Film Dairy: ನಂಬಿದ್ರೆ ನಂಬಿ, ಈ ಅಜ್ಜ ನೋಡಿದ್ದು ಬರೋಬ್ಬರಿ 470 ಸಿನಿಮಾ! ತಾತನ ಡೈರಿಯಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

ನೀವು ಸಿನಿಮಾ ಪ್ರಿಯರು ಆಗಿದ್ದರೆ ಖಂಡಿತಾ ಈ ಸುದ್ದಿಯನ್ನು ಓದಲೇಬೇಕು. ಯಾಕೆಂದರೆ ಈ ಸುದ್ದಿ ನಿಮಗೆ ನಿಜಕ್ಕೂ ಖುಷಿ ನೀಡಬಲ್ಲುದು. ಹೌದು.. ಮೊಮ್ಮಗನೊಬ್ಬ ಅಜ್ಜನ ಡೈರಿಯನ್ನು ಓಪನ್ ಮಾಡಿದಾಗ ಅಚ್ಚರಿ ಪಡುವಂತ ವಿಷಯ ಆತನ ಕಣ್ಣಿಗೆ ಬಿದ್ದಿದೆ. ಸಾಮಾನ್ಯವಾಗಿ ಡೈರಿಗಳಲ್ಲಿ ದಿನಚರಿಗಳನ್ನೋ ಅಥವಾ ಆ ದಿನ ನಡೆದ ಪ್ರಮುಖ ವಿದ್ಯಮಾನಗಳನ್ನೋ, ಬೇಸರ - ಖುಷಿ ಹೀಗೆ ಬೇರೆ ಬೇರೆ ಸಂಗತಿಗಳನ್ನು ದಾಖಲಿಸ್ತಾರೆ. ಆದರೆ ಇಲ್ಲೊಬ್ಬ ಅಜ್ಜ ತನ್ನ ಡೈರಿಯಲ್ಲಿ ತಾನು ಜೀವನದುದ್ದಕ್ಕೂ ನೋಡಿದ ಪ್ರತಿಯೊಂದು ಸಿನಿಮಾಗಳನ್ನು ದಾಖಲಿಸುವ ಮೂಲಕ ಸುದ್ದಿಯಾಗಿದ್ದಾರೆ.

First published:

  • 17

    Film Dairy: ನಂಬಿದ್ರೆ ನಂಬಿ, ಈ ಅಜ್ಜ ನೋಡಿದ್ದು ಬರೋಬ್ಬರಿ 470 ಸಿನಿಮಾ! ತಾತನ ಡೈರಿಯಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    ಹೌದು.. ತನ್ನ ಅಜ್ಜ ನೋಡಿದ ಸಿನಿಮಾಗಳನ್ನು ಡೈರಿಯಲ್ಲಿ ಬರೆದಿರುವ ಫೋಟೋವನ್ನು ಅವರ ಮೊಮ್ಮಗ ಅಕ್ಷಿ ಎಂಬುವವರು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಆ ಅಜ್ಜ ನೋಡಿರುವ ಒಟ್ಟು 470 ಸಿನಿಮಾಗಳ ವಿವರ ಡೈರಿಯಲ್ಲಿದೆ.

    MORE
    GALLERIES

  • 27

    Film Dairy: ನಂಬಿದ್ರೆ ನಂಬಿ, ಈ ಅಜ್ಜ ನೋಡಿದ್ದು ಬರೋಬ್ಬರಿ 470 ಸಿನಿಮಾ! ತಾತನ ಡೈರಿಯಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    ಕೈ ಬರಹದಲ್ಲಿ ಬರೆದಿರುವ ಡೈರಿಯಲ್ಲಿ ಚಲನಚಿತ್ರದ ಹೆಸರು, ಅವುಗಳ ಭಾಷೆ ಮತ್ತು ವೀಕ್ಷಿಸಿದ ದಿನಾಂಕವನ್ನು ನಿಖರವಾಗಿ ಬರೆದಿರುವ ಅಜ್ಜ, ಸುಂದರ ಕೈ ಬರಹವನ್ನು ಕೂಡ ಹೊಂದಿದ್ದಾರೆ.

    MORE
    GALLERIES

  • 37

    Film Dairy: ನಂಬಿದ್ರೆ ನಂಬಿ, ಈ ಅಜ್ಜ ನೋಡಿದ್ದು ಬರೋಬ್ಬರಿ 470 ಸಿನಿಮಾ! ತಾತನ ಡೈರಿಯಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    ಅಜ್ಜ ಬರೆದಿರುವ ದಾಖಲಿಸಿರುವ ಡೈರಿಯಲ್ಲಿ ತಮಿಳು, ತೆಲುಗು, ಇಂಗ್ಲಿಷ್, ಹಿಂದಿ ಸೇರಿದಂತೆ ಜಗತ್ತಿನ ಅನೇಕ ಭಾಷೆಗಳಲ್ಲಿ ತೆರೆಕಂಡಿದ್ದ ಪ್ರಮುಖ ಸಿನಿಮಾಗಳನ್ನು ನೋಡಿರುವುದಾಗಿ ದಾಖಲಿಸಿದ್ದಾರೆ.

