ ಡಿಸಿಪಿ ಅಂಕಿತಾ ಶರ್ಮಾ ತಿಳಿಸಿದ್ದಾರೆ.

    MORE
    GALLERIES

  • 27

    Crime News: ಉತ್ತರ ಪ್ರದೇಶದಲ್ಲಿ 6 ವರ್ಷದ ದಲಿತ ಬಾಲಕಿಯ ಶವ ಪತ್ತೆ! ಪೊಲೀಸರು ಹೇಳಿದ್ದೇನು?

    ಕಳೆದ ಶನಿವಾರ ಮೃತ ಬಾಲಕಿ ಅದೇ ಗ್ರಾಮದಲ್ಲಿ ಇರುವ ತನ್ನ ಚಿಕ್ಕಪ್ಪನ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದಳು. ಆದರೆ ಚಿಕ್ಕಪ್ಪನ ಮನೆಗೂ ಬಾರದೆ ನಾಪತ್ತೆಯಾಗಿದ್ದಳು.

    MORE
    GALLERIES

  • 37

    Crime News: ಉತ್ತರ ಪ್ರದೇಶದಲ್ಲಿ 6 ವರ್ಷದ ದಲಿತ ಬಾಲಕಿಯ ಶವ ಪತ್ತೆ! ಪೊಲೀಸರು ಹೇಳಿದ್ದೇನು?

    ರಾತ್ರಿಯ ತನಕ ಇಡೀ ಗ್ರಾಮದಲ್ಲಿ ಹುಡುಕಾಡಿದ ಬಾಲಕಿಯ ಮನೆಯವರು ಆಕೆಯ ಪತ್ತೆಯೇ ಸಿಗದಿದ್ದಾಗ ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

    MORE
    GALLERIES

  • 47

    Crime News: ಉತ್ತರ ಪ್ರದೇಶದಲ್ಲಿ 6 ವರ್ಷದ ದಲಿತ ಬಾಲಕಿಯ ಶವ ಪತ್ತೆ! ಪೊಲೀಸರು ಹೇಳಿದ್ದೇನು?

    ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಆರೋಪದ ಮೇಲೆ ಚಂದ್ರಭಾನ್, ಆತನ ಪತ್ನಿ ಸುಧಾ, ಸಹೋದರ ಸುಲ್ತಾನ್ ಮತ್ತು ತಂದೆ ರಾಮ್ ಪ್ರಕಾಶ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

    MORE
    GALLERIES

  • 57

    Crime News: ಉತ್ತರ ಪ್ರದೇಶದಲ್ಲಿ 6 ವರ್ಷದ ದಲಿತ ಬಾಲಕಿಯ ಶವ ಪತ್ತೆ! ಪೊಲೀಸರು ಹೇಳಿದ್ದೇನು?

    ಬಾಲಕಿಯ ಮನೆಯಿಂದ ಸುಮಾರು ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದ್ದು, ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರನ್ನು ಸಹ ಕರೆಯಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.

    MORE
    GALLERIES

  • 67

    Crime News: ಉತ್ತರ ಪ್ರದೇಶದಲ್ಲಿ 6 ವರ್ಷದ ದಲಿತ ಬಾಲಕಿಯ ಶವ ಪತ್ತೆ! ಪೊಲೀಸರು ಹೇಳಿದ್ದೇನು?

    ಇನ್ನು ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆ ವೇಳೆ ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ನಡೆಸಲು ನಿರ್ಧರಿಸಿದ್ದೇವೆ. ಅತ್ಯಾಚಾರ ಆರೋಪವನ್ನು ತಳ್ಳಿ ಹಾಕಲು ಸಾಧ್ಯವೇ ಇಲ್ಲ, ಆದರೆ ಈಗಲೇ ತೀರ್ಮಾನಕ್ಕೆ ಬರೋದು ಸರಿಯಲ್ಲ ಎಂದು ಡಿಸಿಪಿ ಅಂಕಿತಾ ಶರ್ಮಾ ಹೇಳಿದ್ದಾರೆ.

    MORE
    GALLERIES

  • 77

    Crime News: ಉತ್ತರ ಪ್ರದೇಶದಲ್ಲಿ 6 ವರ್ಷದ ದಲಿತ ಬಾಲಕಿಯ ಶವ ಪತ್ತೆ! ಪೊಲೀಸರು ಹೇಳಿದ್ದೇನು?

    ಎರಡು ದಿನಗಳ ಹಿಂದೆ ತೆಲಂಗಾಣದಲ್ಲಿ ದಲಿತ ಸಮುದಾಯಕ್ಕೆ ಸೇರಿದ ವೈದ್ಯಕೀಯ ವಿದ್ಯಾರ್ಥಿನಿಗೆ ಸೀನಿಯರ್ ಸೈಫ್ ಎಂಬಾತ ಜಾತಿ ಕಾರಣಕ್ಕೆ ಕಿರುಕುಳ ನೀಡಿದ್ದರ ಹಿನ್ನೆಲೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು.

    MORE
    GALLERIES