Women's Day Special: ಓದುತ್ತಿರುವಾಗಲೇ ಬೇಕಿಂಗ್ ಬ್ಯುಸಿನೆಸ್​, ವರ್ಷಕ್ಕೆ 40 ಲಕ್ಷ ಸಂಪಾದಿಸುತ್ತಿದ್ದಾರೆ ಈ ಯುವತಿ!

Women's Day Special: ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಿಂದಿನಂತೆ ಓದು ಮುಗಿಸಿದ ನಂತರ ವಿವಾಹವಾಗಿ ಸಂಸಾರ, ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಅವರ ಬದುಕು ಸೀಮಿತವಾಗಿಲ್ಲ. ತಮ್ಮ ಓದು ಮುಗಿಯುತ್ತಿದ್ದಂತೆ ಉದ್ಯೋಗಕ್ಕಾಗಿ ಬೇಟೆಯಾಡಲು ಪ್ರಾರಂಭಿಸುತ್ತಿದ್ದಾರೆ. ಕೆಲವರು ಓದಿದ ನಂತರ ಕೆಲಸ ಹುಡುಕುತ್ತಾರೆ, ಇನ್ನೂ ಕೆಲವರು ತಾವೂ ಓದಿದ ನಂತರ ಅದನ್ನು ಬಳಸಿಕೊಂಡಿ ಉದ್ಯಮ ಮಾಡುತ್ತಾರೆ. ಹೈದರಾಬಾದ್‌ನ ಪ್ರಣಿತಾ ಎರಡನೇ ವರ್ಗಕ್ಕೆ ಸೇರಿದ್ದಾರೆ.

First published:

  • 110

    Women's Day Special: ಓದುತ್ತಿರುವಾಗಲೇ ಬೇಕಿಂಗ್ ಬ್ಯುಸಿನೆಸ್​, ವರ್ಷಕ್ಕೆ 40 ಲಕ್ಷ ಸಂಪಾದಿಸುತ್ತಿದ್ದಾರೆ ಈ ಯುವತಿ!

    ಪದವಿಯಲ್ಲಿ ಓದುತ್ತಿರುವಾಗಲೇ ಪ್ರಣಿತಾ ಕಾಲೇಜ್ ಫೆಸ್ಟ್​ನಲ್ಲಿ ಬೇಕಿಂಗ್ ಸ್ಟಾಲ್ ಆರಂಭಿಸಿ ಲಕ್ಷಗಟ್ಟಲೆ ಸಂಪಾದಿಸಿದ್ದರು. ಹೈದರಾಬಾದ್ ನಗರದ ನಿವಾಸಿಯಾಗಿರುವ ಪ್ರಣಿತಾ ಬೇಕಿಂಗ್ ಒಂದು ವಿಜ್ಞಾನ ಎಂದು ಹೇಳುತ್ತಾರೆ. ಪ್ರಣಿತಾ ಕಾಲೇಜಿನಲ್ಲಿ ಓದುತ್ತಿರುವಾಗಲೇ ಬೇಕಿಂಗ್ ಪದಾರ್ಥಗಳ ಸ್ಟಾಲ್ ಆರಂಭಿಸಿದ್ದರು.

    MORE
    GALLERIES

  • 210

    Women's Day Special: ಓದುತ್ತಿರುವಾಗಲೇ ಬೇಕಿಂಗ್ ಬ್ಯುಸಿನೆಸ್​, ವರ್ಷಕ್ಕೆ 40 ಲಕ್ಷ ಸಂಪಾದಿಸುತ್ತಿದ್ದಾರೆ ಈ ಯುವತಿ!

    ಅಲ್ಲಿಂದ ಪ್ರಣಿತಾ ಹಿಂತಿರುಗಿ ನೋಡಿದ್ದೇ ಇಲ್ಲ. ಮಹಿಳಾ ದಿನಾಚರಣೆಯಂದು ರವಿ ಚಿಟ್ಟಿ ಪ್ರಣಿತಾ ಅವರ ಬೇಕಿಂಗ್ ಯಶಸ್ಸಿನ ಬಗ್ಗೆ ತಿಳಿಯೋಣ. ಪದವಿಯ ನಂತರ ಪ್ರಣಿತಾ ಎಂಬಿಎ ಮಾಡಿದರು. ಬೇಕಿಂಗ್ ಮೇಲಿನ ಅವರ ಉತ್ಸಾಹ ಅವರನ್ನು ಬೇಕಿಂಗ್ ಅಕಾಡೆಮಿಯಲ್ಲಿ ಇಂಟರ್ನ್‌ಶಿಪ್‌ಗೆ ಸೇರುವಂತೆ ಮಾಡಿತು.

    MORE
    GALLERIES

  • 310

    Women's Day Special: ಓದುತ್ತಿರುವಾಗಲೇ ಬೇಕಿಂಗ್ ಬ್ಯುಸಿನೆಸ್​, ವರ್ಷಕ್ಕೆ 40 ಲಕ್ಷ ಸಂಪಾದಿಸುತ್ತಿದ್ದಾರೆ ಈ ಯುವತಿ!