    MORE
    GALLERIES

  • 47

    Film Dairy: ನಂಬಿದ್ರೆ ನಂಬಿ, ಈ ಅಜ್ಜ ನೋಡಿದ್ದು ಬರೋಬ್ಬರಿ 470 ಸಿನಿಮಾ! ತಾತನ ಡೈರಿಯಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    ‘ಇದು ನನ್ನ ಅಜ್ಜನ ಅಕ್ಷರ ಪೆಟ್ಟಿಗೆ’ ಎಂದು ಡೈರಿಯನ್ನು ಕರೆದಿರುವ ಅಕ್ಷಿ, ಈ ಲೆಟರ್ ಬಾಕ್ಸ್ ಸಿನಿಮಾ ಬಗ್ಗೆ ನಿಮ್ಮ ಅಭಿರುಚಿಯನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಅಲ್ಲದೇ ನೀವು ವೀಕ್ಷಿಸಿದ ಎಲ್ಲಾ ಸಿನಿಮಾಗಳನ್ನು ದಾಖಲಿಸಲು ಡೈರಿ ಒಂದು ಸಾಧನವಾಗಿದೆ ಎಂದು ಹೇಳಿದ್ದಾರೆ.

    MORE
    GALLERIES

  • 57

    Film Dairy: ನಂಬಿದ್ರೆ ನಂಬಿ, ಈ ಅಜ್ಜ ನೋಡಿದ್ದು ಬರೋಬ್ಬರಿ 470 ಸಿನಿಮಾ! ತಾತನ ಡೈರಿಯಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    ಬಹಳ ವರ್ಷಗಳ ಹಿಂದೆಯೇ ನನ್ನ ತಾತ ತಾವು ವೀಕ್ಷಿಸಿದ ಸಿನಿಮಾದ ಬಗೆಗಿನ ಮಾಹಿತಿಯನ್ನು ನಮೂದಿಸಲು ತಮ್ಮದೇ ಆದ ಡೈರಿಯನ್ನು ಬಳಸುತ್ತಿದ್ದರು. ಅವರು ಹಿಚ್‌ಕಾಕ್ ಮತ್ತು ಜೇಮ್ಸ್‌ ಬಾಂಡ್‌ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಿದ್ದಾರೆ ಎಂದು ತಿಳಿದು ನನಗೆ ಅಚ್ಚರಿಯಾಗಿದೆ ಎಂದು ಅಕ್ಷಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    MORE
    GALLERIES

  • 67

    Film Dairy: ನಂಬಿದ್ರೆ ನಂಬಿ, ಈ ಅಜ್ಜ ನೋಡಿದ್ದು ಬರೋಬ್ಬರಿ 470 ಸಿನಿಮಾ! ತಾತನ ಡೈರಿಯಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    ಅಕ್ಷಿ ಪೋಸ್ಟ್‌ ಮಾಡಿರುವ ಈ ಟ್ವೀಟ್‌ ಟ್ವಿಟ್ಟರ್‌ನಲ್ಲಿ ಸಾವಿರಾರು ಜನರ ಮನಸೆಳೆದಿದ್ದು, ಅನೇಕರು ಅಜ್ಜನ ಸಿನಿಮಾಸಕ್ತಿಗೆ ಬೆರಗುಗೊಂಡಿದ್ದಾರೆ.

    MORE
    GALLERIES

  • 77

    Film Dairy: ನಂಬಿದ್ರೆ ನಂಬಿ, ಈ ಅಜ್ಜ ನೋಡಿದ್ದು ಬರೋಬ್ಬರಿ 470 ಸಿನಿಮಾ! ತಾತನ ಡೈರಿಯಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    ಕೆಲವರು ‘ಈ ಡೈರಿ ತುಂಬಾ ಅಮೂಲ್ಯವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ ಇನ್ನೂ ಕೆಲವರು ‘ಅಜ್ಜನ ಹುಚ್ಚುತನಕ್ಕೆ ಮೆಚ್ಚಲೇಬೇಕು’ ಎಂದು ಕಾಮೆಂಟ್ ಮಾಡಿದ್ದಾರೆ.

    MORE
    GALLERIES