ಅಮೃತಸರದ ಹೆರಿಟೇಜ್ ಸ್ಟ್ರೀಟ್ ಬಳಿ ಗುರುವಾರ ಮುಂಜಾನೆ 1 ಗಂಟೆಯ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಇದು ಕಳೆದ ಐದು ದಿನಗಳಲ್ಲಿ ನಡೆದ ಮೂರನೇ ಸ್ಫೋಟ ಆಗಿದೆ ಎಂದು ತಿಳಿದು ಬಂದಿದೆ.
2/ 7
ಈ ಹಿಂದೆ ಮೊದಲ ಸ್ಫೋಟ ಮೇ 6 ಮತ್ತು ಎರಡನೇ ಸ್ಫೋಟ ಕಳೆದ ಸೋಮವಾರ ಸಂಭವಿಸಿತ್ತು. ಅದರ ನಂತರ ಪೊಲೀಸರು ಅಲರ್ಟ್ ಆಗಿದ್ದರು. ಅದಾಗ್ಯೂ ಪುನಃ ಸ್ಫೋಟ ಸಂಭವಿಸಿದೆ.
3/ 7
ಇಂದು ಕಡಿಮೆ ತೀವ್ರತೆಯಲ್ಲಿ ಸ್ಫೋಟ ಸಂಭವಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಮುಂದಾಗುವ ಎಲ್ಲಾ ಅಪಾಯಗಳನ್ನು ತಪ್ಪಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.
4/ 7
ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಪಂಜಾಬ್ ಪೊಲೀಸರು ಸ್ಫೋಟ ನಡೆದ ಸ್ಥಳದಲ್ಲಿ ವಿಧಿವಿಜ್ಞಾನ ಮಾದರಿಗಳನ್ನು ಸಂಗ್ರಹಿಸಿ ತನಿಖೆಗಾಗಿ ಎಲ್ಲಾ ಸಾಕ್ಷ್ಯಗಳನ್ನು ರವಾನೆ ಮಾಡಿದ್ದಾರೆ.
5/ 7
ಪದೇ ಪದೇ ಸಂಭವಿಸುತ್ತಿರುವ ಸ್ಫೋಟದಿಂದ ಜನರಲ್ಲೂ ಕೂಡ ಆತಂಕ ಸೃಷ್ಟಿಯಾಗಿದ್ದು, ಮನೆಯಿಂದ ಹೊರ ಬರೋಕೂ ಭಯ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
6/ 7
ಇನ್ನು ಘಟನೆಗ ಸಂಬಂಧಿಸಿದಂತೆ ಈ ವರೆಗೆ ಐದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
7/ 7
ಅಲ್ಲದೇ, ಸಿಎಂ ಭಗವಂತ್ ಮಾನೆ ಅವರ ನಿರ್ದೇಶನದಂತೆ ಪಂಜಾಬ್‌ನಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ರಾಜ್ಯ ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರು ಹೇಳಿದ್ದಾರೆ.
First published:
17
Golden Temple Case: ಪಂಜಾಬ್‌ನ ಗೋಲ್ಡನ್ ಟೆಂಪಲ್ ಬಳಿ ಮತ್ತೆ ಸ್ಫೋಟ! ಐವರನ್ನು ಬಂಧಿಸಿದ ಪೊಲೀಸರು