ಉದ್ಯಮ ಎಂದರೆ ಹಾವು ಏಣಿ ಆಟದಂತೆ. ಒಮ್ಮೆ ಯಶಸ್ಸು ಕಂಡರೆ ಮತ್ತೊಮ್ಮೆ ಸೋಲಿನ ಮುಖ ತೋರುತ್ತದೆ. ಆ ಒಂದು ಸೋಲು ಜೀವವನ್ನೇ ಕಳೆದುಕೊಳ್ಳುವಂತಹ ಮಾನಸಿಕ ತೋಳಲಾಟ ಸೃಷ್ಟಿಸುತ್ತದೆ. ಉದ್ಯಮ ಹುಟ್ಟುಹಾಕುವಲ್ಲಿ ತೋರಿದ ಸಾಹಸ ಆ ಒಂದು ಕ್ಷಣದಲ್ಲಿ ಜೀವವನ್ನೇ ಕಳೆದುಕೊಳ್ಳುವಂತಹ ದುರ್ಬಲ ಮನಸ್ಥಿತಿ ತಳ್ಳಿಬಿಡುತ್ತದೆ. ಇಂತಹ ದುರಂತ ಉದ್ಯಮಿಗಳ ಕಥೆಗಳು ಇಲ್ಲಿವೆ
News18 | July 31, 2019, 5:32 PM IST
1/ 6
ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಅಳಿಯ ವಿಜಿ ಸಿದ್ಧಾರ್ಥ್ ಜು.29ರ ಸಂಜೆ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದರು. 36ಗಂಟೆಗಳ ಶೋಧದ ಬಳಿಕ ಅವರ ಮೃತದೇಹ ಬುಧವಾರ ಬೆಳಗ್ಗೆ ಪತ್ತೆಯಾಗಿದೆ. ದೇಶಕ್ಕೆ ದಿಗ್ಭ್ರಮೆ ಮೂಡಿಸಿದ ಅವರ ಸಾವಿನ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾವಿಗೂ ಮುನ್ನ ಸಿದ್ದಾರ್ಥ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ, ತಮ್ಮ ಉದ್ಯಮವನ್ನು ಲಾಭಾದಾಯಕವಾಗಿ ನಡೆಸುವಲ್ಲಿ ಸೋತಿದ್ದೇನೆ. ಸಾಕಷ್ಟು ಹೋರಾಟದ ನಂತರ ನಾನು ಕೈ ಚೆಲ್ಲುತ್ತಿದ್ದೇನೆ. ನನ್ನ ಷೇರುಗಳನ್ನು ಹಿಂಪಡೆಯಲು ನನಗೆ ಒತ್ತಡ ಇದೆ. ಹಿಂದಿನ ಐಟಿ ಡಿಜಿಯಿಂದಲೂ ತುಂಬಾ ಕಿರುಕುಳ ಆಗುತ್ತಿದೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2/ 6
ವಿನಿತ್ ವಿಗ್: ಎನ್ಸೈಕ್ಲೋಪಿಡಿಯಾ ಬ್ರಿಟಾನಿಕ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೂಡ 2016ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. 