    ಅಕಾಡೆಮಿಯಲ್ಲಿ ಅವರು ತಮ್ಮ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಎಂಬಿಎ ವಿದ್ಯಾರ್ಥಿಗಳು ಸಾಮಾನ್ಯವಾಗಿ ರೆಸ್ಯೂಮ್‌ನಲ್ಲಿ ಸೇರಿಸಲು ಎಂಎನ್​ಸಿ ಕಂಪನಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಾರೆ. ಆದರೆ ನಾನು ಬೆಂಗಳೂರಿನ ಬೇಕಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದೇನೆ. ಬೇಕಿಂಗ್ ಒಂದು ವಿಜ್ಞಾನ ಎಂದು ಕಲಿತಿದ್ದೇನೆ ಎಂದು ಪ್ರಣಿತಾ ಖುಷಿಯಿಂದ ಹೇಳುತ್ತಾರೆ.

    MORE
    GALLERIES

  • 410

    Women's Day Special: ಓದುತ್ತಿರುವಾಗಲೇ ಬೇಕಿಂಗ್ ಬ್ಯುಸಿನೆಸ್​, ವರ್ಷಕ್ಕೆ 40 ಲಕ್ಷ ಸಂಪಾದಿಸುತ್ತಿದ್ದಾರೆ ಈ ಯುವತಿ!

    ಬೇಕಿಂಗ್​ನಲ್ಲಿ ಪ್ರತಿಯೊಂದು ವಸ್ತುವು ವಿಭಿನ್ನ ರಾಸಾಯನಿಕ ಪಾತ್ರವನ್ನು ವಹಿಸುತ್ತದೆ. ಮೊಟ್ಟೆ , ಅಡಿಗೆ ಸೋಡಾ ಅಥವಾ ಬೆಣ್ಣೆ ಹೇಗೆ ರಿಯಾಕ್ಟ್​ ಆಗುತ್ತದೆ ಎಂಬುದೇ ಬೇಕಿಂಗ್​ ಎಂದು ಪ್ರಣಿತಾ ಹೇಳುತ್ತಾರೆ. ಅಡಿಗೆ ಮಾಡುವಾಗ ಕಲೆ ಮತ್ತು ಕೌಶಲ್ಯವೂ ಬಹಳ ಮುಖ್ಯ ಎಂದು ಪ್ರಣಿತಾ ತಿಳಿಸುತ್ತಾರೆ.

    MORE
    GALLERIES

  • 510

    Women's Day Special: ಓದುತ್ತಿರುವಾಗಲೇ ಬೇಕಿಂಗ್ ಬ್ಯುಸಿನೆಸ್​, ವರ್ಷಕ್ಕೆ 40 ಲಕ್ಷ ಸಂಪಾದಿಸುತ್ತಿದ್ದಾರೆ ಈ ಯುವತಿ!

    ಪ್ರಣಿತಾ ಅವರು ತಯಾರಿಸಿದ ಪದಾರ್ಥಗಳಿಗೆ ಕಚ್ಚಾ ವಸ್ತುಗಳ ಬೆಲೆಗಿಂತ ಸ್ವಲ್ಪ ಮೊತ್ತವನ್ನು ಸೇರಿಸಿ ಮಾರಾಟ ಮಾಡುಡುವುದಕ್ಕೆ ನಿರ್ಧರಿಸಿದರು. ಅಂದರೆ ಹೆಚ್ಚು ಲಾಭ ಇಟ್ಟುಕೊಳ್ಳದೆ ಮಾರಾಟ ಮಾಡಲು ಯೋಜಿಸಿಕೊಂಡರು. ಅಡುಗೆಯಲ್ಲಿ ಪರಿಣತಿ ಮತ್ತು ವ್ಯಾಪಾರದ ಬಗ್ಗೆ ತಿಳುವಳಿಕೆ ಹೊಂದಿರುವ ಅವರು, ತಮ್ಮ ಜ್ಞಾನದಿಂದ ತನ್ನದೇ ಆದ ಪ್ಯಾಟಿಸೆರಿ ಅಥವಾ ಬೇಕರಿ ಸ್ಥಾಪಿಸಿಕೊಂಡಿದ್ದಾರೆ.

    MORE
    GALLERIES

  • 610

    Women's Day Special: ಓದುತ್ತಿರುವಾಗಲೇ ಬೇಕಿಂಗ್ ಬ್ಯುಸಿನೆಸ್​, ವರ್ಷಕ್ಕೆ 40 ಲಕ್ಷ ಸಂಪಾದಿಸುತ್ತಿದ್ದಾರೆ ಈ ಯುವತಿ!

