Elephant Rescue: ಬಾವಿಗೆ ಬಿದ್ದ ಆನೆಮರಿ ರಕ್ಷಿಸಿ ಆರೈಕೆ; ಕಾಡಿಗೆ ಬಿಡೋ ವೇಳೆ ಭಾವುಕರಾಗಿ ಕಣ್ಣೀರಿಟ್ಟ ಅರಣ್ಯಾಧಿಕಾರಿಗಳು!
ಚೆನ್ನೈ: ಅಚಾನಕ್ ಆಗಿ ಬಾವಿಗೆ ಬಿದ್ದ ಆನೆ ಮರಿಯ ರಕ್ಷಣಾ ಕಾರ್ಯಾಚರಣೆಯ ವೇಳೆ ಆನೆಯ ಪರಿಸ್ಥಿತಿ ನೋಡಿ ಅರಣ್ಯ ಇಲಾಖೆಯ ಅಧಿಕಾರಿಗಳು ತಡೆಯಲಾಗದೆ ಕಣ್ಣೀರು ಹಾಕಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ.
ಹೌದು.. ಮಾರ್ಚ್ 11ರಂದು ನಾಲ್ಕು ತಿಂಗಳ ಗಂಡು ಆನೆ ಮರಿಯೊಂದು ಕಾಡಿನಿಂದ ಹೊರ ಬಂದಿತ್ತು. ಈ ವೇಳೆ ಅದು ತಾಯಿಯಿಂದ ಬೇರ್ಪಟ್ಟು ತನ್ನ ತಾಯಿಯನ್ನು ಹುಡುಕಿಕೊಂಡು ಕೃಷಿ ಭೂಮಿಗೆ ಬಂದಿತ್ತು. ಆಗ ಅದು ಆಕಸ್ಮಿಕವಾಗಿ ಬಾವಿಗೆ ಬಿದ್ದಿತ್ತು.
2/ 7
ಪೆನ್ನಾಗರಂ ಸಮೀಪದಲ್ಲಿ ಬಾವಿಗೆ ಬಿದ್ದಿದ್ದ ಆನೆ ಮರಿಯನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗೆ ವಿಷಯ ಮುಟ್ಟಿಸಿದ ಹಿನ್ನೆಲೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗಾಗಿ ಘಟನಾ ಸ್ಥಳಕ್ಕೆ ಬಂದಿದ್ದರು.
3/ 7
ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಆನೆ ಮರಿಯನ್ನು ಬಾವಿಯಿಂದ ಮೇಲಕ್ಕೆ ಎತ್ತಿ ಹೊಗೇನಕಲ್ ಅರಣ್ಯದ ಒಟ್ಟರಪಟ್ಟಿ ವಿಭಾಗದಲ್ಲಿ ಇರಿಸಿದ್ದರು. ಅರಣ್ಯ ಇಲಾಖೆಯ ಪಶು ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಮರಿ ಆನೆಗೆ ಅರಣ್ಯ ಸಿಬ್ಬಂದಿ ಮಹೇಂದ್ರನ್ ಆರೈಕೆ ಮಾಡುತ್ತಿದ್ದರು.
4/ 7
ಈ ಮಧ್ಯೆ ಮರಿ ಆನೆ ಅರಣ್ಯ ಇಲಾಖೆಯ ಸಿಬ್ಬಂದಿಯ ಆರೈಕೆಯಿಂದ ಚೇತರಿಸಿಕೊಂಡು ಆರೋಗ್ಯವಾಗಿದ್ದು, ಹೀಗಾಗಿ ಆನೆಯನ್ನು ಪುನಃ ಕಾಡಿಗೆ ಬಿಡಲು ಅಧಿಕಾರಿಗಳು ನಿರ್ಧರಿಸಿದ್ದರು.
5/ 7
ಅದರನ್ವಯ ಮರಿ ಆನೆಯನ್ನು ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಅರಣ್ಯ ಇಲಾಖೆಯ ವಿಶೇಷ ವಾಹನದಲ್ಲಿ ಧರ್ಮಪುರಿ ಜಿಲ್ಲೆಯ ಹೊಗೇನಕಲ್‌ನಿಂದ ಕೃಷ್ಣಗಿರಿ ಜಿಲ್ಲೆಯ ಅಂಚೇಟಿ ಮೂಲಕ ಮುದುಮಲೈಗೆ ಸಾಗಿಸಲಾಯಿತು.
6/ 7
ವಾರಗಳ ಕಾಲ ಆರೈಕೆ ಮಾಡಿ, ಆನೆಯ ಪ್ರೀತಿಗೆ ಪಾತ್ರರಾಗಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಯನ್ನು ಕಾಡಿಗೆ ಬಿಡುವ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದರು. ಆನೆ ಮರಿಯನ್ನು ಕಾಡಿಗೆ ಕಳಿಸಲು ಅವರ ಮನಸ್ಸು ಒಪ್ಪದೆ ಅತ್ತೇ ಬಿಟ್ಟರು.
7/ 7
ಸದ್ಯ ಆನೆ ಮರಿಯನ್ನು ಭಾರವಾದ ಮನಸ್ಸಿನಿಂದಲೇ ಪುನಃ ಕಾಡಿಗೆ ಬಿಡುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣೀರು ಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
First published:
17