47 ವರ್ಷದ ವಿನಿತ್ ಗುರುಗಾವ್ನ ತಮ್ಮ ಅಪಾರ್ಟ್ಮೆಂಟ್ನಿಂದ ಹಾರಿ ಜೀವ ಕಳೆದುಕೊಂಡಿದ್ದರು. ಸಾವಿಗೂ ಮುನ್ನ ಬರೆದ ಡೆತ್ನೋಟ್ನಲ್ಲಿ ನನ್ನ ಜೀವವನ್ನು ನಾನೇ ಕಳೆದುಕೊಳ್ಳುತ್ತಿದ್ದೇನೆ. ಇದಕ್ಕೆ ಯಾರು ಹೊಣೆಯಲ್ಲ. ನಾನು ಖಿನ್ನನಾಗಿದ್ದೇನೆ, ನನ್ನನ್ನು ಕ್ಷಮಿಸಿ, ಸಾವಿನ ಹೊರತಾಗಿ ನನಗೆ ಬೇರೆ ದಾರಿ ಕಾಣುತ್ತಿಲ್ಲ. ಹೌದು ನಾನು ಹೇಡಿ. ಜೀವನವನ್ನು ಎದುರಿಸಬೇಕಿತ್ತು ಎಂದು ಬರೆದಿದ್ದರು. (ಚಿತ್ರ ಕೃಪೆ: ಫೇಸ್ಬುಕ್)
3/ 6
ಲಲಿತ್ ಸೇತ್: ಭಾರತದ ಪ್ರಮುಖ ಸಾರಿಗೆ ಸೇವೆ ನೀಡುತ್ತಿದ್ದ ರಾಜ್ ಟ್ರಾವೆಲ್ಸ್ ಮಾಲೀಕ ಲಲಿತ್ ಸೇತ್ ಕೂಡ 2012ರಲ್ಲಿ ತಮ್ಮ ಬದುಕನ್ನು ತಾವೇ ಕೊನೆಗಾಣಿಸಿಕೊಂಡರು. 56 ವರ್ಷದ ಲಲಿತ್ ಸೇತ್ ಮುಂಬೈನಲ್ಲಿನ ಬಾಂದ್ರ ವೋರ್ಲಿ ಬ್ರಿಡ್ಜ್ನಿಂದ ಬಿದಿದ್ದರು. ಆರ್ಥಿಕ ಮುಗ್ಗಟ್ಟಿನಿಂದ ಈ ರೀತಿಯ ಕಠೋರ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು (ಚಿತ್ರ ಕೃಪೆ: ನ್ಯೂಸ್ 18)
4/ 6
ಅಂಗದ್ ಪೌಲ್ : ಕೋಟ್ಯಾಧಿಪತಿ ಸ್ಟೀಲ್ ಉದ್ಯಮಿ ಸ್ವರಾಜ್ ಪೌಲ್ ಮಗ ಅಂಗದ್ ಪೌಲ್ (45) ಲಂಡನ್ನಲ್ಲಿನ ತಮ್ಮ ಐಷಾರಾಮಿ ಮನೆಯಿಂದಲೇ ಹಾರಿ ಜೀವ ಕಳೆದುಕೊಂಡಿದ್ದರು. ತಮ್ಮ ಕೌಟಂಬಿಕ ಉದ್ಯಮದಲ್ಲಿ ಹೊಂದಿದ ನಷ್ಟದಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದರು.
5/ 6
ಸಜನ್ ಪರಿಯಿಲ್ : ಕಣ್ಣೂರು ಮೂಲದ 48 ವರ್ಷದ ಸಜನ್, ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಭಾರತದಲ್ಲಿ ಸ್ವ ಉದ್ಯೋಗ ಆರಂಭಿಸಬೇಕು ಎಂದು ಕೇರಳಕ್ಕೆ ಆಗಮಿಸಿದ ಅವರು ಸಾವಿಗೆ ಶರಣಾಗಿದ್ದರು. ಆಡಿಟೋರಿಯಣ ನಿರ್ಮಾಣಕ್ಕೆ ಮುಂದಾಗಿದ್ದ ಸಜನ್ಗೆ ಕಣ್ಣೂರಿನ ಅಂತೂರ್ನ ಸ್ಥಳೀಯ ಆಡಳಿತ ಪರವಾನಿಗೆ ನೀಡಿರಲಿಲ್ಲ.
6/ 6
ಲಕ್ಕಿ ಗುಪ್ತ ಅಗರ್ವಾಲ್ : 33 ವರ್ಷದ ಉದ್ಯಮಿಯಾಗಿದ್ದ ಟೆಕ್ಕಿ 2016ರಲ್ಲಿ ನೈಟ್ರೋಜನ್ ಅನಿಲ ಸೇವಿಸಿ ಸಾವನ್ನಪ್ಪಿದರು. ತಮ್ಮ ಸ್ಟಾರ್ಟ್ ಅಪ್ ಕ್ವಿಕ್ಡಮ್ ಐಟಿಇಎಸ್ ಪ್ರೈವೇಟ್ ಲಿಮಿಟೆಡ್ ನಷ್ಟಹೊಂದಿದ ಬಳಿಯ ಇಂತಹ ನಿರ್ಧಾರಕ್ಕೆ ಅವರು ಬಂದಿದ್ದರು.