    ಈ ರೀತಿ ಪ್ರಣಿತಾ ಅವರ ವ್ಯಾಪಾರ ಪಯಣ ಆರಂಭವಾಯಿತು. ಅಂದಿನಿಂದ ಪ್ರಣಿತಾ ಹಿಂತಿರುಗಿ ನೋಡಿಲ್ಲ. ಪ್ರಣಿತಾ ತಮ್ಮ ಪ್ಯಾಟಿಸೆರಿಯಲ್ಲಿ ಮಹಿಳೆಯರನ್ನು ಮಾತ್ರ ನೇಮಿಸಿಕೊಂಡು ವ್ಯಾಪಾರ ಆರಂಭಿಸಿದ್ದರು. ಈಗಲೂ ಹಲವಾರು ಮಹಿಳೆಯರಿಗೆ ಅವರ ಕಂಪನಿಯಲ್ಲಿ ಉದ್ಯೋಗ ಮಾಡಲು ಅವಕಾಶ ನೀಡುತ್ತಿದ್ದಾರೆ.

    MORE
    GALLERIES

  • 710

  • 810

    Women's Day Special: ಓದುತ್ತಿರುವಾಗಲೇ ಬೇಕಿಂಗ್ ಬ್ಯುಸಿನೆಸ್​, ವರ್ಷಕ್ಕೆ 40 ಲಕ್ಷ ಸಂಪಾದಿಸುತ್ತಿದ್ದಾರೆ ಈ ಯುವತಿ!

    ಈ ಮೂಲಕ ಮಹಿಳೆಯರು ಸ್ವಂತ ಉದ್ಯಮದಲ್ಲಿ ಪುರುಷರಿಗಿಂತ ಕಮ್ಮಿ ಇಲ್ಲ ಎಂಬುದನ್ನು ಇಲ್ಲಿ ಸಾಬೀತು ಪಡಿಸುತ್ತಿದ್ದಾರೆ. ಮಹಿಳೆಯರು ನನ್ನೊಂದಿಗೆ ಕೆಲಸ ಮಾಡುವವರೆಗೆ, ಅವರಿಗೆ ಆರ್ಥಿಕ ಸ್ವಾತಂತ್ರ್ಯದ ಜೊತೆಗೆ ಜೀವನ ನಿರ್ಮಿಸಿಕೊಳ್ಳಲು ಕೌಶಲ್ಯವನ್ನು ಕಲಿಯುವ ಅವಕಾಶವನ್ನು ನೀಡುವುದು ನನ್ನ ಗುರಿಯಾಗಿದೆ ಎಂದು ಪ್ರಣಿತಾ ಹೇಳುತ್ತಾರೆ.

    MORE
    GALLERIES

  • 910

    Women's Day Special: ಓದುತ್ತಿರುವಾಗಲೇ ಬೇಕಿಂಗ್ ಬ್ಯುಸಿನೆಸ್​, ವರ್ಷಕ್ಕೆ 40 ಲಕ್ಷ ಸಂಪಾದಿಸುತ್ತಿದ್ದಾರೆ ಈ ಯುವತಿ!

    ಆಹಾರ ಪದಾರ್ಥಗಳನ್ನು ತಯಾರಿಸುವಲ್ಲಿ ಮಹಿಳೆಯರಿಗಿಂತ ಬೇರೆ ಯಾರೂ ಇಲ್ಲ ಎಂಬುದನ್ನ ಪ್ರಣಿತಾ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಪ್ರಣಿತಾ ತಾನು ಓದಿದ ಓದಿನಿಂದ ಹತ್ತಾರು ಬಡ ಮಹಿಳೆಯರಿಗೆ ನೆರವು ನೀಡುವ ಮೂಲಕ ಮಹಿಳಾ ಲೋಕಕ್ಕೆ ಮಾದರಿಯಾಗಿ ನಿಂತಿದ್ದಾರೆ.

    MORE
    GALLERIES

  • 1010

    Women's Day Special: ಓದುತ್ತಿರುವಾಗಲೇ ಬೇಕಿಂಗ್ ಬ್ಯುಸಿನೆಸ್​, ವರ್ಷಕ್ಕೆ 40 ಲಕ್ಷ ಸಂಪಾದಿಸುತ್ತಿದ್ದಾರೆ ಈ ಯುವತಿ!

    ರವಿ ಚಿಟ್ಟಿ ಪ್ರಣಿತಾ ತಮ್ಮ ವ್ಯಾಪಾರದಿಂದ ವರ್ಷಕ್ಕೆ 40 ಲಕ್ಷ ರೂ ಸಂಪಾದಿಸುತ್ತಿದ್ದಾರೆ. ಪೋಷಕರಾದ ಸುಜಾತ, ಬಾಲಕೃಷ್ಣ, ಅಣ್ಣ ಪ್ರಣಯ್, ಸ್ನೇಹಿತ ಹಾಗೂ ವ್ಯಾಪಾರದಲ್ಲಿ ಪಾಲುದಾರನಾಗಿರುವ ಪ್ರಿನ್ಸ್ ಪ್ರತಾಪ್ ಅವರ ಸಹಕಾರದಿಂದ ಇದೆಲ್ಲ ಸಾಧ್ಯವಾಯಿತು ಎಂದು ಪ್ರಣಿತಾ ತಿಳಿಸಿದ್ದಾರೆ.

    MORE
    GALLERIES